More

    ಪ್ರತಿಭಟನೆ ಹೆಸರಲ್ಲಿ ನಡೆದ ಹಿಂಸಾಚಾರದ ನಂತರ ಸ್ಫೋಟಿಸಿದ್ದು ನಾವೇ ಎಂದು ಒಪ್ಪಿಕೊಂಡ ಜೈಷ್​ ಸಂಘಟನೆ!

    ನವದೆಹಲಿ: ಗಣರಾಜ್ಯೋತ್ಸವದ ದಿನದಂದು ರೈತರ ಸೋಗಿನಲ್ಲಿ ಬಂದು ನಡೆಸಿದ ಹಿಂಸಾಚಾರದ ಬೆನ್ನಲ್ಲೇ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಭಾರಿ ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಭಾರಿ ಭದ್ರತೆ ಇರುವ ಈ ಪ್ರದೇಶದಲ್ಲಿ ಬಾಂಬ್​ ಸ್ಫೋಟ ನಡೆದಿರುವುದು ಹೇಗೆ ಎಂಬ ಬಗ್ಗೆ ತನಿಖೆ ಶುರುವಾಗಿದೆ.

    ಇದರ ಬೆನ್ನಲ್ಲೇ ಈ ಸ್ಫೋಟದ ಹೊಣೆಯನ್ನು ಉಗ್ರ ಸಂಘಟನೆಯಾಗಿರುವ ಜೈಷ್-ಉಲ್-ಹಿಂದ್ ಹೊತ್ತಿರುವುದಾಗಿ ವರದಿಯಾಗಿದೆ. ಸ್ಫೋಟದ ಹೊಣೆ ಹೊತ್ತುಕೊಂಡು ಈ ಸಂಘಟನೆ ವಾಹಿನಿಯೊಂದರ ಟೆಲಿಗ್ರಾಂ ಚಾಟ್​ನಲ್ಲಿ ನೀಡಿರುವ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿವೆ.

    ಸಂಜೆ 5 ಗಂಟೆ ಸುಮಾರಿಗೆ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಜಿಂದಾಲ್ ಹೌಸ್ ಬಳಿ ಲಘು ಬಾಂಬ್ ಸ್ಫೋಟ ಸಂಭವಿಸಿತ್ತು. ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದರಿಂದಾಗಿ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಇಸ್ರೇಲ್ ರಾಯಭಾರಿ ಕಚೇರಿಯಿಂದ ಕೇವಲ 2 ಕಿಮೀ ದೂರದಲ್ಲಿಯೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

    ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಟ ನಡೆಸಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು ತನಿಖೆ ಶುರುವಾಗಿದೆ. ಇದರ ಬೆನ್ನಲ್ಲೇ ಇದೀಗ ಉಗ್ರ ಸಂಘಟನೆ ಇದರ ಹೊಣೆಯನ್ನು ಹೊತ್ತಿದೆ.

    ಆಟೋದಲ್ಲಿ ಬಂದಿರುವ ವ್ಯಕ್ತಿಯೊಬ್ಬ ಇಬ್ಬರು ವ್ಯಕ್ತಿಗಳನ್ನು ಸ್ಥಳಕ್ಕೆ ಡ್ರಾಪ್ ಮಾಡಿದ್ದು, ಈ ಇಬ್ಬರು ವ್ಯಕ್ತಿಗಳು ಸ್ಫೋಟಗೊಂಡ ಸ್ಥಳಕ್ಕೆ ತೆರಳಿರುವುದು ಕಂಡು ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ, ಪ್ರಮುಖ ಪರಮಾಣು ಮತ್ತು ವೈಮಾನಿಕ ಸ್ಥಾವರಗಳು, ದೆಹಲಿ ಮೆಟ್ರೋ ಮತ್ತು ಕೇಂದ್ರ ಸರ್ಕಾರಿ ಕಟ್ಟಡಗಳ ಮೇಲೆ ನಿಗಾ ಇಡಲಾಗಿದೆ.

    ಪ್ರತಿಭಟನೆಗೆ ಪಾಕ್​ನಿಂದ ಶಸ್ತ್ರಾಸ್ತ್ರ ಪೂರೈಕೆ: ಸ್ಫೋಟಕ ಮಾಹಿತಿ ನೀಡಿದ ಪಂಜಾಬ್​ ಸಿಎಂ

    ಪ್ರತಿಭಟನೆ ಬೆನ್ನಲ್ಲೇ ದೆಹಲಿಯಲ್ಲಿ ಸ್ಫೋಟ: ಆಟೋದಲ್ಲಿ ಬಂದು ಕೃತ್ಯ! ಸಿಸಿಟಿವಿಯಲ್ಲಿ ಸಿಕ್ತು ಸುಳಿವು

    ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts