More

    86 ವರ್ಷಗಳ ಶಿಕ್ಷೆಗೆ ಗುರಿಯಾದ ಪಾಕ್‌ ಸುಂದರಿ! ಅಮೆರಿಕವನ್ನೇ ತಲ್ಲಣಗೊಳಿಸಿರುವ ನರವಿಜ್ಞಾನಿಯ ಭಯಾನಕ ಕಥೆಯಿದು..

    ವಾಷಿಂಗ್ಟನ್: ಅದು 2001. ದೊಡ್ಡಣ್ಣ ಎಂದೇ ಖ್ಯಾತಿ ಪಡೆದ ಅಮೆರಿಕ ಅಕ್ಷರಶಃ ನಲುಗಿ ಹೋಗಿತ್ತು. ಅಲ್ಲಿಯ ವಿಶ್ವ ವಾಣಿಜ್ಯ ಕಚೇರಿ ಮತ್ತು ಪೆಂಟಗಾನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ಭಯಾನಕ ಕೃತ್ಯದ ಹಿಂದಿನ ಸಂಚು ಬಯಲಾದಾಗ ಖುದ್ದು ಅಮೆರಿಕ ಹೌಹಾರಿಹೋಗಿತ್ತು. ಏಕೆಂದರೆ ಇದರ ಹಿಂದೆ ಇದ್ದ ಮಹಾನ್‌ ತಲೆ 29 ವರ್ಷದ ಓರ್ವ ಯುವತಿಯದ್ದಾಗಿತ್ತು. ಈಕೆ ಹೆಸರು ಆಫಿಯಾ ಸಿದ್ದಿಕಿ. ಪಾಕಿಸ್ತಾನ ಮೂಲದ ಪ್ರಸಿದ್ಧ ನರವಿಜ್ಞಾನಿ ಇವಳು.

    2008ರಲ್ಲಿ ಅಪ್ಘಾನಿಸ್ತಾನದಲ್ಲಿ ಇವಳನ್ನು ಬಂಧಿಸಲಾಗಿತ್ತು. ಪಾಕಿಸ್ತಾನದ ಅಲ್‌ ಕೈದಾ ಸಂಘಟನೆಯ ಜತೆ ಇವಳಿಗೆ ನೇರ ಸಂಪರ್ಕ ಇರುವುದು ತಿಳಿದುಬಂದಿತ್ತು. ಸುದೀರ್ಘ ವಿಚಾರಣೆ ನಡೆದು 2010ರಲ್ಲಿ ಅಮೆರಿಕದ ಕೋರ್ಟ್‌ ಅಫಿಯಾಗೆ 86 ವರ್ಷಗಳ ಸುದೀರ್ಘ ಶಿಕ್ಷೆ ನೀಡಿದೆ. ಇದು ಅಮೆರಿಕದ ಇತಿಹಾಸದಲ್ಲಿಯೇ ನೀಡಿರುವ ಸುದೀರ್ಘ ಶಿಕ್ಷೆ ಎನಿಸಿದೆ.

    ಅಲ್ಲಿಂದ ಇಲ್ಲಿಯವರೆಗೂ ಈಕೆಯ ಬಿಡುಗಡೆಗಾಗಿ ಪಾಕಿಸ್ತಾನ ಸರ್ಕಾರ ಹಲವಾರು ರೀತಿಯ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಆದರೆ 12 ವರ್ಷಗಳ ಬಳಿಕ ಮತ್ತೆ ಆಫಿಯಾ ಸುದ್ದಿಯಾಗಿದ್ದಾಳೆ. ಇದಕ್ಕೆ ಕಾರಣ, ಶನಿವಾರ (ಜ.15) ಟೆಕ್ಸಾಸ್ ಯಹೂದಿ ಪ್ರಾರ್ಥನಾ ಮಂದಿರದಲ್ಲಿ ಧರ್ಮಗುರು ಸೇರಿದಂತೆ ನಾಲ್ವರನ್ನು ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಯಹೂದಿ ಪ್ರಾರ್ಥನಾಲಯಕ್ಕೆ ನುಗ್ಗಿದ ಶಸ್ತ್ರಸಜ್ಜಿತ ವ್ಯಕ್ತಿ ನಾಲ್ವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದು, ಇವರ ಬಿಡುಗಡೆಗೆ ಅಮೆರಿಕಕ್ಕೆ ದೊಡ್ಡದೊಂದು ಬೇಡಿಕೆ ಇಟ್ಟಿದ್ದಾನೆ. ಅದೇನೆಂದರೆ ಆಫಿಯಾಳ ಬಿಡುಗಡೆ ಮಾಡಬೇಕು ಎನ್ನುವುದು!

    ಅಷ್ಟಕ್ಕೂ ಯಾರೀ ಆಫಿಯಾ? ಅಮೆರಿಕವನ್ನೇ ತಲ್ಲಣಗೊಳಿಸಿರುವ ಈ ಸುಂದರಿಯ ಹಿಂದೆ ಭಯಾನಕ ಕಥೆಯೇ ಇದೆ. ಅದೇನೆಂದರೆ, ಪೆಂಟಗಾನ್ ಮೇಲೆ ದಾಳಿ ನಡೆಸಿರುವುದು ಮಾತ್ರವಲ್ಲದೇ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ನೆಲೆಯೂರಿದ್ದಾಗ ಅಲ್ಲಿನ ಅಮೆರಿಕನ್ ಸೇನಾಧಿಕಾರಿಗಳನ್ನು ಹತ್ಯೆ ಮಾಡಲು ಕೂಡ ಈಕೆ ಪ್ರಯತ್ನಿಸಿದ್ದಳು.

    ಆಫಿಯಾ ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಬ್ರಾಂಡಿಸ್ ವಿಶ್ವವಿದ್ಯಾಲಯ ಮತ್ತು ಮೆಸ್ಯಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಯನ ಮಾಡಿದ್ದಳು. ಅಲ್ಲಿಂದ ಈಕೆಯ ನಂಟು ಬೆಳೆದಿದ್ದು ಅಲ್‌ ಕೈದಾ ಉಗ್ರ ಸಂಘಟನೆಯ ಜತೆಗೆ ವಿಶ್ವ ವಾಣಿಜ್ಯ ಕಚೇರಿ, ಪೆಂಟಗಾನ್ ಮತ್ತು ಇತರ ಸ್ಥಳಗಳ ಮೇಲೆ ದಾಳಿಗೆ ಸಂಚು ರೂಪಿಸಿರುವ ಹಿಂದಿರುವ ಮಾಸ್ಟರ್‌ ಮೈಂಡ್‌ ಈಕೆಯದ್ದೇ ಆಗಿತ್ತು.

    ಈಕೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದ ಅಮೆರಿಕ ಸೈನಿಕರ ಮೇಲೆ ಇವಳು ಗುಂಡು ಹಾರಿಸಿದ್ದಳು. ಬಂಧಿಸುವ ಮೊದಲು ಆಕೆಯ ಕೊಠಡಿಗೆ ಪರಿಶೀಲನೆಗೆ ತೆರಳಿದ್ದ ಅಮೆರಿಕ ಸೈನಿಕನಿಂದ ರೈಫಲ್ ಕಸಿದುಕೊಂಡು ಗುಂಡು ಹಾರಿಸಿದ್ದಳು. ಅಂತೂ 2008ರಲ್ಲಿ ಸೆರೆ ಸಿಕ್ಕಿದ್ದಳು. ಇವಳ ಬಳಿಯಿಂದ ಬಾಂಬ್‌ಗಳ ತಯಾರಿಕೆ ಕುರಿತು ಬರೆಯಲಾಗಿದ್ದು ಕೈಬರಹದ ಟಿಪ್ಪಣಿಗಳು ಸಿಕ್ಕಿದ್ದವು. ಜತೆಗೆ ಅಮೆರಿಕದಲ್ಲಿ ಎಲ್ಲೆಲ್ಲಿ ಬ್ಲಾಸ್ಟ್‌ ಮಾಡಬಹುದು ಎಂಬ ಸ್ಥಳಗಳನ್ನು ಈಕೆ ಪಟ್ಟಿ ಮಾಡಿದ್ದಳು. ಇವೆಲ್ಲವೂ ಈಕೆಯ ವಿರುದ್ಧ ಕೋರ್ಟ್‌ನಲ್ಲಿ ಸಾಬೀತಾಗಿತ್ತು.

    ಇವಳನ್ನು ಬಿಡಿಸುವ ಸಂಬಂಧ ಕೋರ್ಟ್‌ನಲ್ಲಿ ಇವಳ ಪರ ವಕೀಲರು ಆಸಿಫಾ ಮಾನಸಿಕ ಅಸ್ವಸ್ಥೆ ಎಂದು ಹೇಳಿದ್ದರು. ಆದರೆ ಇದನ್ನು ಖುದ್ದು ಈಕೆಯೇ ಅಲ್ಲಗಳೆದು, ನಾನು ಚೆನ್ನಾಗಿದ್ದೇನೆ, ಮಾನಸಿಕ ಅಸ್ವಸ್ಥೆ ಅಲ್ಲ ಎಂಬ ಹೇಳಿಕೆ ಕೊಟ್ಟಿದ್ದಳು. ಅಮೆರಿಕದ ಮ್ಯಾನ್​ಹಟನ್ ಕೋರ್ಟ್ 86 ವರ್ಷಗಳ ಶಿಕ್ಷೆ ವಿಧಿಸಿತ್ತು.

    ಆ ನಂತರ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವೇ ಆಗಿ ಅಮೆರಿಕದ ವಿರುದ್ಧ ಪ್ರತಿಭಟನೆ ನಡೆದವು. ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಯೂಸುಫ್ ರಜಾ ಗಿಲಾನಿ ಆಫಿಯಾಳನ್ನು ‘ರಾಷ್ಟ್ರದ ಮಗಳು’ ಎಂದು ಕರೆದು ವಿಶ್ವದ ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೆ ಗಿಲಾನಿ ಮಾತ್ರ ಜೈಲಿನಿಂದ ಆಕೆಯನ್ನು ಬಿಡುಗಡೆಗೊಳಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

    ಸದ್ಯ ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಫೆಡರಲ್ ಜೈಲಿನಲ್ಲಿ ಈಕೆ ಬಂಧನದಲ್ಲಿದ್ದಾಳೆ. ಮೊದಲು ಪಾಕಿಸ್ತಾನದಲ್ಲಿ ಈಕೆಯ ಪರವಾಗಿ ಬಿಸಿಯಾಗಿದ್ದ ಹೋರಾಟ ಕ್ರಮೇಣ ತಣ್ಣಗಾಗುತ್ತಾ ಬಂದಿತ್ತು. ಆದರೆ ಇದೀಗ ಮತ್ತೆ ಈಕೆಯ ಬಿಡುಗಡೆಗೆ ಒತ್ತಾಯ ಮಾಡಿ ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳಲಾಗಿದೆ. ಅಂದಹಾಗೆ ಈಕೆಗೆ ಈಗ 49 ವರ್ಷ ವಯಸ್ಸು.

    ‘ಅವ್ನು ಕಿಸ್‌ ಕೊಟ್ಟಿರೋ ದೃಶ್ಯ ಪ್ರಸಾರ ಮಾಡ್ಬೇಡಿ ಪ್ಲೀಸ್‌’ ಎಂದು ಹಣಕ್ಕಾಗಿ ಎಲ್ಲಾ ಅರ್ಪಿಸಿಕೊಂಡ ನಟಿಯ ಮನವಿ!

    ಹವಾಮಾನಕ್ಕೂ ಜಗ್ಗಲ್ಲ, ಕಣ್ಗಾವಲಿಗೂ ಬೀಳಲ್ಲ- ಯೋಧರಿಗಾಗಿ ನೂತನ ಸಮವಸ್ತ್ರ, ಹೀಗಿದೆ ನೋಡಿ ವಿಶೇಷತೆ…

    ಹವಾಮಾನಕ್ಕೂ ಜಗ್ಗಲ್ಲ, ಕಣ್ಗಾವಲಿಗೂ ಬೀಳಲ್ಲ- ಯೋಧರಿಗಾಗಿ ನೂತನ ಸಮವಸ್ತ್ರ, ಹೀಗಿದೆ ನೋಡಿ ವಿಶೇಷತೆ…

    VIDEO: ಚಾಲಕನಿಗೆ ಫಿಟ್ಸ್‌ ಬಂದು ಇನ್ನೇನು ಪ್ರಯಾಣಿಕರ ಪ್ರಾಣವೇ ಹೋಗುವಾಗ ‘ದೇವತೆ’ಯಾಗಿ ಬಂದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts