More

    ಬ್ಯಾಕ್‌ಗ್ರೌಂಡ್‌ ಚೆನ್ನಾಗಿರಲೆಂದು ಹಳಿಯ ಮೇಲೆ ನಿಂತು ಫೋಟೋ- ಪ್ರಾಣ ಕಳೆದುಕೊಂಡ ದಾವಣಗೆರೆಯ ಬಾಲಕ

    ದಾವಣಗೆರೆ: ಸೆಲ್ಫಿ ಹಾಗೂ ಫೋಟೋ ಹುಚ್ಚುಗಳು ಎಷ್ಟೋ ಮಂದಿಯ ಪ್ರಾಣವನ್ನೇ ತೆಗೆಯುತ್ತಿವೆ. ಆದರೂ ಇಂಥದ್ದೊಂದು ವ್ಯಾಮೋಹನವನ್ನು ಜನರು ಬಿಡದೇ ಹೊಸಹೊಸ ರೀತಿಯಲ್ಲಿ ಪೋಸ್‌ ಕೊಡಲು ಹೋಗಿ ಸಾಯುತ್ತಿದ್ದಾರೆ.

    ಅಂಥದ್ದೇ ಒಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ರೈಲ್ವೆ ಹಳಿಯ ಮೇಲೆ ನಿಂತು ಫೋಟೋ ತೆಗೆದುಕೊಳ್ಳಲು ಹೋಗಿರುವ 16 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸಚಿನ್‌ ಎಂಬ ಬಾಲಕ ಅನ್ಯಾಯವಾಗಿ ಮೃತಪಟ್ಟಿದ್ದಾನೆ.

    ಸಚಿನ್​ ಸ್ನೇಹಿತರ ಜತೆಗೆ ಫೋಟೋ ತೆಗೆಸಿಕೊಳ್ಳಲು ಇಲ್ಲಿಯ ಡಿಸಿಎಂ ಟೌನ್ ಶಿಪ್ ಬಳಿಯಿರುವ ರೈಲ್ವೆ ಸ್ಟೇಷನ್​​ಗೆ ಹೋಗಿದ್ದಾನೆ. ಇಲ್ಲಿ ಎರಡು ಹಳಿಗಳಿವೆ. ಒಂದು ಹಳಿಯ ಮೇಲೆ ಈತ ನಿಂತಿದ್ದ. ಇನ್ನೊಂದು ಹಳಿಯ ಮೇಲೆ ರೈಲು ಬರುವಾಗ ಬ್ಯಾಕ್‌ಗ್ರೌಂಡ್‌ ಚೆನ್ನಾಗಿರುತ್ತೆ ಎನ್ನುವ ಕಾರಣಕ್ಕೆ ರೈಲು ಬರುವುದನ್ನು ಕಾಯುತ್ತಿದ್ದಾರೆ ಸ್ನೇಹಿತರು.

    ರೈಲು ಬರುವ ಶಬ್ದ ಆಗುತ್ತಿದ್ದಂತೆಯೇ ಫೋಟೋಗೆ ಪೋಸ್‌ ಕೊಟ್ಟಿದ್ದಾನೆ. ಆದರೆ ಆತನ ಅದೃಷ್ಟ ಕೆಟ್ಟಿತ್ತು. ಅವನು ಯಾವ ಹಳಿಯ ಮೇಲೆ ನಿಂತಿದ್ದನೋ ಅದೇ ಹಳಿಯ ಮೇಲೆ ರೈಲು ಬಂದಿದೆ. ಅದು ಆತನಿಗೆ ಡಿಕ್ಕಿಹೊಡೆದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ರೈಲ್ವೆ ಮತ್ತು ಕೆಟಿಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ತಲೆ ಮೇಲೆ ಕೈಯಿಟ್ರೆ ಡೇಂಜರ್‌, ಮೂಗನ್ನು ತುರಿಸಿದ್ರೆ ಗ್ರೀನ್‌ ಸಿಗ್ನಲ್‌! ಸಿಕ್ಕಿಬಿದ್ದ ಕೋಡ್‌ವರ್ಡ್‌ ಗ್ಯಾಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts