More

    ಹಾರಾಟ ನಡೆಸಿದ ತಕ್ಷಣ ನಾಪತ್ತೆಯಾಗಿತ್ತು ವಿಮಾನ- ಇಂದು ಸಿಕ್ಕಿವೆ ಪೀಸ್​ ಪೀಸ್​ ದೇಹ!

    ಜಕಾರ್ತಾ: ಇಂಡೋನೇಷಿಯಾದ ವಿಮಾನ ನಿಲ್ದಾಣದಿಂದ 62 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನವೊಂದು ನಿನ್ನೆ ಹಾರಾಟ ಆರಂಭಿಸಿದ ನಾಲ್ಕೇ ನಿಮಿಷಗಳಲ್ಲಿ ರಾಡಾರ್​ ಸಂಪರ್ಕ ಕಡಿತವಾಗಿಸಿಕೊಂಡಿತ್ತು. ವಿಮಾನವನ್ನು ಹೈಜಾಕ್​ ಮಾಡಲಾಗಿದೆ ಎಂದೇ ಅಂದುಕೊಳ್ಳಲಾಗಿತ್ತು.

    ಆದರೆ ಭೀಕರ ದುರಂತಕ್ಕೆ ಈ ವಿಮಾನ ಒಳಗಾಗಿದ್ದು, ವಿಮಾನದ ಬಿಡಿ ಭಾಗಗಳು ಸಮುದ್ರದಲ್ಲಿ ಪತ್ತೆಯಾಗಿವೆ. ಸಮುದ್ರದಲ್ಲಿ ತುಂಡುತುಂಡಾಗಿರುವ ಮೃತದೇಹಗಳು ಸಿಕ್ಕಿವೆ. ಇಂಡೋನೇಷ್ಯಾದ ರಕ್ಷಣಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದು, ಮೃತದೇಹದ ಭಾಗಗಳು, ಬಟ್ಟೆ ಮತ್ತು ವಿಮಾನದ ಕೆಲವು ಭಾಗಗಳನ್ನು ಪತ್ತೆ ಹಚ್ಚಿದ್ದಾರೆ.

    ಹಾರಾಟ ನಡೆಸಿದ ತಕ್ಷಣ ನಾಪತ್ತೆಯಾಗಿತ್ತು ವಿಮಾನ- ಇಂದು ಸಿಕ್ಕಿವೆ ಪೀಸ್​ ಪೀಸ್​ ದೇಹ!

    ಶ್ರೀವಿಜಯ ಏರ್​ ಎಸ್​ಜೆ-182, ಬೋಯಿಂಗ್​​ 737-500 ವಿಮಾನವು ಜಕಾರ್ತಾದಿಂದ ಮಧ್ಯಾಹ್ನ 12.07ಕ್ಕೆ (6.37 ಯುಟಿಎಸ್​) ಹೊರಟಿತ್ತು. ವಿಮಾನ ಹಾರಾಟ ಆರಂಭಿಸಿ 10 ಸಾವಿರ ಅಡಿ ಎತ್ತರಹೋಗುವಷ್ಟರಲ್ಲಿ ವಿಮಾನದ ರಾಡಾರ್ ಸಂಪರ್ಕ ಕಡಿತಗೊಂಡಿದೆ. 12.11ರಿಂದ ವಿಮಾನ ಸಂಪರ್ಕ ಸಾಧ್ಯವಾಗಿರಲಿಲ್ಲ.

    ಪಶ್ಚಿಮ ಕಾಲಿಮಂತ್‌ನ ಪಾಂಟಿಯಾನಾಕ್‌ಗೆ ವಿಮಾನ ತೆರಳಬೇಕಿತ್ತು. ಸುಮಾರು 10 ಸಾವಿರ ಅಡಿಯಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನ ರೆಡಾರ್ ಸಂಪರ್ಕ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿರುವುದು ತಿಳಿದುಬಂದಿದೆ.

    ಈ ವಿಮಾನವು 1994ರ ಮೇ ತಿಂಗಳಲ್ಲಿ ಮೊದಲ ಹಾರಾಟ ನಡೆಸಿತ್ತು. 26 ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಜನರನ್ನು ಹೊತ್ತೊಯ್ಯುತ್ತಿದ್ದುದ್ದಾಗಿ ತಿಳಿಸಲಾಗಿದೆ.

    2018ರಲ್ಲಿಯೂ ಜಕಾರ್ತಾದಿಂದ ಹೊರಟಿದ್ದ ಲಯನ್ ಏರ್ ಕಂಪನಿಯ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನಗೊಂಡಿತ್ತು. 189 ಪ್ರಯಾಣಿಕರು ಈ ಘಟನೆಯಲ್ಲಿ ಮೃತಪಟ್ಟಿದ್ದರು.

    ಯಾರ್ರಿ ಅದು ರಾಧಿಕಾ? ನನಗೆ ಯಾರೆಂದು ಗೊತ್ತಿಲ್ಲ ಎಂದ ಮಾಜಿ ಸಿಎಂ ಕುಮಾರಸ್ವಾಮಿ!

    ಮೈಮೇಲೆ ಏನೋ ಹರಿದಂತಾಯ್ತು-ಕಣ್ಣುಬಿಟ್ಟು ನೋಡಿದ್ರೆ ಕಾಳಿಂಗ ಸರ್ಪ! ಕೊಪ್ಪದಲ್ಲಿ ಬೆಚ್ಚಿಬೀಳೋ ಘಟನೆ

    ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

    ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts