More

    ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​

    ನವದೆಹಲಿ: ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆಯ ಹೆಸರಿನಲ್ಲಿ ನಡೆದಿರುವ ಹಿಂಸಾಚಾರದ ಒಂದೊಂದೇ ಭಯಾನಕ ಅಂಶಗಳು ಇದೀಗ ಬೆಳಕಿಗೆ ಬರುತ್ತಿವೆ.

    ಇದೀಗ ರೈತರ ಟ್ರ್ಯಾಕ್ಟರ್‌ ರ್ಯಾಲಿ ವೇಳೆ ನಡೆದ ಕೆಂಪುಕೋಟೆಯ ಮೇಲಿನ ಸಿಖ್‌ ಧ್ವಜ ಹಾರಿಸಿದ ಘಟನೆಗೆ ನಿಷೇಧಿತ ಸಿಖ್‌ ಸಂಘಟನೆಯಾದ ‘ಸಿಖ್‌ ಫಾರ್‌ ಜಸ್ಟೀಸ್‌’ ಅತೀವ ಹರ್ಷ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದ ದಿನ ಸಿಖ್​ ಬಾವುಟ ಹಾರಿಸಿದರೆ ಅವರಿಗೆ 2.5 ಲಕ್ಷ ಡಾಲರ್​ (ಅಂದರೆ ಸುಮಾರು 1.82 ಕೋಟಿ ರೂಪಾಯಿ) ಬಹುಮಾನ ಘೋಷಿಸಿರುವ ಪತ್ರವೊಂದು ಇದೀಗ ವೈರಲ್​ ಆಗಿದೆ.

    ಇದೇ 11ರಂದು ಬರೆದಿರುವ ಪತ್ರ ಇದಾಗಿದೆ. ಈ ಪತ್ರದಲ್ಲಿ ತಿಳಿಸಿರುವಂತೆ ಯಾರು ಇಂಡಿಯಾಗೇಟ್​ ಮೇಲೆ ಸಿಖ್​ ಧ್ವಜವನ್ನು ಹಾರಿಸುತ್ತಾರೋ ಅವರಿಗೆ 2.5 ಲಕ್ಷ ಡಾಲರ್​ ಬಹುಮಾನ ಎಂದು ಬರೆಯಲಾಗಿದೆ. ಇದೀಗ ಇದರ ವಿಡಿಯೋ ಕೂಡ ವೈರಲ್​ ಆಗಿದ್ದು, ಅದರಲ್ಲಿ ಕೆಂಪುಕೋಟೆ ಮೇಲೆ ಬಾವುಟ ಹಾರಿಸಿರುವ ಬಗ್ಗೆ ಅತ್ಯಂತ ಹರ್ಷ ವ್ಯಕ್ತಪಡಿಸಿರುವ ಸಂಘಟನೆ ಧ್ವಜ ಹಾರಿಸಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದೆ.

    ಈ ಕುರಿತು 7 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಬಜೆಟ್‌ ಅಧಿವೇಶನದ ವೇಳೆ ಸಂಸತ್ತಿಗೆ ಮುತ್ತಿಗೆ ಹಾಕುವಂತೆಯೂ ಪ್ರತಿಭಟನಾಕಾರರಿಗೆ ಕರೆ ನೀಡಿದೆ.

    ಗಣರಾಜ್ಯೋತ್ಸವದ ದಿನ ಸಿಖ್‌ ಧ್ವಜ ಹಾರಿಸಿದವರಿಗೆ ಕೋಟಿ ರೂ ಬಹುಮಾನ: ಪತ್ರ ವೈರಲ್​


    ಇಂಥದ್ದೊಂದು ಸಂಚು ರೂಪಿಸಿರುವ ಬಗ್ಗೆ 20 ದಿನಗಳ ಹಿಂದೆಯೇ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕರ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಸಲಾಗಿತ್ತು ಎನ್ನಲಾಗಿದೆ.
    ದೆಹಲಿಯ 8 ಉನ್ನತ ಪೊಲೀಸ್ ಅಧಿಕಾರಿಗಳು, 12 ಐಬಿಯ ಉನ್ನತಾಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಕೆಂಪುಕೋಟೆಯಲ್ಲಿ ಸಿಖ್ ಪ್ರತ್ಯೇಕತಾ ಸಂಘಟನೆಯ ಧ್ವಜ ಹಾರಾಟದ ವ್ಯವಸ್ಥೆ ಹಾಗೂ ಅದಕ್ಕೆ ಪ್ರತಿಯಾಗಿ ಮಾಡಬೇಕಾದ ತಂತ್ರಗಳ ಕುರಿತಂತೆ ಚರ್ಚೆ ನಡೆಸಲಾಗಿತ್ತು ಎಂದು ಕೇಳಿಬಂದಿದೆ.

    ಆದರೆ ವಿಪರೀತ ಸಂಖ್ಯೆಯಲ್ಲಿ ರೈತರ ಸೋಗಿನಲ್ಲಿ ಟ್ರ್ಯಾಕ್ಟರ್​ ಏರಿ ಬಂದು ಹಿಂಸಾಚಾರದಲ್ಲಿ ತೊಡಗಿಸಿಕೊಂಡು ಅದರ ನಡುವೆಯೇ ಧ್ವಜವನ್ನೂ ಏರಿಸಲಾಗಿದೆ. ಮೊದಲೇ ಇಂಥ ಘಟನೆಯ ಕುರಿತು ಅರಿವಿದ್ದರೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದರೂ ಇದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ.

    ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಗೆ ಭಾರತ ನಿಷೇಧ ಹೇರಿದೆ. ಆದರೆ ಇದು ಈಗ ಅಮೆರಿಕದ ನ್ಯೂಯಾರ್ಕ್​ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದೆ. ಪಂಜಾಬನ್ನು ಭಾರತದಿಂದ ವಿಭಜಿಸಿ ಪ್ರತ್ಯೇಕ ಖಲಿಸ್ತಾನ ಸ್ಥಾಪನೆ ಮಾಡಬೇಕು ಎಂಬುದು ಸಂಘಟನೆಯ ಧ್ಯೇಯ. ಇದಾಗಲೇ ಘಟನೆಗೆ ಸಂಬಂಧಿಸಿದಂತೆ ಪರಾರಿಯಾಗಿರುವ ಪಂಜಾಬಿ ನಟ ದೀಪ್​ ಸಿಧು ಕೂಡ ಈ ಸಂಘಟನೆಯ ಜತೆ ಗುರುತಿಸಿಕೊಂಡಿದ್ದಾರೆ.

    ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಅಮೆರಿಕ ಮೂಲದ ಎಸ್ ಎಫ್ ಜೆ ಗುಂಪೊಂದು 2007ರಲ್ಲಿ ಸ್ಥಾಪನೆಯಾಗಿದ್ದು, ಗಣರಾಜ್ಯೋತ್ಸವ ದಿನದಿಂದ ಕೆಂಪುಕೋಟೆಯಲ್ಲಿ ಖಲಿಸ್ತಾನ್ ಧ್ವಜ ಹಾರಾಟ ನಡೆಸಿದರೆ 2,50, 000 ಹಾಗೂ ಫೆಬ್ರವರಿ 1 ರಂದು ಭಾರತದ ಸಂಸತ್ ಮೇಲೆ ಖಲಿಸ್ತಾನ್ ಧ್ವಜ ಹಾರಾಟ ನಡೆಸಿದರೆ 3,50,000 ಬಹುಮಾನದ ಘೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts