More

    ಭಾರತದ ಮೇಲೆ ಬೇಹುಗಾರಿಕೆಗೆ ನೌಕೆ ಕಳುಹಿಸಿದ ಚೀನಾ: ಎಲ್ಲೆಡೆ ತೀವ್ರ ಕಟ್ಟೆಚ್ಚರ

    ನವದೆಹಲಿ: ಲಡಾಖ್​ ಗಡಿಯಲ್ಲಿ ಸಂಘರ್ಷಕ್ಕೆ ಇಳಿದದ್ದು ಸಾಲದು ಎಂಬಂತೆ ಚೀನಿ ಕಮ್ಯುನಿಸ್ಟರ ಕಣ್ಣೀಗ ಭಾರತದ ಭದ್ರತಾ ಮಾಹಿತಿ ಕಲೆ ಹಾಕುವತ್ತ ನೆಟ್ಟಿದೆ.
    ಇದಾಗಲೇ ಭಾರತ ಸೇರಿದಂತೆ ವಿಶ್ವದ ಹಲವಾರು ವಿಖ್ಯಾತ ಕಂಪೆನಿಗಳ ಡಾಟಾ ಕದಿಯಲು ಹ್ಯಾಕಿಂಗ್​ ತಂತ್ರಜ್ಞಾನದ ಮೊರೆ ಹೋಗಿರುವ ಚೀನಾ ಇದೀಗ ಬೇಹುಗಾರಿಕೆ ನಡೆಸಲು ತನ್ನ ದೇಶದ ನೌಕೆಯನ್ನು ಭಾರತಕ್ಕೆ ಕಳುಹಿಸಿರುವುದು ಬೆಳಕಿಗೆ ಬಂದಿದೆ.

    ಚೀನಾದ ನೌಕೆಯೊಂದು ಹಿಂದೂ ವiಹಾಸಾಗರ ಪ್ರದೇಶದ ಭಾರತೀಯ ಜಲಗಡಿಯನ್ನು ಪ್ರವೇಶಿಸಿ ಬೇಹುಗಾರಿಕೆ ನಡೆಸಿರುವ ಆತಂಕಕಾರಿ ಸಂಗತಿ ಇದೀಗ ಬಹಿರಂಗಗೊಂಡಿದೆ. ಭಾರತೀಯ ನೌಕಾಪಡೆಯ ರೇಡಾರ್​ನಲ್ಲಿ ಚೀನಿ ನೌಕೆಯ ಚಲನವಲನಗಳು ಕಂಡುಬಂದಿವೆ.

    2019ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮೀಪ ಚೀನಾದ ಸಂಶೋಧನಾ ನೌಕೆಯೊಂದು ಬಂದಿತ್ತು. ನಂತರ ಕರಾವಳಿ ರಕ್ಷಣಾ ಪಡೆ ಅದನ್ನು ಹಿಂದಕ್ಕೆ ಕಳುಹಿಸಿತ್ತು. ಆದರೆ ಇದೀಗ ಮತ್ತೆ ಅದೇ ಕುತಂತ್ರ ಬುದ್ಧಿ ತೋರಿದ್ದಾರೆ ಚೀನಿಯರು.

    ಚೀನಾದ ಸಂಶೋಧನೆ ಮತ್ತು ಸರ್ವೆ ನೌಕೆ ಯೌನ್ ವಾಂಗ್ ಹಿಂದೂ ಮಹಾಸಾಗರದ ಮಲಕಾ ಜಲಸಂಧಿ ಮಾರ್ಗವಾಗಿ ಭಾರತೀಯ ಜಲಗಡಿಯನ್ನು ಇತ್ತೀಚೆಗೆ ಪ್ರವೇಶಿಸಿ ಕೆಲವು ದಿನಗಳ ಕಾಲ ಅಲ್ಲಿಯೇ ನೆಲೆಸಿರುವ ಬಗ್ಗೆ ಭಾರತೀಯ ಸೇನೆಗೆ ತಿಳಿದುಬಂದಿದೆ.

    ಇದನ್ನೂ ಓದಿ: ಸೋಂಕಿತರಿಗೆ ಸೀಟು ಕೊಟ್ಟು ಪುನಃ ಏರ್​ ಇಂಡಿಯಾ ಎಡವಟ್ಟು- ದುಬೈನಿಂದ ಶಿಸ್ತು ಕ್ರಮ

    ಈ ನೌಕೆ ಭಾರತೀಯ ಜಲಗಡಿ ಮತ್ತು ಅದಕ್ಕೆ ಸಂಬಂಧಪಟ್ಟ ಸಂಗತಿಗಳ ಬಗ್ಗೆ ನಿರಂತರ ನಿಗಾ ವಹಿಸಿರುವುದು ಪತ್ತೆಯಾಗಿದೆ. ಕೆಲವು ದಿನಗಳ ಬಳಿಕ ಇದು ಚೀನಾಗೆ ಹಿಂದಿರುಗಿದೆ. ಚೀನಾದ ಸಂಶೋಧನಾ ಹಡಗುಗಳು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರ ಪ್ರದೇಶಗಳಿಗೆ ಅಗಾಗ ಬಂದು ಸಂಶೋಧನೆ ನೆಪದಲ್ಲಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿವೆ ಎಂದು ಮೂಲಗಳು ಹೇಳಿವೆ.

    ಕೆಲವು ದಿನಗಳ ಕಾಲ ಭಾರತೀಯ ಜಲ ಗಡಿ ಪ್ರದೇಶಗಳ ಮೇಲೆ ನಿಗಾ ವಹಿಸಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ಈ ನೌಕೆ ಹಿಂದಿರುಗಿದೆ ಎನ್ನಲಾಗಿದೆ. ಈ ನೌಕೆ 11 ಸಾವಿರ ಡಿಡಬ್ಲ್ಯುಟಿ ಸಾಮರ್ಥ್ಯ ಹೊಂದಿದೆ. ಚೀನಾದ ಯೌನ್ ವಾಂಗ್ ಹಡಗು ಜಲಗಡಿಯಲ್ಲಿ ನೆಲೆಸಿದಾಗಿನಿಂದ ಭಾರತೀಯ ನೌಕಾ ಪಡೆ ಇದರ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟು ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

    ಆದರೂ ಚೀನಾದ ಈ ನಡೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದ್ದು, ಎಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ.

    ಅತ್ಯಾಚಾರ ಮಾಡಿದರೆ ‘ಅದಕ್ಕೇ’ ಬೀಳತ್ತೆ ಕತ್ತರಿ!​​ ಈ ದೇಶದಲ್ಲಿ ಬಂತು ಹೊಸ ಕಾನೂನು…

    ಚೀನಾ ಔಷಧ ಕಂಪೆನಿಯಿಂದ ಸೋರಿಕೆ: ಪುರುಷರ ಕಾಡಲಿದೆ ಈ ಮಹಾಮಾರಿ ಬ್ಯಾಕ್ಟೀರಿಯಾ!

    ಗಂಡನ ಮನೆಗೆ ಕನ್ನ ಹಾಕಿ ನಟಿ ಎಸ್ಕೇಪ್​: ಪತಿರಾಯ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts