More

    ನಿರ್ಮಲಾ, ರೋಷನಿ, ಕಿರಣ್​ಗೆ ಈ ಬಾರಿಯೂ ಒಲಿದ ಪ್ರಭಾವಶಾಲಿ ಮಹಿಳೆಯರ ಪಟ್ಟ… ಆದರೆ…

    ನವದೆಹಲಿ: ಫೋರ್ಬ್ಸ್ ಪ್ರಕಟಿಸಿರುವ ವಿಶ್ವದ ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,ಎಚ್​ಸಿಎಲ್ ಕಾರ್ಪೊರೇಷನ್ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ರೋಷನಿ ನಾಡಾರ್ ಮಲ್ಹೋತ್ರಾ ಹಾಗೂ ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಸತತ ಎರಡನೇ ವರ್ಷ ಸ್ಥಾನ ಪಡೆದಿದ್ದಾರೆ.

    ಫೋರ್ಬ್ಸ್ 2020ರ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಇವರ ಹೆಸರು ಈ ವರ್ಷವೂ ಇದೆ. ಆದರೆ ಇವರ ಸ್ಥಾನ ಕುಸಿದಿದೆ. ನಿರ್ಮಲಾ ಸೀತಾರಾಮನ್ ಕಳೆದ ವರ್ಷ ಏಳನೇ ಸ್ಥಾನದಲ್ಲಿ ಇದ್ದವರು ಈ ಬಾರಿ 41ಕ್ಕೆ, ರೋಷನಿ 55ಕ್ಕೆ, ಕಿರಣ್ 68ಕ್ಕೆ ಕುಸಿದಿದ್ದಾರೆ.

    ಇದನ್ನೂ ಓದಿ: VIDEO: 144 ಮಹಡಿಗಳ ಕಟ್ಟಡ 10 ಸೆಕೆಂಡ್​ನಲ್ಲೇ ನೆಲಸಮ- ಮಾಡಿತು ವಿಶ್ವದಾಖಲೆ

    ಈ ಪಟ್ಟಿಯ ಅಗ್ರಸ್ಥಾನದಲ್ಲಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಇದ್ದು, ಇವರು ಸತತವಾಗಿ 10 ವರ್ಷಗಳಿಂದಲೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿದ್ದಾರೆ. 2006ರಿಂದ ನಂಬರ್ ಒನ್ ಸ್ಥಾನದಲ್ಲಿ ಇರುವ ಮರ್ಕೆಲ್, 2010ರಲ್ಲಿ ಮಾತ್ರ ಅಮೆರಿಕದ ಆಗಿನ ಪ್ರಥಮ ಮಹಿಳೆ ಮಿಷೆಲ್ ಒಬಾಮ ಅವರಿಗೆ ಅಗ್ರ ಸ್ಥಾನ ಬಿಟ್ಟುಕೊಟ್ಟಿದ್ದರು.

    ‌ಆ ನಂತರದ ಸ್ಥಾನಗಳಲ್ಲಿ ಯುರೋಪಿಯರ್ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷೆ ಕ್ರಿಸ್ಟಿಯಾನ್ ಲಗರ್ಡೆ, ಯುಎಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಇದ್ದಾರೆ. ಕಮಲಾ ಇದೇ ಮೊದಲ ಬಾರಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

    ಭಾರತದಲ್ಲಿ ಈ ಹಿಂದೆ ಹಣಕಾಸು ಖಾತೆಯನ್ನು ಇಂದಿರಾ ಗಾಂಧಿ ನಿರ್ವಹಿಸಿದ್ದರು. ಆದರೆ ಪೂರ್ಣಾವಧಿಗೆ ಆ ಖಾತೆಯನ್ನು ನಿರ್ವಹಣೆ ಮಾಡುತ್ತಿರುವ ಮೊದಲ ಮಹಿಳೆ ನಿರ್ಮಲಾ ಎನಿಸಿಕೊಂಡಿದ್ದಾರೆ. ಈ ಹಿಂದೆ ಅವರು ರಕ್ಷಣಾ ಖಾತೆಯನ್ನು ನಿರ್ವಹಿಸಿದ್ದರು. ಈ ಪಟ್ಟಿಯಲ್ಲಿ ಮೆಲಿಂಡಾ ಗೇಟ್ಸ್, ನ್ಯಾನ್ಸಿ ಪೆಲೊಸಿ, ಶೆರಿಲ್ ಸ್ಯಾಂಡ್ ಬರ್ಗ್, ಶೇಖ್ ಹಸೀನಾ, ರಾಣಿ ಎಲಿಜಬೆತ್ II, ರಿಹಾನ್ಸಾ, ಬಿಯಾಂಸ್ ಇದ್ದಾರೆ. (ಏಜೆನ್ಸೀಸ್​)

    ನಾಳೆ ಸಾರಿಗೆ ನೌಕರರ ಪ್ರತಿಭಟನೆ: ಬಸ್ಸುಗಳ ರೋಡಿಗಿಳಿಯೋದು ದೌಟು!

    ಬಿಜೆಪಿ ವಿಜಯೋತ್ಸವದಲ್ಲಿ ಕೈ ಕಾರ್ಯಕರ್ತರ ಗಲಾಟೆ: ಮಾರಾಮಾರಿಯಲ್ಲಿ ತಂದೆ-ಮಗನ ಸಾವು

    ರಾಜಸ್ಥಾನದಲ್ಲೂ ಬಿಜೆಪಿಗೆ ಭರ್ಜರಿ ಗೆಲುವು: ಮುಖ್ಯಮಂತ್ರಿ ಗೆಹ್ಲೋಟ್​ಗೆ ಹಿನ್ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts