More

    ಲೈಂಗಿಕ ಕ್ರಿಯೆ ವೇಳೆ ಮನಬಂದಂತೆ ಕಚ್ಚುವ ಪತಿ ವಿರುದ್ಧ ಅರ್ಜಿ: ಹಲ್ಲನ್ನು ತೆಗೆದುಹಾಕುವಂತೆ ಕೋರ್ಟ್‌ ಆದೇಶ

    ಅಹಮದಾಬಾದ್‌: ಪತಿಯ ಅಸ್ವಾಭಾವಿಕ ಲೈಂಗಿಕತೆಯ ವಿರುದ್ಧ ಪತ್ನಿ ಕೋರ್ಟ್‌ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದಂತೆ ಕುತೂಹಲದ ತೀರ್ಪೊಂದನ್ನು ಕೋರ್ಟ್‌ ನೀಡಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಅಸ್ವಾಭಾವಿಕ ಲೈಂಗಿಕತೆಗೆ ಕೃತಕ ಹಲ್ಲು ಬಳಸುತ್ತಿದ್ದುದರಿಂದ ಆ ಹಲ್ಲನ್ನು ಕೀಳುವಂತೆ ಕೋರ್ಟ್‌ ನಿರ್ದೇಶಿಸಿದೆ!

    ಗುಜರಾತ್‌ನ ದೊಡ್ಡ ಆಭರಣ ವ್ಯಾಪಾರಿಯಾಗಿರುವ ಪತಿಯ ವಿರುದ್ಧ ಪತ್ನಿ ಕೋರ್ಟ್‌ ಮೊರೆ ಹೋಗಿದ್ದರು. ಈ ವ್ಯಾಪಾರಿಯ ಮೊದಲ ಪತ್ನಿ ಕರೊನಾದಿಂದ ಮೃತಪಟ್ಟ ನಂತರ ಸಂತ್ರಸ್ತೆಯ ಜತೆ ಎರಡನೆಯ ವಿವಾಹವಾಗಿದ್ದ. ಈತನಿಗೆ 67 ವರ್ಷ ವಯಸ್ಸಾಗಿದ್ದರೆ, ಪತ್ನಿಗೆ 40 ವರ್ಷ ವಯಸ್ಸು. ಇವರ ಮದುವೆ ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ನಡೆದಿದೆ.

    ಮದುವೆಯ ನಂತರ ಪತಿಗೆ ಲೈಂಗಿಕತೆಯಲ್ಲಿ ವಿಪರೀತ ಆಸಕ್ತಿಯಿದ್ದು, ಅಸ್ವಾಭಾವಿಕ ಲೈಂಗಿಕತೆಯನ್ನು ಬಯಸುತ್ತಾನೆ ಎಂದು ಸಂತ್ರಸ್ತೆಗೆ ತಿಳಿದಿದೆ. ಕೃತಕ ಹಲ್ಲುಗಳನ್ನು ಹಾಕಿಸಿಕೊಂಡಿದ್ದ ಈ ವ್ಯಾಪಾರಿ ಲೈಂಗಿಕತೆ ಸಂದರ್ಭದಲ್ಲಿ ಆಕೆಯ ದೇಹದ ಭಾಗಗಳನ್ನೆಲ್ಲಾ ಕಚ್ಚಿ ಹಾಕಿದ್ದಾನೆ. ಇದರಿಂದ ಭಯಗೊಂಡ ಸಂತ್ರಸ್ತೆ ಸಂಭೋಗ ನಡೆಸಲು ನಿರಾಕರಿಸಿದ್ದಾಳೆ. ಹೀಗೆ ಮಾಡಿದರೆ ಕೊಲೆ ಮಾಡುವುದಾಗಿ ಆತ ಹೇಳಿದ್ದಾನೆ.

    ದಿನವೂ ಹಿಂಸೆ ತಾಳದ ಸಂತ್ರಸ್ತೆ ಕೊನೆಗೆ ಪತಿಯ ವಿರುದ್ಧ ಇಂದೋರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ‘ಮದುವೆಯಾದ ಮೊದಲ ರಾತ್ರಿಯಿಂದಲೇ ಆತನ ವರ್ತನೆ ವಿಚಿತ್ರವಾಗಿದೆ. ದೇಹದ ಎಲ್ಲೆಡೆ ಕಚ್ಚಿ ಹಿಂಸೆ ಮಾಡುತ್ತಾನೆ. ಸಂಭೋಗ ನಿರಾಕರಿಸಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಆಕೆ ದೂರಿನಲ್ಲಿ ತಿಳಿಸಿದ್ದರು. ತವರಿಗೆ ವಾಪಸಾದ ಸಂತ್ರಸ್ತೆ ಅಲ್ಲಿಯೇ ದೂರು ದಾಖಲು ಮಾಡಿದ್ದಾರು.

    ಈ ವಿಷಯ ನ್ಯಾಯಾಲಯಕ್ಕೆ ಹೋಗುತ್ತಲೇ ಪತಿರಾಯ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ತನ್ನನ್ನು ಬಂಧಿಸುವ ಸಾಧ್ಯತೆ ಇದ್ದು, ಪೊಲೀಸರು ಬಂಧಿಸದಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದ. ಆದರೆ ಕೋರ್ಟ್‌ ಈ ಕೃತ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್‌ ಅರ್ಜಿಯನ್ನು ವಜಾ ಮಾಡಿತ್ತು. ಇದಕ್ಕೆ ಕಾರಣ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾಗ ದೇಹದ ತುಂಬಾ ಆಳವಾದ ಕಚ್ಚಿದ ಗಾಯಗಳು ಇರುವುದು ಕಂಡುಬಂದಿತ್ತು.

    ಈ ಸಂಬಂಧ ಪೊಲೀಸರು ಆತನನ್ನು ಬಂಧಿಸಿದ್ದರು. ವಿಚಾರಣೆ ಮುಂದುವರೆಸಿದ ಕೋರ್ಟ್‌, ಈತನ ಹಲ್ಲು ಹೀಗೇ ಇದ್ದರೆ ಅಪಾಯ ಎಂದು ಹೇಳಿ ಆತನ ಕೃತಕ ಹಲ್ಲುಗಳನ್ನು ತೆಗೆದುಹಾಕುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಸದ್ಯ ಪತಿರಾಯ ಕೃತಕ ಹಲ್ಲುಗಳನ್ನು ಕಳೆದುಕೊಂಡಿದ್ದಾನೆ.

    ಕಾರಿನ ಹೊರಗೆ ಮದುವೆಯ ಮೆರುಗು- ಒಳಗಡೆ ಹಸುಗಳ ಒದ್ದಾಟ! ಉಡುಪಿಯಲ್ಲಿ ಅಮಾನವೀಯ ಘಟನೆ

    ಲಿಂಗ ಸಾಬೀತುಪಡಿಸಿ ಎಂದು ಬಟ್ಟೆಬಿಚ್ಚಿಸಿ, ಒಳ ಉಡುಪು ಇಟ್ಟುಕೊಂಡು ವಿಕೃತಿ ಮೆರೆದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts