ಬ್ಯಾಕ್‌ಗ್ರೌಂಡ್‌ ಚೆನ್ನಾಗಿರಲೆಂದು ಹಳಿಯ ಮೇಲೆ ನಿಂತು ಫೋಟೋ- ಪ್ರಾಣ ಕಳೆದುಕೊಂಡ ದಾವಣಗೆರೆಯ ಬಾಲಕ

ದಾವಣಗೆರೆ: ಸೆಲ್ಫಿ ಹಾಗೂ ಫೋಟೋ ಹುಚ್ಚುಗಳು ಎಷ್ಟೋ ಮಂದಿಯ ಪ್ರಾಣವನ್ನೇ ತೆಗೆಯುತ್ತಿವೆ. ಆದರೂ ಇಂಥದ್ದೊಂದು ವ್ಯಾಮೋಹನವನ್ನು ಜನರು ಬಿಡದೇ ಹೊಸಹೊಸ ರೀತಿಯಲ್ಲಿ ಪೋಸ್‌ ಕೊಡಲು ಹೋಗಿ ಸಾಯುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ರೈಲ್ವೆ ಹಳಿಯ ಮೇಲೆ ನಿಂತು ಫೋಟೋ ತೆಗೆದುಕೊಳ್ಳಲು ಹೋಗಿರುವ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸಚಿನ್‌ ಎಂಬ ಬಾಲಕ ಅನ್ಯಾಯವಾಗಿ ಮೃತಪಟ್ಟಿದ್ದಾನೆ. ಸಚಿನ್​ ಸ್ನೇಹಿತರ ಜತೆಗೆ ಫೋಟೋ ತೆಗೆಸಿಕೊಳ್ಳಲು ಇಲ್ಲಿಯ ಡಿಸಿಎಂ ಟೌನ್ ಶಿಪ್ ಬಳಿಯಿರುವ ರೈಲ್ವೆ ಸ್ಟೇಷನ್​​ಗೆ ಹೋಗಿದ್ದಾನೆ. … Continue reading ಬ್ಯಾಕ್‌ಗ್ರೌಂಡ್‌ ಚೆನ್ನಾಗಿರಲೆಂದು ಹಳಿಯ ಮೇಲೆ ನಿಂತು ಫೋಟೋ- ಪ್ರಾಣ ಕಳೆದುಕೊಂಡ ದಾವಣಗೆರೆಯ ಬಾಲಕ