More

    ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

    ಮೀರತ್: ಬದುಕಿನಲ್ಲಿ ಏನೋ ಒಂದು ಸಾಧಿಸಬೇಕು ಎನ್ನುವ ಛಲ, ಕಣ್ಮುಂದೆ ಉಜ್ವಲ ಭವಿಷ್ಯದ ಕನಸು… ಈ ಮಧ್ಯೆಯೇ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣಿಗೇಕೆ ಇದೆಲ್ಲಾ ಎನ್ನುವ ಕೆಲ ಕುಟುಂಬಸ್ಥರು…

    ಇಂಥದ್ದೇ ಒಂದು ಮನಸ್ಥಿತಿಯುಳ್ಳ ಕುಟುಂಬವನ್ನೇ ಧಿಕ್ಕರಿಸಿ, ಬಲವಂತದ ಮದುವೆಗೆ ವಿರೋಧಿಸಿ ಏಳು ವರ್ಷಗಳ ಹಿಂದೆ ಬಂದ ಯುವತಿಯೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅದೇ ಕುಟುಂಬದವರೇ ಈಕೆಯನ್ನು ಮೆಚ್ಚಿ ಹೊಗಳುವ ಹಾಗೆ ಮಾಡಿದ್ದಾರೆ.

    ಈಕೆಯ ಹೆಸರು ಸಂಜು ರಾಣಿ ವರ್ಮಾ. ಉತ್ತರ ಪ್ರದೇಶದ ಮೀರತ್‌ನ ಸಂಜು, ಇದೀಗ ಕಬ್ಬಿಣದ ಕಡಲೆ ಎಂದೇ ಅಂದುಕೊಳ್ಳುವ ಲೋಕ ಸೇವಾ ಆಯೋಗದ ಪರೀಕ್ಷೆ ಪಾಸ್‌ ಮಾಡುವ ಮೂಲಕ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದಾರೆ.

    ಈ ಪರೀಕ್ಷೆಯನ್ನು ಕೆಲ ಪ್ರತಿಭೆಗಳು ಪ್ರತಿವರ್ಷವೂ ಪಾಸ್​ ಮಾಡುವುದಿದೆ. ಆದರೆ ಸಂಜುರಾಣಿಯವರ ಕಥೆ ಹಾಗಲ್ಲ. ಒಂಟಿ ಹೆಣ್ಣು, ಅದೂ ಮನೆಬಿಟ್ಟು ಬಂದಾಕೆ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಅಂಥದ್ದರಲ್ಲಿ ಇಂಥದ್ದೊಂದು ಸಾಧನೆ ಮಾಡಿ ಇದೀಗ ಮಾದರಿಯಾಗಿದ್ದಾರೆ.

    ಇದನ್ನೂ ಓದಿ: ₹10 ಕೋಟಿ ದಂಡ ಕಟ್ಟಿದರೆ ಶಶಿಕಲಾ ಜನವರಿಯಲ್ಲಿ ಬಂಧಮುಕ್ತ…

    ಇದು ಶುರುವಾಗುವುದು 2013ರಿಂದ. ಸಂಜು ಅವರ ತಾಯಿ ಅನಾರೋಗ್ಯದಿಂದ ಮೃತಪಟ್ಟರು. ಡಿಗ್ರಿಯನ್ನು ಮುಗಿಸಿದ್ದ ಸಂಜುಗೆ ಕುಟುಂಬಸ್ಥರು ಮದುವೆಗೆ ಒತ್ತಾಯಿಸಿದರು. ತಾನು ಇನ್ನೂ ಕಲಿತು ಸಾಧನೆ ಮಾಡಬೇಕು ಎಂದು ಎಷ್ಟು ಹೇಳಿದರೂ, ಕುಟುಂಬದವರು ಕೇಳಲಿಲ್ಲ. ಕೊನೆಗೆ ಬೇಸತ್ತ ಸಂಜು ಮನೆ ಬಿಟ್ಟು ಬಂದರು.

    ‘ಮದುವೆ ಧಿಕ್ಕರಿಸಿ ಮನೆಯೇನೋ ಬಿಟ್ಟುಬಂದೆ. ಆದರೆ ಸ್ವಲ್ಪವೂ ಹಣ ನನ್ನ ಬಳಿ ಇರಲಿಲ್ಲ. ನಾನು ಒಂದು ರೂಮ್‌ ಬಾಡಿಗೆಗೆ ತೆಗೆದುಕೊಂಡು ಮಕ್ಕಳಿಗೆ ಟ್ಯೂಷನ್‌ ಹೇಳು ಪ್ರಾರಂಭಿಸಿದೆ. ಅದರಲ್ಲಿಯೇ ಬಾಡಿಗೆ ಹಣ ಕಟ್ಟಿದೆ. ನಂತರ, ಖಾಸಗಿ ಶಾಲೆಗಳಲ್ಲಿ ಪಾರ್ಟ್‌ ಟೈಂ ಟೀಚರ್‌ ಆಗಿ ಕೆಲಸ ಮಾಡಿದೆ. ಅದರಿಂದ ಬಂದ ಹಣದಿಂದ ನಾಗರಿಕ ಸೇವಾ ಪರೀಕ್ಷೆಗೆ ಬೇಕಾದ ತಯಾರಿ ಮಾಡಿಕೊಂಡೆ’ ಎಂದು ತಾವು ಪಟ್ಟಿರುವ ಕಷ್ಟಗಳ ಬಗ್ಗೆ ಹೇಳುತ್ತಾರೆ ಸಂಜು.

    ಶೀಘ್ರದಲ್ಲಿಯೇ ಇವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಸರಕಾರಿ ಸೇವೆಗೆ ಸೇರಲಿದ್ದಾರೆ. ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಹೊತ್ತಿದ್ದಾರೆ.

    ಮಾಲೀಕ ಸತ್ತನೆಂದು ಆಹಾರ ತ್ಯಜಿಸಿ ಪ್ರಾಣಬಿಟ್ಟ ನಾಯಿ: ಬೆಳಗಾವಿಯಲ್ಲಿ ಮನಕಲಕುವ ಘಟನೆ

    ಬಂಧನದ ಭೀತಿ: 5 ವರ್ಷಗಳಲ್ಲಿ ಪಲಾಯನ ಮಾಡಿದ ‘ಶ್ರೀಮಂತ ಕಳ್ಳ’ರೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts