More

    ಶಿಕ್ಷಕರ, ಪದವೀಧರರ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಮುನ್ನಡೆ- ಪುಟ್ಟಣ್ಣ ಗೆಲುವು

    ಬೆಂಗಳೂರು: ಒಂದೆಡೆ, ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ, ಇತ್ತ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿಯೂ ಪಕ್ಷವು ಮುನ್ನಡೆ ಕಾಣಿಸುತ್ತಿದೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟಣ್ಣ ಅವರು 2228 ಮತಗಳ ಅಂತರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

    ಇದು ಸತತ ನಾಲ್ಕನೆಯ ಗೆಲುವು ಅವರದ್ದು, ಈ ಹಿಂದೆ ಮೂರು ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪುಟ್ಟಣ್ಣ ಅವರು ಗೆಲುವು ಸಾಧಿಸಿದ್ದಾರೆ.

    ಇದನ್ನೂ ಓದಿ: ಇವಿಎಂ ಅಸಲಿಯತ್ತು: ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ ತಮ್ಮ ಪಕ್ಷದವರಿಗೆ ಹೇಳಿದ್ದೇನು?

    ಪುಟ್ಟಣ್ಣ ಅವರು 7335 ಮತಗಳನ್ನು ಪಡೆದರೆ, ಎ.ಪಿ.ರಂಗನಾಥ ಅವರು 5107 ಮತಗಳನ್ನು ಪಡೆದಿದ್ದು, ಪ್ರವೀಣ್ ಪೀಟರ್ ಅವರು 782 ಮತಗಳನ್ನು ಪಡೆದಿದ್ದಾರೆ.

    ಇನ್ನೊಂದೆಡೆ, ಕಲಬುರ್ಗಿಯಲ್ಲಿ ನಡೆಯುತ್ತಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯ ಎರಡನೆಯ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್​ ನಮೋಶಿ ಮುನ್ನಡೆ ಸಾಧಿಸಿದ್ದರೆ, ಧಾರವಾಡದ ಪಶ್ಚಿಮ ಪದವೀಧರರ ಕ್ಷೇತ್ರದ ಎರಡನೆಯ ಸುತ್ತಿನ ಮತಎಣಿಕೆಯಲ್ಲಿ ಬಿಜೆಪಿಯವರೇ ಆದ ಎಸ್​.ವಿಸಂಕನೂರು ಮುನ್ನಡೆ ಸಾಧಿಸಿದ್ದಾರೆ.

    ‘ಜ್ಯೋತಿಷಿಗಳ ಬದಲು ಜನರ ನಾಡಿಮಿಡಿತ ಅರಿತಿದ್ರೆ ಕಾಂಗ್ರೆಸ್​ಗೆ ಹೀಗಾಗ್ತಿರಲಿಲ್ಲ’

    ‘ಹಿಂದೊಮ್ಮೆ ಎರಡೇ ಸೀಟು ಬಂದಿತ್ತು- ನಂತರ ಸಿಎಂ, ಪಿಎಂ ಸ್ಥಾನ ಸಿಕ್ಕಿತು, ನಿರಾಶರಾಗಬೇಡಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts