More

    VIDEO: ‘ಅಲ್ಲಾಹು ಅಕ್ಬರ್‌’: ಘಟನೆ ಪೂರ್ವನಿಯೋಜಿತ ಎಂದ ಪಾಕಿಸ್ತಾನದ ಚಾನೆಲ್‌! ಶಾಕಿಂಗ್‌ ವಿಡಿಯೋ ಇಲ್ಲಿದೆ…

    ಕರಾಚಿ: ‘ಭಾರತದಲ್ಲಿ ಹಿಜಾಬ್‌ ಘಟನೆಯ ಬಗ್ಗೆ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ. ಒಂದು ವೇಳೆ ನಮ್ಮ ಪಾಕಿಸ್ತಾನದಲ್ಲಿಯೇ ಯಾರಾದರೂ ಹಿಂದೂಗಳು ಬಂದು ‘ಜಯ ಶ್ರೀ ರಾಮ್‌’ ಎಂದು ಘೋಷಣೆ ಕೂಗಿದರೆ ಅವರ ಸ್ಥಿತಿ ಏನಾಗುತ್ತಿತ್ತು…? ಅಲ್ಲಾಹೋ ಅಕ್ಬರ್‌ ಎಂದು ಕೂಗಿರುವ ಈ ವಿದ್ಯಾರ್ಥಿನಿ ಸ್ಕೂಟಿಯಲ್ಲಿ ಬಂದು, ಅದನ್ನು ಪಾರ್ಕ್‌ ಮಾಡಿ, ಅಲ್ಲಾಹೋ ಅಕ್ಬರ್‌ ಎಂದು ಕೂಗುವವರೆಗೂ ಆಕೆಯನ್ನು ಹಿಂಬಾಲಿಸಿ ವಿಡಿಯೋ ಮಾಡಿದ್ದು ಯಾರು? ಇದರ ಅರ್ಥ ಆಕೆ ಹೀಗೆ ಕೂಗುತ್ತಾಳೆ ಎಂದು ಮೊದಲೇ ಗೊತ್ತಿತ್ತೆ? ಆ ಜಾಗದಲ್ಲಿ ಅಂದರೆ ಇಡೀ ಕಾಲೇಜಿನಲ್ಲಿ ಆಕೆಯೊಬ್ಬಳೇ ಹುಡುಗಿ ಇದ್ದಳೆ…?

    ಇಂಥ ಹತ್ತಾರು ಪ್ರಶ್ನೆಗಳನ್ನು ಕೇಳಿರುವುದು ಬೇರೆ ಯಾರೂ ಅಲ್ಲ, ಖುದ್ದು ಪಾಕಿಸ್ತಾನ! ಅಚ್ಚರಿ ಎನ್ನುವಂಥ ಈ ಚರ್ಚೆ ಪಾಕಿಸ್ತಾನದ ಖ್ಯಾತ ಪತ್ರಕರ್ತೆ ಆರ್ಜೂ ಕಾಜ್ಮಿಯವರ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರಗೊಂಡಿದೆ. ಪಾಕಿಸ್ತಾನದ ‘ರೋಜ್‌ ಟಿವಿ’ಯಲ್ಲಿ ಉದ್ಯೋಗದಲ್ಲಿರುವ ಆರ್ಜೂ ಅವರು, ತಮ್ಮ ಚಾನೆಲ್‌ನಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದಾರೆ. ಇವರ ಈ ಚರ್ಚೆ, ಕಾಲೇಜಿನಲ್ಲಿ ನಡೆದಿರುವ ಘಟನೆ ಪೂರ್ವನಿಯೋಜಿತ ಎಂದು ಹಲವಾರು ಮಂದಿ ಮಾಡುತ್ತಿರುವ ಆರೋಪಕ್ಕೆ ಪುಷ್ಟಿ ನೀಡುವಂತಾಗಿದೆ.

    ಇಡೀ ಘಟನೆ ನೋಡಿದರೆ ಅದು ಪೂರ್ವ ನಿಯೋಜಿತ ಎಂದೇ ಅನ್ನಿಸುತ್ತದೆ. ಅಲ್ಲಾಹೋ ಅಕ್ಬರ್‌ ಎಂದು ಘೋಷಣೆ ಕೂಗಿರುವ ಮಂಡ್ಯದ ವಿದ್ಯಾರ್ಥಿನಿ ಸ್ಕೂಟಿಯಲ್ಲಿ ದೂರದಿಂದ ಬಂದು ಅದನ್ನು ಪಾರ್ಕ್‌ ಮಾಡಿ ಕ್ಯಾಮೆರಾ ಮುಂದೆ ಬಂದು ಅಲ್ಲಾಹೋ ಅಕ್ಬರ್‌ ಎಂದು ಕೂಗುವವರೆಗೂ ವಿಡಿಯೋ ಮಾಡಿದ್ದನ್ನು ನೋಡಿದರೆ ಈ ಅನುಮಾನ ಕಾಡುತ್ತದೆ ಎಂದು ಪತ್ರಕರ್ತೆ ಹೇಳಿದ್ದಾರೆ.

    ಒಂದು ವೇಳೆ ನೂರಾರು ಮಂದಿ ಅಲ್ಲಾಹೋ ಅಕ್ಬರ್‌ ಎಂದು ಘೋಷಣೆ ಕೂಗುತ್ತಿದ್ದರೆ ಅಲ್ಲಿಗೆ ಹೋಗಿ ತನ್ನದೇ ಇನ್ನೊಂದು ಘೋಷಣೆ ಕೂಗುವಷ್ಟು ಧೈರ್ಯ ಸಾಮಾನ್ಯ ಜನರಿಗೆ ಸಾಧ್ಯವೇ ಇಲ್ಲ. ಅಂಥದ್ದರಲ್ಲಿ ಒಬ್ಬ ಹೆಣ್ಣುಮಗಳು ಹೀಗೆ ಹೋಗಿ ಕೂಗಿದ್ದಾಳೆ ಎಂದರೆ ಒಂದೋ ಅದು ಪೂರ್ವ ನಿಯೋಜಿತ, ಇಲ್ಲದಿದ್ದರೆ ಭಾರತದಲ್ಲಿ ಮುಸ್ಲಿಮರಿಗೆ ಇರುವಷ್ಟು ಸುರಕ್ಷತೆ ಬೇರೆಲ್ಲೂ ಕಾಣಸಿಗುವುದಿಲ್ಲ ಎಂದೇ ಹೇಳಬಹುದು. ಇದೇ ಕೃತ್ಯ ನಮ್ಮ ಪಾಕಿಸ್ತಾನದಲ್ಲಿ ಆಗಿದ್ದರೆ, ಹಿಂದೆ ಆಗಿರುವ ಕೆಲವು ಉದಾಹರಣೆಗಳಂತೆ ಆ ಹಿಂದೂ ಯುವಕ ಅಥವಾ ಯುವತಿಯ ಗತಿ ಆಗುತ್ತಿತ್ತು ಎಂದು ಚರ್ಚೆಯಲ್ಲಿ ಹೇಳಲಾಗಿದೆ.

    ಭಾರತದಲ್ಲಿ ಮುಸ್ಲಿಮರು ಸೇಫ್‌ ಅಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಆದರೆ ಈ ಘಟನೆ ನೋಡಿದರೆ ಹಾಗೆ ಅನ್ನಿಸುವುದೇ ಇಲ್ಲ. ಅಷ್ಟು ಗಂಡುಮಕ್ಕಳ ಎದುರು ತಾನು ಹೋಗಿ ತನ್ನದೇ ಘೋಷಣೆ ಕೂಗುವಷ್ಟು ಶಕ್ತಿ ಇದೆ ಎಂದರೆ ಆಕೆಗೆ ಮೊದಲೇ ತಾನು ಮತ್ತು ತನ್ನ ಕುಟುಂಬ ಏನೇ ಮಾಡಿದರೂ ಸೇಫ್‌ ಆಗಿರುತ್ತದೆ ಎಂದು ತಿಳಿದಿತ್ತು ಎಂದೇ ಅರ್ಥ. ಆದರೆ ಇಡೀ ಘಟನೆ ನೋಡಿದರೆ ಈ ಘಟನೆಯ ಹಿಂದೆ ಅನುಮಾನ ಬರದೇ ಇರಲಾರದು ಎಂದು ಚರ್ಚಿಸಲಾಗಿದೆ.

    ಇಡೀ ಕಾಲೇಜಿನಲ್ಲಿ ಯಾವ ಧರ್ಮದ ಬೇರೆ ವಿದ್ಯಾರ್ಥಿನಿ ಇರಲಿಲ್ಲವೆ? ವಿಡಿಯೋದಲ್ಲಿ ಎಲ್ಲಿಯೂ ಹೆಣ್ಣುಮಕ್ಕಳು ಕಾಣಿಸುವುದೇ ಇಲ್ಲ. ಹುಡುಗರು ಮಾತ್ರ ‘ಜಯ್‌ ಶ್ರೀ ರಾಮ್‌’ ಎನ್ನುತ್ತಿದ್ದಾರೆ. ಹಾಗಿದ್ದರೆ ನಿಜಕ್ಕೂ ಆಗಿದ್ದೇನು? ಇವೆಲ್ಲಾ ನೋಡಿದರೆ ಅನುಮಾನ ಕಾಡದೇ ಇರದು’ ಎಂದು ಇದರಲ್ಲಿ ಚರ್ಚಿಸಲಾಗಿದೆ.

    ಈ ಟಿವಿ ಚರ್ಚೆಯ ವಿಡಿಯೋ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts