More

    ‘ದೇವಸ್ಥಾನಕ್ಕಾಗಿ ಇರೋ ಸೂರನ್ನೇ ದಾನಮಾಡಿದ, ಅಪರಾಧವನ್ನೇ ಕಾಣದ ಊರಲ್ಲಿ ಛೇ ಇದೆಂಥ ನೀಚ ಕೃತ್ಯ!’

    ಜಮಖಂಡಿ (ಬಾಗಲಕೋಟೆ): ಮೂರು ಎಕರೆ 21 ಗುಂಟೆ ಜಾಗಕ್ಕಾಗಿ ಬಾಗಲಕೋಟೆಯ ಜಮಖಂಡಿಯ ಮಧುರಖಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಗ್ರಾಮವನ್ನೇ ತಲ್ಲಣಗೊಳಿಸಿದೆ.

    ಎರಡು ಕುಟುಂಬಗಳ ನಡುವೆ ಉಂಟಾಗಿರುವ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ. ಇದರಿಂದ ಗ್ರಾಮದಲ್ಲಿ ಸ್ಮಶಾನಮೌನ ಆವರಿಸಿದೆ.

    50 ವರ್ಷಗಳಿಂದ ಒಂದೇ ಒಂದು ಕೊಲೆ ಕಾಣದ ಊರಲ್ಲಿ ಈಗ ನಾಲ್ವರು ಹೆಣವಾಗಿದ್ದಾರೆ. 1972 ರಲ್ಲಿ ಗ್ರಾಮದಲ್ಲಿ ಗಲಾಟೆ ನಡೆದು ಇಬ್ಬರ ಕೊಲೆ ಆಗಿತ್ತು. ಅದನ್ನು ಬಿಟ್ಟರೆ ಅಪರಾಧ ಪ್ರಕರಣವಾಗಲೀ, ಕೊಲೆಯೆಂಬುದು ಇಲ್ಲದ ಊರಿದು. ಆದರೆ ಇದೀಗ ಆಸ್ತಿಗಾಗಿ ಇಂಥ ಕೃತ್ಯ ನಡೆದಿದೆ ಎಂದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    ‘ಕಲೆ, ಸಾಹಿತ್ಯ, ಧಾರ್ಮಿಕತೆಯಲ್ಲಿ ಹೆಸರುವಾಸಿ ಆಗಿರುವ ಗ್ರಾಮ ನಮ್ಮದು. ಇತ್ತೀಚಿಗಷ್ಟೆ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ರಸ್ತೆಗಾಗಿ ಗ್ರಾಮದ ಅನೇಕರು ಸ್ವಯಂ ಸ್ಫೂರ್ತಿಯಿಂದ ತಮ್ಮ ಮನೆಗಳನ್ನು ಬಿಟ್ಟುಕೊಟ್ಟು ಉದಾರತೆ ಮೆರೆದಿದ್ದರು. ಬೇರೆ ಮನೆಯಿಲ್ಲದ ಬಡವರು ಸಹ ದೇವಸ್ಥಾನಕ್ಕಾಗಿ ಇದ್ದೊಂದು ಮನೆಯನ್ನೇ ದಾನ ಮಾಡಿದ್ದರು. ಅಂಥ ದೈವಿಭಕ್ತಿಯಿರುವ ಗ್ರಾಮ ನಮ್ಮದು. ಇಂಥ ಗ್ರಾಮದಲ್ಲಿ ಇದೀಗ ಜಮೀನು ವಿವಾದ ನಾಲ್ಕು ಜನರ ಕೊಲೆಗೆ ಕಾರಣವಾಗಿದೆ. ಇದು ತಮ್ಮೂರಿಗೆ ಕೆಟ್ಟ ಹೆಸರು ತಂದಿದೆ ಎಂದು ಗ್ರಾಮದ ಹಿರಿಕ ಉಮೇಶ ಸಿದರಡ್ಡಿ ದುಃಖಿತರಾಗಿದ್ದಾರೆ.

    ಏನಿದು ಘಟನೆ?: ಈ ಕೆಳಗೆ ಇದೆ ನೋಡಿ ವಿವರ- 3 ಎಕರೆಗಾರಿ ನಾಲ್ವರು ಸಹೋದರರ ಭೀಕರ ಹತ್ಯೆ

    3 ಎಕರೆಗಾಗಿ ನಾಲ್ವರು ಸಹೋದರರ ಭೀಕರ ಹತ್ಯೆ: ನೋಡಲಾಗುತ್ತಿಲ್ಲ ಹೆತ್ತಾಕೆಯ ಕಣ್ಣೀರು- 9 ಮಂದಿ ಅರೆಸ್ಟ್‌

    ಬಿಗ್‌ಬಾಸ್‌ ಸ್ಪರ್ಧಿ, ನಟ ಅರ್ಮಾನ್‌ಗೆ ಬಿಗ್‌ ಶಾಕ್‌- ಡ್ರಗ್ಸ್‌ ಕೇಸ್‌ನಲ್ಲಿ ಎನ್‌ಸಿಬಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts