More

    ಜೈಷ್​ ಕಮಾಂಡರ್​ನನ್ನು ಹೊಡೆದುರುಳಿಸಿದ ಭಾರತೀಯ ಸೇನೆ- ಯುವಕರನ್ನು ಉಗ್ರರನ್ನಾಗಿಸುತ್ತಿದ್ದ ಪಾತಕಿ ಈತ

    ಶ್ರೀನಗರ: ಕಳೆದ ಮೂರು ದಿನಗಳಿಂದ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಇಂದು ಈ ಕಾಳಗಕ್ಕೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಮೃತಪಟ್ಟಿದ್ದಾನೆ.

    ಭಾರತೀಯ ಸೇನೆಯ ಮೇಲೆ ಗುಂಡು ಹಾರಿಸಲು ಬಂದಿದ್ದ ಸಜಾದ್ ಅಫ್ಘಾನಿಯನ್ನ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈತನ ಜತೆಗೆ ಇನ್ನಿಬ್ಬರು ಉಗ್ರರನ್ನು ಸೇನೆ ಸದೆಬಡಿದಿದೆ.

    ಈ ಕುರಿತು ಕಾಶ್ಮೀರದ ಇನ್ಸ್​ಪೆಕ್ಟರ್​ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಶೋಪಿಯನ್ ಜಿಲ್ಲೆಯ ರಾವಲ್‌ ಪೋರಾ ಗ್ರಾಮದಲ್ಲಿ ಶುಕ್ರವಾರ ಖಚಿತ ಮಾಹಿತಿಯ ಮೇರೆಗೆ ಸೇನೆ ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿತ್ತು. ಮೂರು ದಿನಗಳು ಸತತ ಕಾರ್ಯಾಚರಣೆ ನಡೆದಿದೆ.

    ಇದೇ ವೇಳೆ ಉಗ್ರರು ಗುಂಡಿನ ಕಾಳಗ ನಡೆಸಲು ಶುರು ಮಾಡಿದ್ದರು. ಮಾತ್ರವಲ್ಲದೇ ಕಲ್ಲು ತೂರಾಟವೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಇಂಟರ್​ನೆಟ್​ ಸೇವೆ ಸ್ಥಗಿತ ಸೇರಿದಂತೆ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ.

    ಈ ನಡುವೆಯೇ ಕಾಳಗ ತೀವ್ರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಕಾಶ್ಮೀರದಲ್ಲಿ ಅದರಲ್ಲಿಯೂ ವಿಶೇಷವಾಗಿ ಶೋಪಿಯಾನ್​ನಲ್ಲಿ ಉಗ್ರರ ನೇಮಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸಜಾದ್ ಅಫ್ಘಾನಿಯನ್ನು ಹೊಡೆದುರುಳಿಸುವುದು ಭಾರತೀಯ ಸೇನೆಗೆ ಅನಿವಾರ್ಯವಾಗಿತ್ತು. ಕೊನೆಗೂ ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ.

    ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿರುವ ಇನ್ಸ್​ಪೆಕ್ಟರ್​ ಜನರಲ್ ವಿಜಯ್ ಕುಮಾರ್, ಈತನ ಹತ್ಯೆ ಭದ್ರತಾ ಪಡೆಗಳಿಗೆ ದೊರಕಿರುವ ದೊಡ್ಡ ಯಶಸ್ಸು. ಕಾರ್ಯಾಚರಣೆಯಲ್ಲಿ ಯಶಸ್ವಿ ಕಂಡ ಭದ್ರತಾ ಪಡೆ ಹಾಗೂ ಪೊಲೀಸರಿಗೆ ಅಭಿನಂದನೆಗಳು ಎಂದಿದ್ದಾರೆ.

    ಗಂಡನ ಆಸ್ತಿಯಲ್ಲಿ ಆತ ಬದುಕಿರುವಾಗಲೇ ಭಾಗ ಕೇಳುವ ಹಕ್ಕು ಪತ್ನಿಗೆ ಇದೆಯೆ?

    ಆರೋಗ್ಯ ಕೇಂದ್ರದಲ್ಲಿ ಉದ್ಯೋಗ: ಎಸ್​ಎಸ್​ಎಲ್​ಸಿಯಿಂದ ಎಂಬಿಬಿಎಸ್​ವರೆಗೆ ಅವಕಾಶ, ₹1 ಲಕ್ಷದವರೆಗೂ ಸಂಬಳ

    ಹೆಸರೆತ್ತಿದರೆ ಖಾತೆ ಕಟ್, ಪತ್ರಿಕೆಯಲ್ಲಿ ಸಂಭಾವ್ಯರ‌ ಹೆಸರು ಬಂದರೆ ಅಂತಹವರ ಆಕಾಂಕ್ಷೆಗೆ ಕೊಕ್ಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts