More

    ಹೈಸ್ಕೂಲ್‌ ಮುಗಿಸಿ 18 ವರ್ಷಗಳ ಬಳಿಕ ಈ ಅಪ್ಪ ಕಾಲೇಜು ಸೇರಿದ್ದು ಯಾಕೆ ಗೊತ್ತಾ?

    ನವದೆಹಲಿ: ಎಷ್ಟೋ ಸಂದರ್ಭಗಳಲ್ಲಿ ವಯಸ್ಸಿಗೂ, ಅವರು ಮಾಡುವ ಕೆಲಸಕ್ಕೂ ತಾಳೆಯೇ ಆಗುವುದಿಲ್ಲ. ವಯೋವೃದ್ಧರು ಕೂಡ ಚುಟುಪುಟು ಎಂದು ಚಿಕ್ಕಮಕ್ಕಳಂತೆ ಓಡಾಡಿಕೊಂಡು ಕೆಲಸ ಮಾಡುತ್ತಿದ್ದರೆ, 25 ದಾಟುತ್ತಿದ್ದಂತೆಯೇ ವೃದ್ಧರ ಹಾಗೆ ಚಟುವಟಿಕೆಯೇ ಇಲ್ಲದೇ ಒಂದೆಡೆ ಕುಳಿತುಕೊಳ್ಳುವವರೂ ಇದ್ದಾರೆ.

    ಇದೇ ಕಾರಣಕ್ಕೆ ವಯಸ್ಸು ಎನ್ನುವುದು ದೇಹಕ್ಕೆ ಆಗುವುತ್ತಾ ಹೋಗುತ್ತದೆಯೇ ವಿನಾ, ವಯಸ್ಸಿಗೂ ಮನಸ್ಸಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ. ದೇಹದ ವಯಸ್ಸೇ ಬೇರೆ, ಮನಸ್ಸಿನ ವಯಸ್ಸೇ ಬೇರೆ ಎನ್ನುವುದು ಕೂಡ ಇದೇ ಕಾರಣಕ್ಕೆ.

    ವಯಸ್ಸಿನ ಬಗ್ಗೆ ಇಷ್ಟೆಲ್ಲಾ ಇಲ್ಲಿ ಏಕೆ ಹೇಳಬೇಕಾಯಿತು ಎಂದರೆ ಇಲ್ಲೊಬ್ಬ ವ್ಯಕ್ತಿ ಹೈಸ್ಕೂಲ್‌ ಮುಗಿಸಿ 18 ವರ್ಷಗಳ ಬಳಿಕ ಕಾಲೇಜು ಸೇರಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ಅದೀಗ ಸಕತ್‌ ವೈರಲ್‌ ಆಗಿದೆ, ಜತೆಗೆ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದಿದೆ.

    ಇದನ್ನೂ ಓದಿ: ಕರೊನಾ ಸೋಂಕು: ಸಚಿವ ಈಶ್ವರಪ್ಪ ಆಸ್ಪತ್ರೆಗೆ ದಾಖಲು

    ದೆಹಲಿಯ ಈ ವ್ಯಕ್ತಿಯ ಹೆಸರು ಕ್ರಿಸ್ಟೋಫರ್‌. ಇವರಿಗೆ 36 ವರ್ಷ ವಯಸ್ಸು. ಕಲಿಯುವುದಕ್ಕೆ ಈ ವಯಸ್ಸು ಅಷ್ಟೇನು ಹೆಚ್ಚು ಅಲ್ಲದಿದ್ದರೂ, ಇವರು ಕಾಲೇಜು ಸೇರಿರುವ ಹಿಂದಿನ ಉದ್ದೇಶ ಜನರಿಗೆ ತುಂಬಾ ಇಷ್ಟವಾಗಿದೆ. ಅದೇನೆಂದರೆ ಇವರಿಗೆ ಒಬ್ಬಳು ಮಗಳಿದ್ದು, ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಆಕೆಗೆ ಕಲಿಸುವ ಉದ್ದೇಶದಿಂದ ಇವರು ಕಾಲೇಜು ಸೇರಿದ್ದಾರಂತೆ.

    ಈ ಕುರಿತು ಅವರು ಫೋಟೋ ಶೇರ್‌ ಮಾಡಿದ್ದಾರೆ. ರೆಡ್ಡಿಟ್‌ನಲ್ಲಿ ಕಾಲೇಜಿನಲ್ಲಿ ತಮ್ಮ ಮೊದಲ ದಿನವನ್ನು ಕಳೆದ ಫೋಟೋವೊಂದನ್ನು ಪೋಸ್ಟ್ ಮಾಡಿಕೊಂಡಿರುವ ಕ್ರಿಸ್ಟೋಫರ್‌, “Christopher’s first day of college. I am 36 years old,” ಎಂಬ ಬೋರ್ಡ್ ‌ಅನ್ನು ಹಿಡಿದು ನಿಂತಿದ್ದಾರೆ.

    “ಏನು ಬೇಕಾದರೂ ಸಾಧಿಸಬಹುದು ಎಂದು ನನ್ನ ಮಗಳಿಗೆ ತೋರಿಸಲು ನಾನು ಹೈಸ್ಕೂಲ್‌ ಮುಗಿಸಿ 18 ವರ್ಷಗಳ ಬಳಿಕ ಕಾಲೇಜಿನ ಮೆಟ್ಟಿಲೇರುತ್ತಿದ್ದೇನೆ” ಎಂದು ಹೇಳಿದ್ದಾರೆ ಕ್ರಿಸ್ಟೋಫರ್‌. ಮಗಳಿಗೆ ಬೇರೆಯವರ ಆದರ್ಶಗಳ ಬಗ್ಗೆ ಹೇಳುವ ಮೊದಲು, ನಾನೇ ಆದರ್ಶ ಅಪ್ಪನಾಗಿ ತೋರಿಸಬೇಕು ಎನ್ನಿಸಿತು. ಅವಳಿಗೆ ಜೀವನದಲ್ಲಿ ಮುಂದೆ ಬರಲು ನಾನೇ ಮಾದರಿಯಾಗಬೇಕು ಎನ್ನಿಸಿತು. ಇದೇ ಕಾರಣಕ್ಕೆ ಕಾಲೇಜು ಸೇರಿದ್ದೇನೆ ಎಂದು ಅವರು ಹೇಳಿದ್ದಾರೆ.

    ಈ ‘ನೀಲಿ’ ನಟನ ಮೇಲಿದೆ 25ಕ್ಕೂ ಅಧಿಕ ರೇಪ್‌ ಕೇಸ್‌: ಆರೋಪ ಸಾಬೀತಾದರೆ 250 ವರ್ಷ ಶಿಕ್ಷೆ!

    ಟೆಲಿಕಾಂ ಸಂಸ್ಥೆಗಳಿಂದ ಸಾವಿರಾರು ಕೋಟಿ ಶುಲ್ಕ ಬಾಕಿ : ಸುಪ್ರೀಂನಿಂದ 10 ವರ್ಷ ಗಡುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts