More

    ಹೈಕೋರ್ಟ್​ ಕೆಂಗಣ್ಣಿಗೆ ಗುರಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ- ₹5 ಲಕ್ಷ ದಂಡ

    ಬೆಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ನಿಂದ ಪದೇ ಪದೇ ಆದೇಶವಿದ್ದರೂ ಹಾಜರಾಗದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ್ ಖಂಡ್ರೆ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್​, ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

    ಖಂಡ್ರೆ ವಿರುದ್ಧ ಡಿ.ಕೆ ಸಿದ್ರಾಮ ಅವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಗೆ ಅವರು ಹಾಜರು ಆಗಿರದ ಕಾರಣ ಭಾರಿ ದಂಡವನ್ನು ವಿಧಿಸಲಾಗಿದೆ. ಡಿಕೆ ಸಿದ್ರಾಮ ಅವರು ಈಶ್ವರ್ ಖಂಡ್ರೆ ವಿರುದ್ಧ ಬೀದರ್​ ಜಿಲ್ಲೆಯ ಭಾಲ್ಕಿ ಕ್ಷೇತ್ರದಿಂದ​ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಂತಿದ್ದರು. ಆದರೆ ಖಂಡ್ರೆ ಜಯಸಾಧಿಸಿದ್ದಾರೆ.

    ಈಶ್ವರ್ ಖಂಡ್ರೆ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆಸಿದ್ದಾರೆ. ಅವರು ತಮ್ಮ ಆಸ್ತಿ ವಿವರ ಬಹಿರಂಗಪಡಿಸಿಲ್ಲ ಎಂದು ಆರೋಪಿಸಿರುವ ಸಿದ್ರಾಮ ಅವರು, ಈಶ್ವರ್ ಖಂಡ್ರೆ ಅವರ ಶಾಸಕತ್ವವನ್ನು ಅಸಿಂಧುಗೊಳಿಸಬೇಕು ಎಂದು ಸಲ್ಲಿಸಿರುವ ಅರ್ಜಿ ಇದಾಗಿದೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಆಯ್ಕೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿ ಗೋಳೋ ಎನ್ನುತ್ತಿರುವ ಯೋಧ!

    ಕಳೆದ ಬಾರಿ ವಿಚಾರಣೆ ವೇಳೆ ಖಂಡ್ರೆಗೆ ಕೋರ್ಟ್​ ನೋಟಿಸ್ ಜಾರಿ ಮಾಡಿತ್ತು. ಆದರೆ ಈ ಪ್ರಕರಣದ ವಿಚಾರಣೆ ಅನೇಕ ಬಾರಿ ಕೋರ್ಟ್​ ಮುಂದೆ ಬಂದರೂ ಈಶ್ವರ್ ಖಂಡ್ರೆ ಅವರು ಗೈರಾಗಿದ್ದರು. ಈ ಹಿಂದೆ ಕೋರ್ಟ್​ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ನನ್ನ ಪಿಎ ಗೆ ಮರೆವಿನ ಕಾಯಿಲೆ ಇದೆ. ಆದ್ದರಿಂದ ಕೇಸ್ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಅರ್ಜಿಯನ್ನು ಸಲ್ಲಿಸಿದ್ದರು.

    ಇಂದು ವಿಚಾರಣೆ ವೇಳೆ ಅವರು ಹಾಜರು ಇರಲಿಲ್ಲ. ಅರ್ಜಿಯನ್ನು ಪರಿಶೀಲನೆ ಮಾಡಿದ ನ್ಯಾಯಮೂರ್ತಿಗಳು, 5 ಲಕ್ಷ ರೂ ದಂಡ ವಿಧಿಸಿದ್ದಾರೆ. ಈ ದಂಡದ ಹಣವನ್ನು ಮುಖ್ಯಮಂತ್ರಿಗಳ ಕೋವಿಡ್ ನಿಧಿಗೆ ಪಾವತಿಸುವಂತೆ ಆದೇಶಿಸಿದ್ದಾರೆ.

    ಕಂಗನಾ v/s ಡಿ. ರೂಪಾ- ಹೊತ್ತಿ ಉರಿತಿದೆ ಪಟಾಕಿಯ ಕಿಡಿ: ಮೀಸಲಾತಿ ಅಡ್ಡ ಪರಿಣಾಮ ಅಂದ್ರು ನಟಿ!

    ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಟ್ಯಾಂಕರ್​ಗೆ ಢಿಕ್ಕಿ: ಕಾರು ನಜ್ಜುಗುಜ್ಜು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts