More

    ಭಗವದ್ಗೀತೆಗೆ ಮನಸೋತ ಮುಸ್ಲಿಂ ರಾಷ್ಟ್ರ: ಪಾಕಿಸ್ತಾನವಷ್ಟೇ ಅಲ್ಲ… ಅರಬ್‌ ದೇಶಗಳಲ್ಲಿ 15 ಕೋಟಿ ಪ್ರತಿ ಮಾರಾಟ!

    ನವದೆಹಲಿ: ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಜೆ ಜಲಾಲುದ್ದೀನ್ ವಾರಣಾಸಿ ಜೈಲಿನಿಂದ ಬಿಡುಗಡೆ ಹೊಂದಿದ್ದ. ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಪ್ರಕರಣದಲ್ಲಿ ಆತನಿಗೆ 16 ವರ್ಷ ಜೈಲುವಾಸವಾಗಿತ್ತು. ವಾರಣಾಸಿಯ ಜೈಲಿನಲ್ಲಿ ಆತ ಇದ್ದ. ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಆತ ಭಗವದ್ಗೀತೆಯನ್ನು ಖರೀದಿ ಮಾಡಿ ಪಾಕಿಸ್ತಾನಕ್ಕೆ ಕೊಂಡೊಯ್ದಿದ್ದ.

    ಬಂಧನಕ್ಕೊಳಗಾದ ಸಂದರ್ಭದಲ್ಲಿ ಕೇವಲ ಪ್ರೌಢ ಶಿಕ್ಷಣ ಪಡೆದಿದ್ದ ಜಲಾಲುದ್ದೀನ್, ಜೈಲಿನಲ್ಲಿ ಇರುವಾಗಲೇ 10ನೇ ತರಗತಿ ತೇರ್ಗಡೆಯಾಗಿದ್ದಾನೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪಡೆದು, ಜೈಲಿನಲ್ಲಿಯೇ ಎಲೆಕ್ಟ್ರಿಷಿಯನ್ ತರಬೇತಿಯನ್ನೂ ಮುಗಿಸಿ, ಜೈಲಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ.

    ಇಂಥದ್ದೊಂದು ಸಾಧನೆ ಮಾಡಲು ಆತನಿಗೆ ಸ್ಫೂರ್ತಿಯಾದದ್ದು ಭಗವದ್ಗೀತೆ ಎಂದು ಆತ ಹೇಳಿಕೊಂಡಿದ್ದ. ಆದ್ದರಿಂದ ಈ ಪವಿತ್ರ ಗ್ರಂಥವನ್ನು ಸದಾ ನನ್ನ ಬಳಿಯೇ ಇಟ್ಟುಕೊಳ್ಳುವುದಾಗಿ ಆತ ಹೇಳಿ ಅದನ್ನು ಖರೀದಿ ಮಾಡಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದರು.

    ಭಗವದ್ಗೀತೆಗೆ ಮನಸೋತ ಮುಸ್ಲಿಂ ರಾಷ್ಟ್ರ: ಪಾಕಿಸ್ತಾನವಷ್ಟೇ ಅಲ್ಲ... ಅರಬ್‌ ದೇಶಗಳಲ್ಲಿ 15 ಕೋಟಿ ಪ್ರತಿ ಮಾರಾಟ!

    ಇದು ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯ ಪವಾಡ. ಈ ಹೊತ್ತಿಗಾಗಲೇ ಭಗವದ್ಗೀತೆಯು ಉರ್ದುವಿನಲ್ಲಿ ಭಾಷಾಂತರಗೊಂಡು ಪಾಕಿಸ್ತಾನದ ಪ್ರಜೆಗಳ ಮನಸ್ಸನ್ನೂ ಮುಟ್ಟಿಬಿಟ್ಟಿತು. ಎಷ್ಟೋ ಮಂದಿ ಪಾಕಿಸ್ತಾನದಲ್ಲಿರುವ ಹಿಂದೂಗಳಷ್ಟೇ ಅಲ್ಲ… ಮುಸ್ಲಿಮರೇ ಈ ಪವಿತ್ರಗ್ರಂಥಕ್ಕೆ ಮನಸೋತಿದ್ದು, ಈ ಬಗ್ಗೆ ತಮ್ಮ ಅನುಭವಗಳನ್ನು ಬರೆದುಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಇದಾಗಲೇ ಸಾಕಷ್ಟು ವೈರಲ್‌ ಆಗಿದೆ. ಈ ಗ್ರಂಥ ತಮ್ಮ ಕಠೋರ ಮನಸ್ಥಿತಿಯನ್ನು ಹೇಗೆ ಪರಿವರ್ತನೆ ಮಾಡಿದೆ ಎಂಬ ಬಗ್ಗೆ ಹಲವರು ತನ್ನ ಅನುಭವ ಹಂಚಿಕೊಂಡಿದ್ದಾರೆ.

    ಇದೀಗ ಮತ್ತೊಂದು ಪವಾಡ ನಡೆದಿದೆ. ಅದೇನೆಂದರೆ ಇಸ್ಕಾನ್ ಸಂಸ್ಥೆಯಿಂದ ಭಗವಗ್ದೀತೆಯ ಅರೇಬಿಕ್‌ ಭಾಷೆಯ ಭಾಷಾಂತರವಾಗಿದೆ. ವಿಷಯ ಇಷ್ಟೇ ಅಲ್ಲ, ಇದಾಗಲೇ 15 ಕೋಟಿ ಪ್ರತಿಗಳನ್ನು ತಾನು ಅರಬ್‌ ದೇಶಗಳಲ್ಲಿ ಮಾರಾಟ ಮಾಡಿರುವುದಾಗಿ ಇಸ್ಕಾನ್‌ ಹೇಳಿಕೊಂಡಿದೆ!

    ಹಿಂದೊಮ್ಮೆ ಇದೇ ವಿಷಯದ ಕುರಿತಾಗಿ ಅಂದರೆ ಭಗವದ್ಗೀತೆಯು ಅರೇಬಿಕ್‌ ಭಾಷೆಯಲ್ಲಿ ತರ್ಜುಮೆಗೊಂಡಿದೆ ಎಂದಾಗ ಇದು ಸುಳ್ಳು ಸುದ್ದಿ ಎಂದು ಕೆಲವು ವೆಬ್‌ಸೈಟ್‌ಗಳು ಪ್ರಕಟಿಸಿದ್ದವು. ಆದರೆ ಇದೀಗ ಖುದ್ದು ಇಸ್ಕಾನ್‌ ಸಂಸ್ಥೆ ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಜತೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಈ ಕುರಿತು ಟ್ವೀಟ್‌ ಮಾಡಿರುವ ಇಸ್ಕಾನ್‌ನ ರಾಧಾರಾಮನ್‌ ದಾಸ್‌ ಈ ಬಗ್ಗೆ ಬರೆದುಕೊಂಡಿದ್ದಾರೆ.

    ಇಲ್ಲಿದೆ ನೋಡಿ ಟ್ವಿಟರ್‌ನ ಮಾಹಿತಿ

    ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

    ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

    ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ನುಡಿದಿದ್ದಾರೆ 2022ರ ಭವಿಷ್ಯ: ವಿಶ್ವದ ನಿಖರ ಮಾಹಿತಿ ನೀಡುತ್ತಿರುವ ಈಕೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts