More

    ಗುಜರಾತ್​ನಲ್ಲಿ 100% ಮಧ್ಯಪ್ರದೇಶದಲ್ಲಿ 80% ಅರಳುತಿದೆ ಕಮಲ

    ನವದೆಹಲಿ: ಗುಜರಾತ್​ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವಿನತ್ತ ಸಾಗಿದ್ದಾರೆ. ಗುಜರಾತ್​ನಲ್ಲಿ ಎಂಟಕ್ಕೆ ಎಂಟು ಸೀಟು ಬಿಜೆಪಿ ಭರ್ಜರಿ ಗೆಲುವಿನತ್ತ ಸಾಗಿದ್ದರೆ, ಮಧ್ಯಪ್ರದೇಶದಲ್ಲಿ 28 ಸೀಟುಗಳ ಪೈಕಿ 21ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಗುಜರಾತ್​ನ ಅಬ್ದುಸಾ, ಕರ್ಜನ್, ಮೊರ್ಬಿ, ಗಡಾಡಾ, ಧಾರಿ, ಲಿಂಬ್ಡಿ, ಕಪ್ರಡಾ ಮತ್ತು ಡ್ಯಾಂಗ್ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಎಲ್ಲದರಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗುಜರಾತ್​ ಮುಖ್ಯಮಂತ್ರಿ ವಿಜಯ್ ರೂಪಾನಿ, ಎಲ್ಲರೂ ಜಯ ಗಳಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಈ ಉಪ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ಟ್ರೈಲರ್ ಆಗಿದ್ದು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದರು.

    ಇದನ್ನೂ ಓದಿ: LIVE: ರಾಜರಾಜೇಶ್ವರಿ ನಗರದಲ್ಲಿ ಅರಳಿದ ಕಮಲ, ಬಾಡಿದ ಕುಸುಮಾ

    ಈ ವರ್ಷದ ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಗುಜರಾತ್‌ನಲ್ಲಿ ಉಪಚುನಾವಣೆ ನಡೆದಿತ್ತು. ಈ ಪೈಕಿ ಐವರು ಶಾಸಕರು ನಂತರ ಆಡಳಿತಾರೂಢ ಬಿಜೆಪಿಗೆ ಸೇರಿದರು.

    ಮಧ್ಯಪ್ರದೇಶದಲ್ಲಿ, 21 ಬಿಜೆಪಿ ಹೊರತುಪಡಿಸಿ, ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಒಂದು ಸ್ಥಾನದಲ್ಲಿ ಮುನ್ನಡೆಯಲ್ಲಿದೆ. 230 ಸದಸ್ಯರು ಇರುವ ವಿಧಾನಸಭೆಯಲ್ಲಿ ಬಿಜೆಪಿ 107 ಶಾಸಕರನ್ನು ಹೊಂದಿದ್ದು, ಅಧಿಕಾರದಲ್ಲಿರಲು ಕನಿಷ್ಠ ಒಂಬತ್ತು ಸ್ಥಾನಗಳ ಅಗತ್ಯವಿದೆ. ಮತ್ತೊಂದೆಡೆ, ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ಬಯಸಿದರೆ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲೇಬೇಕಿದೆ.

    ಎಂಜಿಬಿ ಎಂದರೆ ಮಹಾಘಟ್​​ಬಂಧನ ಅಲ್ಲ… ‘ಮರ್​ ಗಯಾ ಭಾಯ್’ ಎಂದ್ರಂತೆ ರಾಹುಲ್​!

    ಮಣಿಪುರದ ಉಪಚುನಾವಣೆ: ಭರ್ಜರಿ ಗೆಲುವಿನೊಂದಿಗೆ ಖಾತೆ ತೆರೆದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts