More

    ಲಾಕ್​ಡೌನ್​ನಲ್ಲಿ ದಾಖಲೆ ಅದೃಷ್ಟ… ಈಕೆ ಮಾಡಿರುವ ಅಡುಗೆಯ ಕೇಳಿ ದಂಗಾಗುವುದು ಗ್ಯಾರೆಂಟಿ…

    ಚೆನ್ನೈ: ಈ ಚಿತ್ರದಲ್ಲಿ ಕಾಣಿಸುತ್ತಿರುವ ಬಾಲಕಿಯ ಹೆಸರು ಎಸ್.ಎನ್. ಲಕ್ಷ್ಮೀ ಸಾಯಿಶ್ರೀ. ಚೆನ್ನೈ ಮೂಲದ ಈ ಬಾಲಕಿ ಇದೀಗ ದಾಖಲೆ ನಿರ್ಮಿಸಿದ್ದಾಳೆ. ಕೇವಲ 58 ನಿಮಿಷಗಳಲ್ಲಿ 46 ತಿನಿಸು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿರುವ ಈ ಬಾಲಕಿ ಪಾಕಶಾಸ್ತ್ರದ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಸ್ತಕ ಸೇರಿದ್ದಾಲೆ.

    ಅಷ್ಟಕ್ಕೂ ಈ ಬಾಲಕಿಯೇನೂ ಮೊದಲಿನಿಂದಲೂ ಇಷ್ಟೊಂದು ಅಡುಗೆ ಕಲಿತವಳಲ್ಲ. ಬದಲಿಗೆ ಲಾಕ್​ಡೌನ್​ ವೇಳೆ ಬೇಸರ ಆಗಿರುವ ಕಾರಣ, ಮನೆಯಲ್ಲಿಯೇ ಕುಳಿತು ಏನಾದರೂ ಮಾಡೋಣ ಎಂದುಕೊಂಡವಳಿಗೆ ಕಂಡದ್ದು ಅಡುಗೆ!

    ಅಮ್ಮ ಬೇರೆ ಬೇರೆ ರೀತಿ ಅಡುಗೆ ಮಾಡುತ್ತಿದ್ದರು. ಮೊದಲು ನನಗೆ ಅದನ್ನೆಲ್ಲಾ ಕಲಿಯಲು ವೇಳೆ ಇರಲಿಲ್ಲ. ಆದರೆ ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯೇ ಇರುವಂತಾಯಿತು. ಆಗ ನಾನು ಅಮ್ಮನ ಬಳಿ ಅಡುಗೆ ಮಾಡುವುದನ್ನು ಕಲಿತೆ. ಆದರೆ ಇಷ್ಟೆಲ್ಲಾ ಅಡುಗೆ ಮಾಡುತ್ತೇನೆ ಎಂದು ಎಣಿಸಿಯೇ ಇರಲಿಲ್ಲ ಎನ್ನುತ್ತಾಳೆ ಲಕ್ಷ್ಮೀ.

    ಈಕೆಯ ತಾಯಿ ಎನ್. ಕಲೈಮಗಳ್ ಖುದ್ದು ಅಚ್ಚರಿಯಿಂದ ಮಗಳ ಬಗ್ಗೆ ಮಾತನಾಡುತ್ತಾರೆ. ಮಗಳಿಗೆ ಅಡುಗೆ ಮಾಡುವುದು ಎಂದರೆ ಇಷ್ಟವೇ ಇತ್ತು. ಆದರೆ ಓದು, ಬರಹ, ಹೋಂವರ್ಕ್​ ಇವುಗಳ ನಡುವೆ ಅಡುಗೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ನಂತರ ಲಾಕ್​ಡೌನ್​ ಇರುವಾಗ ಅಡುಗೆ ಕಲಿಸಿಕೊಡಲು ಹೇಳಿದಳು. ಅವಳು ಮಾಡಿದ ಅಡುಗೆಯ ಟೇಸ್ಟ್​ ನೋಡಿ ನನಗೇ ಅಚ್ಚರಿಯಾಯಿತು. ತುಂಬಾ ಚೆನ್ನಾಗಿ ಮಾಡುತ್ತಾಳೆ ಎಂದು ಹೊಗಳುತ್ತಾರೆ.

    ಇದನ್ನೂ ಓದಿ: ಸ್ನೇಹಿತರು ಲಕ್ಷಲಕ್ಷ ಸಂಪಾದಿಸ್ತಿದ್ರೆ ನಾನು ಸಾವಿರದಲ್ಲೇ ಇದ್ದೇನೆ- ಡಿಪ್ರೆಷನ್​ಗೆ ಹೋಗುತ್ತಿರುವೆ, ಏನು ಮಾಡಲಿ?

    ಕೇರಳದ 10 ವರ್ಷದ ಬಾಲಕಿ ಸಾನ್ವಿ 30 ಅಡುಗೆ ಮಾಡಿರುವ ಬಗ್ಗೆ ಈಕೆಯ ತಂದೆ ಎಲ್ಲೋ ಓದಿದ್ದರಂತೆ. ಮಗಳು ತುಂಬಾ ಫಾಸ್ಟ್​ ಆಗಿ ಅಡುಗೆ ಮಾಡುವುದು ನೋಡಿ ಏಕೆ ಇನ್ನಷ್ಟು ಉತ್ತೇಜನ ನೀಡಬಾರದು ಎಂದು ಎನ್ನಿಸಿದೆ. ಅದಕ್ಕಾಗಿಯೇ ಸಾನ್ವಿಯ ದಾಖಲೆಯನ್ನು ತಮ್ಮ ಮಗಳು ಸುಲಭದಲ್ಲಿ ಮುರಿಯಬಹುದು ಎಂದು ಎನ್ನಿಸಿ ಇನ್ನಷ್ಟು ಬೇಗ ಬೇಗೆ ಹೆಚ್ಚೆಚ್ಚು ಅಡುಗೆಯ ಜತೆಗೆ ರುಚಿಯಾಗಿರುವ ಅಡುಗೆ ಮಾಡಲು ಪ್ರೇರೇಪಿಸಿದ್ದಾರೆ.

    ಇವೆಲ್ಲವುಗಳಿಂದ ಇಂದು ಬಾಲಕಿ ಎಸ್.ಎನ್. ಲಕ್ಷ್ಮೀ ಸಾಯಿಶ್ರೀ ದಾಖಲೆಯ ಪುಟ ಸೇರಿದ್ದಾಳೆ.

    ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

    ಟ್ವಿಟರ್​ ಬಳಸಿ 9 ಕೊಲೆ ಮಾಡಿದ್ದ ಈತ! ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​; ಟ್ವಿಟರ್​ ಕಿಲ್ಲರ್​ನ ವಿಚಿತ್ರ ಕಥೆ ಇಲ್ಲಿದೆ…

    ಮಧ್ಯಾಹ್ನ ಮುಹೂರ್ತ ಇದ್ರೆ, ವರ ಬಂದದ್ದು ರಾತ್ರಿ! ಕೋಪದಿಂದ ಬೇರೆಯವರನ್ನು ಮದ್ವೆಯಾದ ವಧು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts