More

    ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಶಾಕ್​- ನೇರ ನೇಮಕಾತಿಯ ಅಧಿಸೂಚನೆಗಳು ರದ್ದು; ಕನಸು ನುಚ್ಚುನೂರು

    ಬೆಂಗಳೂರು: ಕರೊನಾದಿಂದ ಸರ್ಕಾರಿ ಹುದ್ದೆಗಳ ನೇಮಕಾತಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಅಭ್ಯರ್ಥಿಗಳಿಗೆ ವಯೋಮಿತಿ ಮೀರುವ ಆತಂಕವಿದೆ. ಇದರಿಂದ ಸರ್ಕಾರಿ ಹುದ್ದೆ ಪಡೆಯುವ ಲಕ್ಷಾಂತರ ಪ್ರತಿಭಾವಂತ ನಿರುದ್ಯೋಗಿ ಪದವೀಧರರ ಕನಸು ನುಚ್ಚುನೂರು ಆಗಲಿದೆ.

    ಲೋಕೋಪಯೋಗಿ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್), ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್), ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್), ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿ ಕೆಪಿಎಸ್ಸಿ ವಿವಿಧ ಇಲಾಖೆಗಳ ನೇರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಿದೆ. ಜತೆಗೆ, ಆರ್ಥಿಕ ನೆಪ ಮುಂದಿಟ್ಟುಕೊಂಡು ಎರಡು ವರ್ಷದವರೆಗೆ ನೇಮಕಾತಿ ಅಧಿಸೂಚನೆ ಹೊರಡಿಸುವುದನ್ನು ನಿಷೇಧಿಸಲಾಗಿದೆ.

    ವಯೋಮಿತಿ ಏರಿಸಿ: ಉತ್ತರ ಪ್ರದೇಶ, ತಮಿಳುನಾಡು, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜಸ್ಥಾನದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ವಯೋಮಿತಿ ಏರಿಕೆ ಮಾಡಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಗ್ರೂಪ್ ‘ಎ’ ‘ಬಿ’ ‘ಸಿ’ ಮತ್ತು ‘ಡಿ’ ಹುದ್ದೆಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗಕ್ಕೆ 35 ವರ್ಷ, ಒಬಿಸಿ ವರ್ಗಕ್ಕೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ 40 ವರ್ಷಯಿದೆ. ಆದರೆ, ಕರೊನಾದಿಂದ ಸರ್ಕಾರಿ ಹುದ್ದೆಗಳ ನೇಮಕಾತಿ ಆದೇಶವನ್ನು ಸ್ಥಗಿತಕೊಂಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ. ಹಾಗಾಗಿ, ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಗರಿಷ್ಠ ವಯೋಮಿತಿ ಪರಿಷ್ಕರಿಸಿ ಸಾಮಾನ್ಯ ವರ್ಗಕ್ಕೆ 40 ವರ್ಷ, ಒಬಿಸಿ 43 ವರ್ಷ ಹಾಗೂ ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ 45 ವರ್ಷಕ್ಕೆ ಹೆಚ್ಚಿಸಬೇಕು ಎಂದು ನಿರುದ್ಯೋಗಿ ಪದವೀಧರರ ಆಗ್ರಹವಾಗಿದೆ.

    2.60 ಲಕ್ಷ ಹುದ್ದೆ ಖಾಲಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಂದಾಜು 2.60 ಲಕ್ಷ ಹುದ್ದೆಗಳು ಖಾಲಿಯಿದೆ. ಸರ್ಕಾರಗಳು ಕಾಲ ಕಾಲಕ್ಕೆ ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡದ ಕಾರಣದಿಂದ ಸಾರ್ವಜನಿಕರ ಕೆಲಸಗಳ ವಿಳಂಬವಾಗುತ್ತಿದೆ. ಜತೆಗೆ, ದಿನದಿಂದ ದಿನಕ್ಕೆ ಹಾಲಿ ಸರ್ಕಾರಿ ನೌಕರರಿಗೆ ಕೆಲಸದ ಒತ್ತಡವೂ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಖಾಲಿಯಾದ ಹುದ್ದೆಗಳಿಗೆ ಅಧಿಸೂಚನೆ ಮಾಡದೆ ಇರುವುದರಿಂದ ಲಕ್ಷಾಂತರ ಅಭ್ಯರ್ಥಿಗಳ ವಯೋಮಿತಿ ಮೀರುತ್ತಿದೆ.

    ಎಲೆಕ್ಟ್ರಿಕಲ್​, ಎಲೆಕ್ಟ್ರಾನಿಕ್ಸ್​ ಆಗಿದೆಯೆ? ಮೆಟ್ರೋ ರೈಲ್​ ಕಾರ್ಪೋರೇಷನ್​ನಲ್ಲಿ ಭರಪೂರ ಉದ್ಯೋಗ

    ಕೃಷಿ ಸಂಬಂಧಿತ ಪದವೀಧರರಿಗೆ ಇಲ್ಲಿದೆ ಅವಕಾಶ: ಉನ್ನತ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಐಟಿಐ ಪದವೀಧರರಿಗೆ ಬಿಗ್​ ಆಫರ್​- 304 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಇಂಜಿನಿಯರಿಂಗ್​ ಪದವಿ ಮುಗಿಸಿರುವಿರಾ? ಕೇಂದ್ರ ಸರ್ಕಾರದಲ್ಲಿ ನಿಮಗಾಗಿ ಕಾದಿವೆ 200 ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts