More

    ‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

    ಮಡಿಕೇರಿ: ಶಾಂತಾವಾಗಿದ್ದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡಲು ಬಯಸುತ್ತಿರುವವರ ಮಾತನ್ನು ಕೇಳಿ ರಾಜ್ಯದ ಹಲವು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಗಲಾಟೆ ಶುರು ಮಾಡಿಕೊಂಡಿದ್ದಾರೆ. ಹೈಕೋರ್ಟ್‌ ಏನು ಹೇಳಿದೆ, ತಾವು ಮಾಡುತ್ತಿರುವುದು ಏನು ಎಂಬ ಬಗ್ಗೆ ಅರಿವೇ ಇಲ್ಲದ ಈ ಮುಗ್ಧ ಮಕ್ಕಳನ್ನು ಮುಂದು ಮಾಡಿಕೊಂಡು ಮಜಾ ನೋಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

    ಶಿಕ್ಷಕರು, ಹೈಕೋರ್ಟ್‌ ಆದೇಶ ಪಾಲಿಸಿ ಎಂದು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಅವರ ತಲೆಗೆ ತುಂಬಿರುವ ವಿಷದಿಂದಾಗಿ ಮಕ್ಕಳು ತಮ್ಮ ಗುರುಗಳ ಮಾತನ್ನೇ ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜುಗಳಲ್ಲಿ ಈ ಮುಂಚೆ ಬರುತ್ತಿದ್ದಂತೆಯೇ ಸಮವಸ್ತ್ರ ಧರಿಸಿ ಬನ್ನಿ, ಹಿಜಾಬ್‌ ಹಾಕಿಕೊಂಡಿರುವ ವಿದ್ಯಾರ್ಥಿನಿಯರು ಈ ಮೊದಲು ಮಾಡುತ್ತಿದ್ದಂತೆಯೇ ಶಿಕ್ಷಣ ಸಂಸ್ಥೆಯನ್ನು ಪ್ರವೇಶಿಸಿದ ಮೇಲೆ ಒಂದು ಕೊಠಡಿಯಲ್ಲಿ ಇಟ್ಟು ಬನ್ನಿ ಎಂದಷ್ಟೇ ಸ್ಪಷ್ಟವಾಗಿ ಹೇಳಲಾಗುತ್ತಿದ್ದರೂ, ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸಲೇಬಾರದು ಎಂದು ಹೇಳಲಾಗುತ್ತಿದೆ ಎಂಬ ಸುಳ್ಳುಗಳನ್ನು ಮಕ್ಕಳ ತಲೆಯಲ್ಲಿ ತುಂಬಿ ಅವರ ಬಾಯಲ್ಲಿ ಹೇಳಿಸಬಾರದು ಮಾತುಗಳನ್ನು ಹೇಳಿಸಲಾಗುತ್ತಿದೆ. ಇದರಿಂದ ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದನ್ನು ಖುದ್ದು ಶಿಕ್ಷಕರಿಗೇ ತಿಳಿಸಲು ಸಾಧ್ಯವಾಗದೇ ಅಸಹಾಯಕ ಪರಿಸ್ಥಿತಿ ನಿರ್ಮಾಣವಾಗಿದೆ.

    ಈ ನಡುವೆಯೇ, ಮಡಿಕೇರಿಯ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೈಕೋರ್ಟ್‌ ಆದೇಶ ಪಾಲಿಸಿ ಎಂದು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿಕೊಂಡದ್ದೇ ಇದೀಗ ಅವರ ಜೀವಕ್ಕೆ ಅಪಾಯ ಬಂದೊಡ್ಡಿದೆ. ಅವರಿಗೆ ಕೊಲೆ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

    ಮಡಿಕೇರಿಯ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿಜಯ್ ಅವರಿಗೆ ಮಹಮ್ಮದ್ ತೌಸಿಫ್ ಎಂಬಾತ ‘ನೀನು ಹೆಚ್ಚು ದಿನ ಬದುಕಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದಾನೆ.

    ಹಿಜಾಬ್‌ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದಿರಿಸಿ ತರಗತಿಗೆ ಹೋಗಲು ಅವಕಾಶ ನೀಡಲಾಗಿತ್ತು. ಆದರೆ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದೆ ತರಗತಿಗೆ ಹೋಗಲು ಯತ್ನಿಸಿದ್ದರು. ಈ ವೇಳೆ ಪ್ರಾಂಶುಪಾಲ ವಿಜಯ್ ಅವರು ವಿದ್ಯಾರ್ಥಿನಿಯರ ವಿರುದ್ಧ ಗರಂ ಆಗಿ, ಕೋರ್ಟ್‌ ಆದೇಶ ಪಾಲಿಸಿ ಎಂದು ಹೇಳಿದ್ದರು. ಆದರೂ ವಿದ್ಯಾರ್ಥಿನಿಯರು ಅವರ ವಿರುದ್ಧವೇ ತಿರುಗಿ ಬಿದ್ದಾಗ, ಕಾಲೇಜು ಕೊಠಡಿ ಬಳಿಯೇ ಇದ್ದಾಗ ಪೊಲೀಸರನ್ನು ಕರೆದು ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಇಲ್ಲ ಅರೆಸ್ಟ್ ಮಾಡಿ ಕೇಸು ಹಾಕಿ. ಇವರಿಂದಾಗಿ ಉಳಿದ ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆ ಆಗುತ್ತಿದೆ ಎಂದು ರೇಗಿದ್ದರು. ಇದರಿಂದ ಈಗ ಜೀವ ಬೆದರಿಕೆ ಹಾಕಲಾಗಿದೆ. ಇದು ಪ್ರಾಂಶುಪಾಲ ವಿಜಯ್ ಅವರ ಗಮನಕ್ಕೆ ಬಂದಿದ್ದು ಮಡಿಕೇರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    VIDEO: ಸರ್‌… ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೀತಾರೆ… ಆಗ ಹುಡುಗರು ತೊಂದ್ರೆ ಕೊಡಲ್ವಾ?

    ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts