More

    ಹಾಲಿವುಡ್​ ನಟಿಯ ಟ್ವಿಟರ್​ನಲ್ಲಿ ಲಕ್ಷ್ಮಿ ಪ್ರತ್ಯಕ್ಷ- ಅಭಿಮಾನಿಗಳಲ್ಲಿ ಸಂಚಲನ!

    ವಾಷಿಂಗ್ಟನ್​: ಭಾರತ, ಇಲ್ಲಿಯ ಸಂಸ್ಕೃತಿ, ಇಲ್ಲಿಯ ಪದ್ಧತಿ ಹಾಗೂ ಹಿಂದೂ ದೇವತೆಗಳ ಬಗ್ಗೆ ವಿಶ್ವಾದ್ಯಂತ ಬಹುತೇಕ ಮಂದಿಗೆ ಒಂದು ರೀತಿಯ ಆತ್ಮೀಯ ಭಾವ. ಇಲ್ಲಿಯ ಸಂಪ್ರದಾಯಗಳನ್ನು ಭಾರತೀಯರು ಎನಿಸಿಕೊಂಡವರು ಎಷ್ಟು ಅನುಸರಿಸುತ್ತಾರೋ ಗೊತ್ತಿಲ್ಲ, ಆದರೆ ವಿದೇಶಿಗರಲ್ಲಿ ಹಲವು ಮಂದಿ ಭಾರತೀಯ ಸಂಪ್ರದಾಯದಂತೆ ನಡೆದುಕೊಳ್ಳುವುದಿದೆ. ಎಷ್ಟೋ ಮಂದಿ ಹಿಂದೂ ದೇವತೆಗಳ ಮೊರೆ ಹೋಗುವವರೂ ಇದ್ದಾರೆ.

    ಅದೇ ರೀತಿ ಹಾಲಿವುಡ್​ನ ಖ್ಯಾತ ನಟಿ ಸಲ್ಮಾ ಹಯೇಕ್​. ಮೆಕ್ಸಿಕನ್​ ಮತ್ತು ಅಮೆರಿಕನ್​ ನಟಿಯಾಗಿರುವ ಈಕೆಯ ಟ್ವಿಟರ್​ನಲ್ಲಿ ದಿಢೀರನೆ ಲಕ್ಷ್ಮಿ ದೇವಿ ಕಾಣಿಸಿಕೊಂಡಿದ್ದು, ಈಕೆಯ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದೆ.

    ತಮ್ಮ ಟ್ವಿಟರ್​ ಖಾತೆಯಲ್ಲಿ ಲಕ್ಷ್ಮಿದೇವಿ ನಾನಾ ಸ್ವರೂಪಗಳನ್ನು ಸಲ್ಮಾ ಪೋಸ್ಟ್​ ಮಾಡಿದ್ದಾರೆ. ಇದರ ಬಗ್ಗೆ ವಿವರಣೆ ನೀಡಿರುವ ಇವರು, ನಾನು ಹಿಂದೂದೇವತೆಯಾದ ಲಕ್ಷ್ಮಿಗೆ ಪ್ರಭಾವಿತಳಾಗಿದ್ದೇನೆ ಎಂದಿದ್ದಾರೆ. ತಾವು ಲಕ್ಷ್ಮಿಯ ಭಕ್ತೆ ಎಂದು ಹೇಳಿಕೊಂಡಿದ್ದಾರೆ.

    “ನನ್ನ ಆಂತರಿಕ ಸೌಂದರ್ಯದೊಂದಿಗೆ ಸಂಪರ್ಕ ಸಾಧಿಸಲು ನಾನು ಬಯಸಿದಾಗ, ನಾನು ಲಕ್ಷ್ಮಿದೇವಿಯನ್ನು ಕೇಂದ್ರೀಕರಿಸಿ ಧ್ಯಾನವನ್ನು ಪ್ರಾರಂಭಿಸುತ್ತೇನೆ. ಲಕ್ಷ್ಮಿ ದೇವಿ ಹಿಂದೂ ಧರ್ಮದಲ್ಲಿ ಸಂಪತ್ತು, ಅದೃಷ್ಟ, ಪ್ರೀತಿ, ಸೌಂದರ್ಯ, ಮಾಯೆ, ಸಂತೋಷ ಮತ್ತು ಸಮೃದ್ಧಿ. ಆದ್ದರಿಂದ ಈ ದೇವಿಯನ್ನು ನೋಡಿದರೆ ನನಗೆ ತುಂಬಾ ಸಂತೋಷ ಉಂಟಾಗುತ್ತದೆ. ಸಂತೋಷವು ಆಂತರಿಕ ಸೌಂದರ್ಯಕ್ಕೆ ದೊಡ್ಡ ಬಾಗಿಲು ಎಂದು ನಂಬಿದವಳು ನಾನು. ಆದ್ದರಿಂದ ಲಕ್ಷ್ಮಿದೇವಿ ಎಂದರೆ ನನಗೆ ತುಂಬಾ ಪ್ರೀತಿ” ಎಂದು ಬರೆದುಕೊಂಡಿದ್ದಾರೆ.

    ಇವರ ಈ ಟ್ವೀಟ್​ ಇದೀಗ ಭಾರಿ ವೈರಲ್​ ಆಗಿದ್ದು, ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾವಿರಾರು ಮಂದಿಗೆ ಊಟ ಹಾಕುವ ದಂಪತಿ ತುತ್ತು ಅನ್ನಕ್ಕೆ ಪರದಾಡಿದಾಗ… ನಡೆಯಿತೊಂದು ಪವಾಡ!

    13ನೇ ವರ್ಷವೂ ಮುಖೇಶ್​ ಅಂಬಾನಿ ನಂ.​1 ಶ್ರೀಮಂತ: ಟಾಪ್​ 10ನಲ್ಲಿ ಯಾರಿದ್ದಾರೆ? ಇಲ್ಲಿದೆ ವಿವರ

    ಬೆಂಗಳೂರು ತಲುಪಬೇಕೆನ್ನುವಷ್ಟರಲ್ಲಿ ವಿಮಾನದಲ್ಲೇ ಡೆಲಿವರಿ: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts