More

    ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಕೋರ್ಟ್‌ನಿಂದ ಭಾರಿ ದಂಡ ಹಾಕಿಸ್ಕೊಂಡ ಪತಿ! ಕಂ, ಕಿಂ ಎಂದರೆ ಆಸ್ತಿ ಜಪ್ತಿ ಮಾಡಲು ಆದೇಶ

    ಬೆಂಗಳೂರು: ಮಗಳನ್ನು ಪತ್ನಿ ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡಿದ್ದು, ಮಗಳ ಬಿಡುಗಡೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋದ ಪತಿಗೆ ಭಾರಿ ಮುಖಭಂಗವಾಗಿದ್ದು, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸುಖಾಸುಮ್ಮನೆ ಕೋರ್ಟ್‌ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 50 ಸಾವಿರ ರೂಪಾಯಿ ದಂಡವನ್ನೂ ಹಾಕಿಸಿಕೊಂಡಿದ್ದಾರೆ!

    ಈ ರೀತಿ ದಂಡ ಹಾಕಿಸಿಕೊಂಡಿರುವ ವ್ಯಕ್ತಿ ಬೆಂಗಳೂರಿನ ಕಾಡುಬೀಸನಹಳ್ಳಿ ನಿವಾಸಿ ಗೌರವ್‌ ರಾಜ್‌ ಜೈನ್‌. ನಿಗದಿತ ಅವಧಿಯಲ್ಲಿ 50 ಸಾವಿರ ರೂಪಾಯಿ ದಂಡವನ್ನು ‍ಪಾವತಿಸೇ ಹೋದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲೂಬಹುದು ಎಂದು ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ!

    ಆಗಿದ್ದೇನು?

    ಗೌರವ್ ರಾಜ್‌ ದಂಪತಿ ನಡುವೆ ಜಗಳವಾಗಿ ಅವರ ಪತ್ನಿ ಮಗಳನ್ನು ಕರೆದುಕೊಂಡು ಬೇರೆಯಾಗಿದ್ದಾರೆ. ಅವರ ಮಗಳಿಗೆ ಅನಾರೋಗ್ಯ ಕಾಡುತ್ತಿದ್ದುದರಿಂದ ತಾಯಿಯೇ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ ದಂಪತಿ ನಡುವೆ ವೈಮನಸ್ಸು ಇದ್ದುದರಿಂದ ಪತಿಗೆ ಮಗಳನ್ನು ನೋಡಲು ಬಿಡುತ್ತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಜೈನ್‌ ಅವರು, ಪತ್ನಿಗೆ ಬುದ್ಧಿ ಕಲಿಸಲು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

    ಮಗಳ ಭೇಟಿಗೆ ಅನುಮತಿಸುತ್ತಿಲ್ಲ, ಆದ್ದರಿಂದ ಆಕೆಯನ್ನು ನೋಡಲು ಬಿಡುವಂತೆ ಪತ್ನಿಗೆ ಆದೇಶಿಸಿ ಎಂದು ಕೋರ್ಟ್ ಅನ್ನು ಕೋರಿಕೊಂಡಿದ್ದರೆ ಏನಾದರೂ ಆಗುತ್ತಿತ್ತೇನೋ. ಆದರೆ ಅದರ ಬದಲು ಅವರು, ‘ನನ್ನ ಪತ್ನಿ ಮಗಳನ್ನು ತೆಗೆದುಕೊಂಡು ಹೋಗಿ ಬಂಧನದಲ್ಲಿ ಇರಿಸಿಕೊಂಡಿದ್ದಾಳೆ. ಮಗಳ ಭೇಟಿಗೆ ಅನುಮತಿಸುತ್ತಿಲ್ಲ. ಮಗಳ ಜೀವಕ್ಕೆ ಅಪಾಯವಿದೆ. ವಾಸ್ತವವಾಗಿ ಮಗು ಜೀವಂತವಾಗಿದೆಯೋ ಅಥವಾ ಇಲ್ಲವೋ ಎಂಬುದೇ ಗೊತ್ತಿಲ್ಲ . ಆಕೆಯ ರಕ್ಷಣೆಗೆ ಅಗತ್ಯ ಆದೇಶ ಹೊರಡಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ವೇಳೆ ಪತ್ನಿಗೆ ನೋಟಿಸ್ ಜಾರಿ ಮಾಡಿದ್ದಾಗ, ಅವರು ಕೋರ್ಟ್‌ಗೆ ಹಾಜರು ಇದ್ದು ಮಗಳ ಬಗ್ಗೆ ವಿವರಣೆ ನೀಡಿದ್ದರು, ‘ಮಗಳ ಆರೋಗ್ಯದಲ್ಲಿ ಸಮಸ್ಯೆಯಿದೆ. ದೆಹಲಿ ಸಮೀಪದ ಕತೌಳಿ ಎಂಬ ಊರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಮಗಳು ನನ್ನ ಆರೈಕೆಯಲ್ಲಿದ್ದು, ಬೆಳವಣಿಗೆ ಉತ್ತಮವಾಗಿದೆ. ಮಗಳು ಸದೃಢ ಹಾಗೂ ಆರೋಗ್ಯವಾಗಿದ್ದಾಳೆ. ಈ ವಿಚಾರ ತಿಳಿದಿದ್ದರೂ ಪತಿ ನ್ಯಾಯಾಲಯಕ್ಕೆ ದುರುದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ’ ಎಂದು ಹೇಳಿದ್ದರು.

    ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಕೋರ್ಟ್‌ ಪತಿ ದುರುದ್ದೇಶಪೂರ್ವಕವಾಗಿ ಅರ್ಜಿ ಸಲ್ಲಿಸಿರುವುದು ತಿಳಿದುಬಂತು. ಮಗಳಿಗೆ ಪತ್ನಿ ಸಂಪೂರ್ಣ ಚಿಕಿತ್ಸೆ ಕೊಡಿಸುತ್ತಿದ್ದರೂ ಅಕ್ರಮ ಬಂಧನದಲ್ಲಿ ಇರಿಸಲಾಗಿದೆ ಎಂದು ದೂರಿದ್ದನ್ನು ಕೇಳಿ ಆಕ್ರೋಶಗೊಂಡ ನ್ಯಾಯಮೂರ್ತಿಗಳು, ‘ಅರ್ಜಿದಾರನ ನಡೆ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆಯಾಗಿದೆ. ನಿಷ್ಪ್ರಯೋಜಕ ಹಾಗೂ ದುರುದ್ದೇಶಪೂರಿತ ಅರ್ಜಿ ದಾಖಲಿಸುವುದನ್ನು ಕಠಿಣ ಕ್ರಮದ ಮೂಲಕ ಮೊಟಕುಗೊಳಿಸಬೇಕಿದೆ’ ಎಂದು ಹೇಳುವ ಮೂಲಕ 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದ ಮೊತ್ತವನ್ನು ಒಂದು ತಿಂಗಳಲ್ಲಿ ಪೊಲೀಸ್‌ ಕಲ್ಯಾಣ ನಿಧಿಗೆ ಇಲ್ಲವಾದರೆ ಸಂಬಂಧಪಟ್ಟ ಜಿಲ್ಲಾಧಿಕಾರಿ ದಂಡ ಮೊತ್ತದ ವಸೂಲಿಗಾಗಿ ಅರ್ಜಿದಾರಿನಿಗೆ ಸೇರಿದ ಭೂಮಿಜಪ್ತಿ ಮಾಡಬಹುದು ಎಂದು ಆದೇಶಿಸಿದೆ.

    VIDEO: ರಾಷ್ಟ್ರಗೀತೆಗೆ ಅವಮಾನ ಮಾಡಿದ ವಿರಾಟ್‌ ಕೊಹ್ಲಿ- ಜಾಲತಾಣದಲ್ಲಿ ಭಾರಿ ಆಕ್ರೋಶ

    ಮದುವೆ ಮನೆಯಲ್ಲಿ ಡಾನ್ಸ್‌ ಮಾಡುತ್ತ ಕುಸಿದು ಬಿದ್ದ ವರನ ಸಂಬಂಧಿ- ತಮಾಷೆ ಎಂದುಕೊಂಡು ಸಮೀಪ ಹೋದರೆ ಉಸಿರೇ ನಿಂತಿತ್ತು!

    ಬ್ಯಾಕ್‌ಗ್ರೌಂಡ್‌ ಚೆನ್ನಾಗಿರಲೆಂದು ಹಳಿಯ ಮೇಲೆ ನಿಂತು ಫೋಟೋ- ಪ್ರಾಣ ಕಳೆದುಕೊಂಡ ದಾವಣಗೆರೆಯ ಬಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts