More

    ವೈದ್ಯರ ಎಡವಟ್ಟು- ನಾಲಗೆಯ ಮೇಲೆ ಬೆಳೆಯುತ್ತಲೇ ಇದೆ ಕೂದಲು, ಆಹಾರ ತಿನ್ನುವುದೂ ಕಷ್ಟ!

    ಕೊಲೆರಾಡೊ (ಅಮೆರಿಕ) : ವೈದ್ಯರು ಮಾಡಿದ ಎಡವಟ್ಟಿನಿಂದಾಗಿ ಮಹಿಳೆಯೊಬ್ಬರ ನಾಲಗೆಯ ಮೇಲೆ ಕೂದಲು ಬೆಳೆಯುತ್ತಿದ್ದು, ಆಹಾರಗಳನ್ನು ತಿನ್ನಲು ಕೂಡ ಅವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಇಂಥದ್ದೊಂದು ಘಟನೆ ನಡೆದಿರುವುದು ಅಮೆರಿಕದ ಕೊಲೆರಾಡೊವಿನಲ್ಲಿ. ಜಿಮ್ನಾಸ್ಟಿಕ್​ ತರಬೇತುದಾರಾಗಿರುವ ಕ್ಯಾಮರೂನ್​ ನ್ಯೂಜಂ ಎಂಬ 42 ವರ್ಷದ ಮಹಿಳೆ ಇದೀಗ ತೊಂದರೆಗೆ ಸಿಲುಕಿದವರು.

    ಅಷ್ಟಕ್ಕೂ ಆಗಿದ್ದೇನೆಂದರೆ, ಕ್ಯಾಮರೂನ್​ ನ್ಯೂಜಂ ಅವರಿಗೆ ನಾಲಗೆಯ ಕ್ಯಾನ್ಸರ್‌ ಆಗಿತ್ತು. ಆದ್ದರಿಂದ ಅವರ ಅರ್ಧ ನಾಲಗೆಯನ್ನು ಕತ್ತರಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಕತ್ತರಿಸಿದ ನಾಲಗೆಗೆ ದೇಹದ ಯಾವುದಾದರೂ ಭಾಗದ ಚರ್ಮವನ್ನು ಹಾಕಬೇಕಿತ್ತು. ಆಗ ವೈದ್ಯರು ಮುಂದೆ ಏನಾಗಬಹುದು ಎಂಬ ಅರಿವು ಇಲ್ಲದೆಯೇ ಕಾಲಿನ ಚರ್ಮವನ್ನು ಕಸಿ ಮಾಡಿದ್ದರು.

    ಕ್ಯಾಮರೂನ್ ಅವರ ಕಾಲಿನ ಮೇಲೆ ಕೂದಲು ಹೆಚ್ಚಾಗಿಯೇ ಬೆಳೆಯುತ್ತಿತ್ತು. ಅದನ್ನೇ ನಾಲಗೆಗೆ ಕಸಿ ಮಾಡಿರುವ ಕಾರಣ, ಅಲ್ಲಿಯೂ ಕೂದಲು ಬೆಳೆಯಲು ಶುರುವಾಗಿದೆ. ಕ್ಯಾನ್ಸರ್​ನಿಂದ ಗುಣಮುಖವಾಗುತ್ತಿದ್ದರೂ ಇದೀಗ ಈ ಕೂದಲು ಭಾರಿ ಸಮಸ್ಯೆಯನ್ನು ತಂದೊಟ್ಟಿದೆ. ತಿನ್ನಲು, ಕುಡಿಯಲು ಸಾಧ್ಯವಾಗದೇ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆಯಂತೆ!

    ‘33 ವರ್ಷವಿದ್ದಾಗ ನಾಲಿಗೆ ಊದಿಕೊಂಡಿತ್ತು. ತಪಾಸಣೆ ಮಾಡಿದಾಗ ಕ್ಯಾನ್ಸರ್​ ಎಂದು ಗೊತ್ತಯಿತು. ನಂತರ ಕಿಮೋಥೆರಪಿ ಮಾಡಿ, ನಾಲಗೆ ಕಟ್‌ ಮಾಡಿ ಕ್ಯಾನ್ಸರ್​ ಗಡ್ಡೆಯನ್ನು ತೆಗೆದರು. ಆ ಸಂದರ್ಭದಲ್ಲಿ ಮಾತಾಡಲು, ತಿನ್ನಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ನಾಲಗೆಗೆ ಕಾಲಿನ ಚರ್ಮವನ್ನು ಕಸಿ ಮಾಡಿದ್ದಾರೆ. ಆದರೆ ಇದೀಗ ಈ ಸಮಸ್ಯೆ ಉಂಟಾಗಿದ್ದು, ಪುನಃ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದೆ. ಒಂದು ವೇಳೆ ಶಸ್ತ್ರಚಿಕಿತ್ಸೆಯಿಂದ ಸಮಸ್ಯೆ ಎಂದು ಗೊತ್ತಾದರೆ ಇದರ ಜತೆಗೇ ಬಾಳದೇ ಬೇರೆ ದಾರಿಯಿಲ್ಲ ಎಂದು ಮಾಧ್ಯಮಗಳ ಮುಂದೆ ಮಹಿಳೆ ಹೇಳಿಕೊಂಡಿದ್ದಾರೆ.

    ವರನಿಗೆ 85, ವಧುವಿಗೆ 65: ಅಜ್ಜನಿಗೆ ಮದುವೆ ಮಾಡಿಸಿದ ಮೊಮ್ಮಕ್ಕಳು- ಮೈಸೂರಲ್ಲೊಂದು ಅಪರೂಪದ ವಿವಾಹ

    VIDEO: ಅದ್ಧೂರಿಯಾಗಿ ಮದ್ವೆಯಾಗಲು ಸಿನಿಮೀಯ ಸ್ಟೈಲ್‌ನಲ್ಲಿ ಬ್ಯಾಂಕ್‌ ದರೋಡೆ ಮಾಡಿ ಸಿಕ್ಕಬಿದ್ದ ವಿಜಯಪುರದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts