More

    ನಾಲ್ವರು ಸಹೋದ್ಯೋಗಿಗಳನ್ನು ಶೂಟ್‌ ಮಾಡಿ ಪ್ರಾಣ ತೆಗೆದದ್ದು ಹುಕ್ಕೇರಿ ಯೋಧ… ಕಾರಣ ಬಿಚ್ಚಿಟ್ಟ ಕುಟುಂಬಸ್ಥರು!

    ಚಿಕ್ಕೋಡಿ: ಪಂಜಾಬ್​ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸೈನಿಕನೋರ್ವ ತನ್ನ ಕರ್ತವ್ಯದ ಗನ್​ನಿಂದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿರುವ ಘಟನೆ ಮಾರ್ಚ್‌ 6ರಂದು ನಡೆದಿತ್ತು. ಹೀಗೆ ಪ್ರಾಣ ತೆಗೆದ ಯೋಧ ಕರ್ನಾಟಕದವರು ಎಂದು ಮಾಹಿತಿ ಬಂದಿತ್ತು.

    ಈ ಘಟನೆಯಲ್ಲಿ ಶೂಟ್‌ ಮಾಡಿದ ಯೋಧ ಸೇರಿದಂತೆ ಉಳಿದ ನಾಲ್ವರೂ ಮೃತಪಟ್ಟರೆ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಬಿಎಸ್ಎಫ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು, ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರು ಬಿಹಾರದ ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಮ್ ಬಿನೋದ್, ಮಹಾರಾಷ್ಟ್ರದ ಡಿಎಸ್ ತೊರಸ್ಕರ್, ಜಮ್ಮು ಮತ್ತು ಕಾಶ್ಮೀರದ ರತ್ತನ್ ಸಿಂಗ್ ಮತ್ತು ಹರಿಯಾಣದ ಪಾಣಿಪತ್‌ನ ಬಲ್ಜಿಂದರ್ ಕುಮಾರ್.

    ಇದೀಗ ಶೂಟ್‌ ಮಾಡಿದ ಯೋಧನ ಮೂಲ ಪತ್ತೆ ಹಚ್ಚಲಾಗಿದ್ದು, ಈತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಯೋಧ ಎಂದು‌ ತಿಳಿದುಬಂದಿದೆ. ಈತನ ಹೆಸರು ಸತ್ಯಪ್ಪ ಸಿದ್ದಪ್ಪ ಕಿಲಾರಗಿ.

    ಈತ ಮಾನಸಿಕವಾಗಿ ಖಿನ್ನತೆ ಒಳಗಾಗಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ವೈಯಕ್ತಿಕ ಸಾಲ ಹಾಗೂ ಕೌಟುಂಬಿಕ ವಿಚಾರಕ್ಕೆ ಮಾನಸಿಕವಾಗಿ ಖಿನ್ನನಾಗಿದ್ದ. ಆದ್ದರಿಂದ ಈ ರೀತಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಹೇಳಿದ್ದಾರೆ.

    ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾದಿದ್ದರೆ ಅತ್ತ ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವ ಉಳಿದ ನಾಲ್ವರು ಯೋಧರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ‘ಮಾತಾಡೋಕೆ ಆಗ್ತಿಲ್ಲ, ಅಪ್ಪು ವಾಯ್ಸ್‌ ಡಬ್‌ ಮಾಡ್ವಾಗ ತುಂಬಾ ಹೆದರಿಕೆಯಾಯ್ತು… ಎರಡು ದಿನ ತಗೊಂಡೆ…’

    ಬಸ್‌ನಲ್ಲಿ ಶಿಕ್ಷಕಿಗೆ ಕಾಮುಕನ ಕಿರುಕುಳ: ಆರೋಪಿ ಜತೆ ಮೌನ ವಹಿಸಿದ ಕಂಡಕ್ಟರ್‌ಗೂ ಬಂತು ಗ್ರಹಚಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts