More

    ಚಿಕನ್‌ ಕಬಾಬ್‌ನಿಂದ ಸಿಕ್ಕಿಬಿದ್ದ ಐಸಿಸ್‌ ಉಗ್ರ: ಈತನ ಬಂಧನದ ಕಥೆಯೇ ರೋಚಕ!

    ಸ್ಪೇನ್‌: ಇಸ್ಲಾಮಿಕ್ ಸ್ಟೇಟ್ ಉಗ್ರನೊಬ್ಬ ಚಿಕನ್‌ ಕಬಾಬ್‌ ಪ್ರೀತಿಯಿಂದಾಗಿ ಸಿಕ್ಕಿಬಿದ್ದಿರುವ ಕುತೂಹಲ ಘಟನೆ ಸ್ಪೇನ್‌ನಲ್ಲಿ ನಡೆದಿದೆ.

    31 ವರ್ಷದ ಅಬ್ದುಲ್ ಮಜೀದ್ ಅಬ್ದೇಲ್‌ ಬ್ಯಾರಿ ಎಂಬಾತ ಸಿಕ್ಕಿಬಿದ್ದಾತ. ಸಿರಿಯಾದ‌ಲ್ಲಿ ಐಸಿಸ್‌ ಸೇರಿಕೊಂಡಿದ್ದ ಈತ ಅಲ್ಲಿಂದ ಸ್ಪೇನ್‌ಗೆ ಬಂದು ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಯಾರಿಗೂ ತಿಳಿಯದಂತೆ ಹಲವಾರು ಭಯೋತ್ಪಾದನಾ ಕಾರ್ಯದಲ್ಲಿ ತೊಡಗಿದ್ದ.

    ಐಸಿಸ್‌ ಉಗ್ರನೊಬ್ಬ ತಮ್ಮ ದೇಶವನ್ನು ಹೊಕ್ಕು ದುಷ್ಕೃತ್ಯ ಎಸಗುತ್ತಿದ್ದಾನೆ ಎಂಬುದು ಪೊಲೀಸರಿಗೆ ತಿಳಿದಿದ್ದರೂ ಆತನನ್ನು ಹಿಡಿಯುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೂ ಅವರು ಹೈ ಅಲರ್ಟ್‌ ಆಗಿದ್ದರು. ಮಾಹಿತಿ ಕಲೆ ಹಾಕಿದಾಗ ಪೊಲೀಸರಿಗೆ ಈತ ಬ್ರಿಟನ್ ಮೂಲದವನು. 2013ಕ್ಕೂ ಮೊದಲೇ ಸಿರಿಯಾ ಸೇರಿಕೊಂಡಿದ್ದನು ಎಂದು ತಿಳಿದಿತ್ತು. ಆದರೆ ಆತ ಎಲ್ಲಿ ಅಡಗಿ ಕುಳಿತಿದ್ದಾನೆ ಎನ್ನುವುದು ತಿಳಿಯುತ್ತಿರಲಿಲ್ಲ.

    ಸಾಮಾಜಿಕ ಜಾಲತಾಣ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇರಿಸಿದ್ದರು. ಆನ್‌ಲೈನ್‌ ಮೂಲಕ ಇವರ ಚಟುವಟಿಕೆ ಹೆಚ್ಚಾಗುತ್ತಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂತು. ಈ ಸಂದರ್ಭದಲ್ಲಿ ಒಂದೇ ವಿಳಾಸದಿಂದ ಪದೇ ಪದೇ ಚಿಕನ್ ಕಬಾಬ್‌ ಆರ್ಡರ್‌ ಆಗುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಸಾಮಾನ್ಯ ಜನರು ಈ ಪರಿಯಲ್ಲಿ ಆರ್ಡರ್‌ ಮಾಡುವುದು ಅಸಾಧ್ಯವೆಂದು ಅರಿತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ನಂತರ ವಿಳಾಸ ಹುಡುಕಿ ಹೋದಾಗ ಅವರ ಅನುಮಾನ ಸರಿಯಾಗಿದೆ. ಅಲ್ಲಿಯೇ ಈ ಉಗ್ರ ಅಡಗಿ ಕುಳಿತಿರುವುದು ತಿಳಿದಿದೆ. ತಂತ್ರಗಾರಿಕೆ ರೂಪಿಸಿ ಉಗ್ರನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಈತ ಆನ್‌ಲೈನ್‌ ಮೂಲಕ ಈ ಪರಿಯ ಕಬಾಬ್‌ ತರಿಸಿಕೊಳ್ಳುತ್ತಿರುವುದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಈತ 130 ಕೆ.ಜಿ ತೂಕವುಳ್ಳವನಾಗಿದ್ದ. ಎದ್ದು ಕುಳಿತು, ಓಡಾಡುವುದು ಕಷ್ಟವಾಗಿದ್ದರಿಂದ ಮನೆಯಿಂದಲೇ ಎಲ್ಲಾ ಉಗ್ರ ಕೃತ್ಯದ ಪ್ಲ್ಯಾನ್‌ ಹಾಕುತ್ತಿದ್ದ.

    ಈತನ ಹಿನ್ನೆಲೆಯನ್ನು ಪೊಲೀಸರು ಹುಡುಕಿದಾಗ ದಢೂತಿ ದೇಹದ ವ್ಯಕ್ತಿ ಇಂಥದ್ದೊಂದು ಕೃತ್ಯ ಮಾಡುತ್ತಿರುವುದು ತಿಳಿದಿದೆ. ನಂತರ ಈ ವ್ಯಕ್ತಿಯನ್ನು ಕಬಾಬ್‌ ಆರ್ಡರ್ ಹಿನ್ನೆಲೆಯಲ್ಲಿ ಬಂಧಿಸಿದಾಗ ಮತ್ತಷ್ಟು ತೂಕ ಹೆಚ್ಚಿಸಿಕೊಂಡಿದ್ದ. ಆತನನ್ನು ಗುರುತಿಸುವುದೂ ಕಷ್ಟವಾಗಿತ್ತು. ಆದರೆ ಆತನ ಕಿವಿಯ ಮೂಲಕ ಈತನೇ ಉಗ್ರ ಎನ್ನುವುದು ಪೊಲೀಸರಿಗೆ ತಿಳಿದಿದೆ.
    ಕೊನೆಗೆ ಆತ ಉಳಿದುಕೊಂಡಿರುವ ಮನೆಯನ್ನು ತಲಾಷ್‌ ಮಾಡಿದಾಗ ಉಗ್ರ ಕೃತ್ಯದಲ್ಲಿ ತೊಡಗಿರುವುದು ಸಾಬೀತಾಗಿ ಅವನನ್ನು ಬಂಧಿಸಲಾಗಿದೆ.

    ಮಹಾಂತ್‌ ಸ್ವಾಮೀಜಿ ಸಾವಿನ ರಹಸ್ಯಕ್ಕೆ ಟ್ವಿಸ್ಟ್‌: ಘಟನೆಗೂ ಮುನ್ನ ವಿಡಿಯೋ ರೆಕಾರ್ಡಿಂಗ್‌

    ಈ ಅರ್ಹತೆಗಳಿವೆಯೆ? ಹಾಗಿದ್ರೆ ನನ್ನ ಸೊಸೆಯಾಗ್ಬೋದು: ಫೇಸ್‌ಬುಕ್‌ನಲ್ಲಿ ವಿವಾದಿತ ಧರ್ಮಗುರು ಆಹ್ವಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts