More

    ಗೂಗಲ್​ ಓಪನ್​ ಮಾಡಿದ ತಕ್ಷಣ ಇಂದು ಕಾಣಿಸಿಕೊಳ್ಳುತ್ತಿರುವ ವ್ಯಕ್ತಿ ಯಾರು ಗೊತ್ತಾ?

    ವಾಷಿಂಗ್ಟನ್​: ಇಂದು ಗೂಗಲ್​ ಡಾಟ್​ ಕಾಮ್​ ಕ್ಲಿಕ್ಕಿಸಿದಾಗ ಅದರಲ್ಲಿ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಾರೆ. ಅವರು ಯಾರೆಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

    ಇವರು ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಸರ್ ಡಬ್ಲ್ಯೂ ಅರ್ಥರ್ ಲೆವೀಸ್​. 1979ರಲ್ಲಿ ಇದೇ ದಿನ ಇವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗಿತ್ತು. ಆಧುನಿಕ ಅರ್ಥಶಾಸ್ತ್ರ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳಿಗಾಗಿ ಇವರಿಗೆ ನೋಬೆಲ್​ ಪ್ರಶಸ್ತಿ ನೀಡಲಾಗಿದೆ. ಇಂದು ಗೂಗಲ್ ಡೂಡಲ್ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.

    ಮ್ಯಾಂಚೆಸ್ಟರ್ ಮೂಲದ ಕಲಾವಿದ ಕ್ಯಾಮಿಲ್​ ಅವರು ರಚಿಸಿರುವ ಇಲ್ಲಸ್ಟ್ರೇಷನ್ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ.

    ಇನ್ನು ಲೆವೀಸ್​ ಕುರಿತು ಹೇಳುವುದಾದರೆ, ಇವರನ್ನು ಆಧುನಿಕ ಆರ್ಥಿಕಾಭಿವೃದ್ಧಿಯ ಪಿತಾಮಹ ಎಂದೇ ಹೇಳಲಾಗುತ್ತದೆ. 1915ರಲ್ಲಿ ಸೇಂಟ್ ಲೂಸಿಯಾದ ಕೆರಿಬಿಯನ್ ದ್ವೀಪದಲ್ಲಿ ಜನಿಸಿದ ಸರ್ ಲೆವಿಸ್ ಅವರ ಅಪ್ಪ-ಅಮ್ಮ ಇಬ್ಬರೂ ಶಾಲಾ ಶಿಕ್ಷಕರಾಗಿದ್ದವರು.

    ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ತಮ್ಮ 14ನೇ ವಯಸ್ಸಿಗೆ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸಿದ ಲೆವೀಸ್​ ಅಲ್ಲಿನ ಸರ್ಕಾರಿ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡರು. ಆದರೂ ಓದುವ ಹಂಬಲವಿತ್ತು. 1932ರಲ್ಲಿ ಸರ್ಕಾರಿ ಸ್ಕಾಲರ್​ಷಿಪ್ ಪಡೆದು, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್​ಗೆ ತೆರಳಿ ವಿದ್ಯಾಭ್ಯಾಸ ಮುಂದುವರೆಸಿದರು.

    ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನ ಮೊದಲ ಕಪ್ಪು ಜನಾಂಗೀಯ ಪ್ರಾಧ್ಯಾಪಕರಾಗಿದ್ದವರು. ಬ್ರಿಟನ್​ ವಿಶ್ವವಿದ್ಯಾಲಯದ ಉತ್ತುಂಗ ಸ್ಥಾನವನ್ನೇರಿದ ಮೊದಲ ಕಪ್ಪು ಜನಾಂಗೀಯ ವ್ಯಕ್ತಿ ಎಂಬ ಹೆಮ್ಮೆ ಕೂಡ ಇವರದ್ದು. ಈ ಮೂಲಕ ಕಪ್ಪು ಜನಾಂಗೀಯರಿಗೆ ಸಿಗಬೇಕಾದ ಗೌರವ, ಸೌಲಭ್ಯಗಳನ್ನು ತಮ್ಮ ಜ್ಞಾನದ ಮೂಲಕ ಗಿಟ್ಟಿಸಿಕೊಂಡ ಲೆವೀಸ್​ ವರ್ಣಭೇದ ನೀತಿಯ ವಿರುದ್ಧ ತಮ್ಮದೇ ರೀತಿಯಲ್ಲಿ ಹೋರಾಡಿ, ಮಾನ್ಯತೆ ಪಡೆದರು.

    ಇವರು ಸಾಕಷ್ಟು ವರ್ಣ ತಾರತಮ್ಯವನ್ನು ಎದುರಿಸಿದ್ದಾರೆ. 33ನೇ ವಯಸ್ಸಿಗೆ ಅವರು ಪೂರ್ಣ ಪ್ರಮಾಣದ ಪ್ರೊಫೆಸರ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಆಫ್ರಿಕಾ, ಏಷ್ಯಾ, ಕೆರಿಬಿಯನ್ ಸರ್ಕಾರಗಳಿಗೆ ಆರ್ಥಿಕ ಸಲಹೆಗಾರರೂ ಆಗಿದ್ದ ಇವರು ಕೆರಿಬಿಯನ್ ಡೆವಲಪ್​ಮೆಂಟ್ ಬ್ಯಾಂಕ್​ನ ಮೊದಲ ಅಧ್ಯಕ್ಷರೂ ಹೌದು.

    ಮೊದಲ ಪತ್ನಿಯೂ ಬೇಡ… ನೀವ್ಯಾರೂ ಬೇಡ… ಎಂದು ಎಲ್ಲರನ್ನೂ ಹೊರಕ್ಕಿಟ್ಟ ಇಮ್ರಾನ್​ ಖಾನ್​!

    ಅತ್ಯಾಚಾರಿಗಳಿಗಾಗಿಯೇ ಬರಲಿದೆ ‘ಶಕ್ತಿ ಆ್ಯಕ್ಟ್​, ‘ಮಹಾ’ ಸಚಿವ ಸಂಪುಟದಲ್ಲಿ ಸಿಕ್ತು ಗ್ರೀನ್​ ಸಿಗ್ನಲ್​

    12 ವರ್ಷದ ಬಾಲಕನನ್ನು ಎಳೆದೊಯ್ದ ಗಾಳಿಪಟ- ಭಯಾನಕ ವಿಡಿಯೋ ಇಲ್ಲಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts