More

    ‘ಹಿಜಾಬನ್ನೇ ಯೂನಿಫಾರ್ಮ್ ಮಾಡಿಬಿಡಿ, ಭಾರತದ ದುರ್ದೈವ… ಇಲ್ಲಿ ಮಾತ್ರ ಬಹುಸಂಖ್ಯಾತರದ್ದು ಈ ಸ್ಥಿತಿ’

    ಚಿಕ್ಕಮಗಳೂರು: ಹಿಜಾಬನ್ನೇ ಶಾಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ಮಾಡಿ. ಅಲ್ಲಿಗೆ ಸಮಸ್ಯೆ ಬಗೆಹರಿಯಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು ಎಂದು ಪ್ರಶ್ನಿಸಿದ ಅವರು, ಭಾರತದ ದುರ್ದೈವ ನೋಡಿ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವ ಘಟನೆಗಳು ಜಗತ್ತಿನೆಲ್ಲೆಡೆ ಕಂಡುಬರುತ್ತಿದೆ. ಜಗತ್ತಿನಾದ್ಯಂತ ಅಲ್ಪಸಂಖ್ಯಾತರು ನಮಗೆ ಸಮಾನಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಆದರೆ ದುರ್ದೈವ, ನಮ್ಮ ದೇಶದಲ್ಲಿ ಬಹುಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಬಹುಸಂಖ್ಯಾತರು ಸಮಾನತೆ ಇರಲಿ ಎಂದು ಹೇಳುತ್ತಿದ್ದಾರೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದರು.

    ಅಲ್ಪಸಂಖ್ಯಾತರು ನಮ್ಮದೇ ಬೇರೆ, ನಮ್ಮದೇ ನಡೀಬೇಕು ಎಂದು ಇಲ್ಲಿ ಹೇಳುತ್ತಿರುವುದು ದುರದೃಷ್ಟಕರ. ನಾನೇ ಬೇರೇ ಎನ್ನುವ ಮನಸ್ಥಿತಿ ಅಪಾಯಕಾರಿ. ಬಹಳ ಸಂಕಷ್ಟವನ್ನು ಅನುಭವಿಸಿರುವ ಜಗತ್ತಿನ ರಾಷ್ಟ್ರ ಭಾರತ. ಸಂಕಷ್ಟ ಅನುಭವಿಸಿ ಪ್ರತೀಕಾರ ಮಾಡದಿರುವ ರಾಷ್ಟ್ರಕೂಡ ಭಾರತವೇ. ಜಗತ್ತಿನಲ್ಲಿ ಎಲ್ಲೂ ನಡೆಯಲು ಸಾಧ್ಯವಾಗದ್ದು ಭಾರತದಲ್ಲಿ ಮಾತ್ರ ನಡೀತಿದೆ ಎಂದು ಅವರು ಹೇಳಿದರು.

    ಶಾಲೆಯಲ್ಲಿ ಯೂನಿಫಾರಂ ಇರುವ ಉದ್ದೇಶವೇ ಬೇರೆ. ಅಲ್ಲಿ ನಾನು ಬೇರೆ ಎಂದರೆ ಅಲ್ಲಿಂದಲೇ ಪ್ರತ್ಯೇಕತೆ ಹುಟ್ಟಿಕೊಳ್ಳುತ್ತದೆ. ನಾನೇ ಬೇರೆ, ನೀನೇ ಬೇರೆ ಎನ್ನುವುದು ಜಾತ್ಯಾತೀತತೆ ಅಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು (ದಿಗ್ವಿಜಯ ನ್ಯೂಸ್)

    ಅತ್ಯಾಚಾರಿ, ಕೊಲೆಗಾರ, ‘ದೇವಮಾನವ’ ಪಂಜಾಬ್‌ ಚುನಾವಣೆ ಮುಗಿಯುವವರೆಗೆ ಜೈಲಿನಿಂದ ಬಿಡುಗಡೆ! ಏನಿದರ ಗುಟ್ಟು?

    ಗ್ರಾಮಸ್ಥರ ಪ್ರೀತಿಯ ಗುಬ್ಬಚ್ಚಿಗೆ ನಿರ್ಮಾಣವಾಯ್ತು ಸಮಾಧಿ- ಬಾಡೂಟದೊಂದಿಗೆ ನೆರವೇರಿತು ತಿಥಿಕಾರ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts