More

    ಫಸ್ಟ್‌ನೈಟ್‌ನಲ್ಲೇ ಪತಿ ದಂಗು! ಪತ್ನಿ ಹೆಣ್ಣಲ್ಲ, ಅವಳಿಗೆ ‘ಅದರ ಬದಲು ಇದಿದೆ’ ಎಂದು ಕೋರ್ಟ್‌ ಮೆಟ್ಟಿಲೇರಿದ…

    ನವದೆಹಲಿ: ದಂಪತಿ ಮಧ್ಯೆ ಏನೇನೋ ಸಮಸ್ಯೆಗಳು ಬಂದು ಕೋರ್ಟ್‌ ಮೆಟ್ಟಿಲೇರುವುದು ಇದೆ. ಅವುಗಳ ಪೈಕಿ ಕೆಲವೊಂದು ಹಾಸ್ಯಾಸ್ಪದ ಎನಿಸಿದರೆ, ಕೆಲವೊಂದು ತೀರಾ ವಿಚಿತ್ರ ಎನಿಸುತ್ತದೆ. ಅಂಥದ್ದೇ ಒಂದು ವಿಚಿತ್ರ ಎನಿಸುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಈಗ ಈ ವಿವಾದ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.

    ಮೊದಲ ರಾತ್ರಿಯ ವೇಳೆ ತನ್ನ ಹೆಂಡತಿ ಹೆಣ್ಣಲ್ಲ, ಅವಳು ಗಂಡು ಎನ್ನುವುದು ತನಗೆ ತಿಳಿದಿದೆ ಎನ್ನುವುದು ಪತಿಯ ಆರೋಪ. ತನ್ನ ಪತ್ನಿಗೆ ಯೋನಿಯ ಬದಲು ಶಿಶ್ನ ಇದೆ ಎಂದು ಕೋರ್ಟ್‌ನಲ್ಲಿ ಕೇಸು ದಾಖಲು ಮಾಡಿದ್ದಾನೆ. ಪತ್ನಿ ತನಗೆ ವಂಚನೆ ಮಾಡಿದ್ದಾಳೆ ಎಂದು ಆತ ಆರೋಪಿಸಿದ್ದಾನೆ.

    ಈ ಕೇಸ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಿಂದ ಹೈಕೋರ್ಟ್‌ವರೆಗೆ ಹೋಗಿ ಈಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಕೆಳಗಿನ ಕೋರ್ಟ್‌ಗಳಲ್ಲಿ ಪತ್ನಿಯ ಪರ ತೀರ್ಪು ಬಂದಿದ್ದನ್ನು ಪತಿ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
    ಪತಿಯ ಪರ ವಕೀಲರ ಆರೋಪ ಗಮನಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರನ್ನು ಒಳಗೊಂಡ ಪೀಠ ಆರಂಭದಲ್ಲಿ ಅಚ್ಚರಿ ವ್ಯಕ್ತಪಡಿಸಿತು. ಕೊನೆಗೆ ವೈದ್ಯಕೀಯ ವರದಿಯನ್ನು ತಂದು ತೋರಿಸಿದ ಪತಿ, ತನ್ನ ಪತ್ನಿಗೆ ಶಿಶ್ನ ಇರುವುದು ಹಾಗೂ ಅಪೂರ್ಣ ಆಗಿರುವ ಕನ್ಯಾಪೊರೆ ಇರುವುದನ್ನು ಸಾಬೀತು ಪಡಿಸಿದ. ನಂತರ ಪೀಠವು, ಈ ಬಗ್ಗೆ ಪತ್ನಿಯಿಂದ ಪ್ರತಿಕ್ರಿಯೆ ಕೇಳಿದರು.

    ನಂತರ ಪತ್ನಿಯ ಪರ ವಕೀಲರು ಕನ್ಯಾಪೊರೆ ಅಪೂರ್ಣ ಆಗಿದ್ದು, ಇದು ಜನನದಿಂದಲೂ ಹಾಗೆಯೇ ಇದೆ ಎಂದು ಹೇಳಿದರು.

    ಆಗ ಕೋರ್ಟ್‌, ’ಒಂದು ಅಪೂರ್ಣ ಕನ್ಯಾಪೊರೆ ಇದೆ ಎಂಬ ಕಾರಣಕ್ಕೆ ಲಿಂಗವು ಸ್ತ್ರೀ ಅಲ್ಲ ಎಂದು ನೀವು ಹೇಳಬಹುದೇ? ಆಕೆಯ ಅಂಡಾಶಯಗಳು ಸಹಜವಾಗಿವೆ ಎಂದು ವೈದ್ಯಕೀಯ ವರದಿ ಹೇಳುತ್ತದೆ’ ಎಂದರು.

    ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪತಿಯ ಪರ ವಕೀಲರು, ಆಕೆ ಓರ್ವ ಗಂಡಸು. ಇದು ಖಂಡಿತವಾಗಿಯೂ ಮೋಸ. ವೈದ್ಯಕೀಯ ದಾಖಲೆಗಳನ್ನು ನೋಡಿ. ಇದು ಕೆಲವು ಜನ್ಮಜಾತ ಅಸ್ವಸ್ಥತೆಯ ಪ್ರಕರಣವಲ್ಲ. ಆಕೆಗೆ ತನ್ನ ಜನನಾಂಗಗಳ ಬಗ್ಗೆ ಖಚಿತವಾಗಿ ತಿಳಿದಿತ್ತು ಎಂದರು.

    ಈಗ ಸುಪ್ರೀಂಕೋರ್ಟ್‌ ಪತ್ನಿಯ ತಂದೆಗೆ ನೋಟಿಸ್‌ ಜಾರಿ ಮಾಡಿದ್ದು, ಆರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

    ಕರಣ್ weds​ ಹರ್ಷು- ಷರತ್ತು ಅನ್ವಯ: ದಿನಕ್ಕೆ 3 ಸಲ ಐ ಲವ್​ ಯೂ… ಬೋನ್​ಲೆಸ್​ ಚಿಕನ್​ ಹೀಗಿರಬೇಕು…

    ದೇಶದ ಮೊದಲ ಪ್ರಜೆ ಯಾರಾಗಲಿದ್ದಾರೆ? ಬಿಜೆಪಿಗೆ ಒಲಿಯಲಿದೆಯೇ ಅದೃಷ್ಟ?ಶುರುವಾಯ್ತು ಲೆಕ್ಕಾಚಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts