More

    ನಿರ್ಮಾಪಕ ಅಪ್ಪನ ಫಿಲ್ಮ್​ ಶೂಟಿಂಗ್​​ಗಾಗಿ ಮೇಕೆ ಕಳ್ಳರಾದ ‘ನಟ’ರು!

    ಚೆನ್ನೈ: ಇದೊಂದು ವಿಚಿತ್ರ ಕೇಸ್​, ಅಪ್ಪನಿಗೆ ಚಿತ್ರ ನಿರ್ಮಾಣದ ಹುಚ್ಚು, ಆದರೆ ಕೈಯಲ್ಲಿ ಕಾಸಿಲ್ಲ. ಚಿತ್ರವೊಂದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ದುಡ್ಡಿಲ್ಲದೇ ಅವರ ಗೋಳಾಟ ಹೇಳತೀರದು. ಅದಕ್ಕಾಗಿ ಅಪ್ಪನಿಗೋಸ್ಕರ ಮಕ್ಕಳು ಮೇಕೆ ಕಳ್ಳರಾಗಿ ಇದೀಗ ಸಿಕ್ಕಿಬಿದ್ದಿದ್ದಾರೆ!

    ಈ ಘಟನೆ ನಡೆದಿರುವುದು ಚೆನ್ನೈನಲ್ಲಿ. ಆಡು ಕಳ್ಳರಾದ ಮಕ್ಕಳು ವಿ ನಿರಂಜನ್ ಕುಮಾರ್ (30) ಮತ್ತು ಲೆನಿನ್ ಕುಮಾರ್ (32). ಈ ಇಬ್ಬರೂ ಸದ್ಯ ಪೊಲೀಸರ ಅತಿಥಿ.

    ಅಷ್ಟಕ್ಕೂ ಆಗಿರುವುದು ಏನೆಂದರೆ, ನ್ಯೂ ವಾಷರ್​ಪೇಟ್​ನ ನಿವಾಸಿ ವಿಜಯ್ ಶಂಕರ್ ‘ ನೀ ಥಾನ್ ರಾಜಾ’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಇದರ ಶೂಟಿಂಗ್​ ನಡೆಯುತ್ತಲೇ ಇದೆ. ಆದರೆ ಕೈಯಲ್ಲಿ ಹಣವಿಲ್ಲದೇ ಅದನ್ನು ಮುಂದುವರೆಸಲು ಆಗಲಿಲ್ಲ. ಈ ಚಿತ್ರದಲ್ಲಿ ಅವರ ಮಕ್ಕಳಾದ ಈ ಆರೋಪಿಗಳು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

    ಅಪ್ಪನ ಚಿತ್ರದ ಶೂಟಿಂಗ್​ ಪೂರ್ಣಗೊಂಡು, ತಾವು ದೊಡ್ಡ ಸ್ಟಾರ್​ ಆಗಿ ಮಿಂಚಬೇಕು ಎಂದು ಬಯಸಿದ ಈ “ನಟರು” ಕಳೆದ ಮೂರು ವರ್ಷಗಳಿಂದಲೂ ಮೇಕೆ ಕದಿಯುವ ಕೆಲಸಕ್ಕೆ ತೊಡಗಿದ್ದರು. ದಿನವೊಂದಕ್ಕೆ 8-10 ಮೇಕೆಗಳನ್ನು ಕದ್ದು 8-10 ಸಾವಿರ ರೂಪಾಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.

    ಇದಕ್ಕಾಗಿ ಇವರು ರಾತ್ರಿ ಹೊತ್ತು ಕಾರ್ಯ ಶುರು ಮಾಡುತ್ತಿದ್ದರು. ರಸ್ತೆಬದಿಯ ಮೇಯಿಸುವ ಪ್ರಾಣಿಗಳನ್ನು ಹುಡುಕುತ್ತಾ ನಿರ್ಜನ ಪ್ರದೇಶಗಳಲ್ಲಿ ಓಡುತ್ತಿದ್ದರು. ಯಾರೂ ಇಲ್ಲದೇ ಇರುವ ಸಮಯ ನೋಡಿಕೊಂಡು ಮೇಕೆಗಳನ್ನು ತಮ್ಮ ಕಾರಿಗೆ ಕಟ್ಟಿಕೊಂಡು ಸ್ಥಳದಿಂದ ಪರಾರಿಯಾಗುತ್ತಿದ್ದರು.

    ಇದನ್ನೂ ಓದಿ: ಸುಶಾಂತ್​ ರಜಪೂತ್​ ಜತೆ ನಟಿಸಿದ್ದ ಬಾಲಿವುಡ್​ ನಟ ನೇಣಿಗೆ ಶರಣು!

    ನಿರಾತಂಕವಾಗಿ ತಮ್ಮ ಕಾರ್ಯ ಮುಂದುವರೆಸಿದ್ದರು,. ಎಲ್ಲಿಯೂ ಸಿಕ್ಕಿಬೀಳುತ್ತಿರಲಿಲ್ಲ. ಆದ್ದರಿಂದ ಬಹಳ ಧೈರ್ಯದಿಂದ ಈ ಸಹೋದರರು ಒಂದೊಂದೇ ಮೇಕೆ ಕದಿಯುವುದು ಏಕೆ? ಒಂದೇ ಸಲಕ್ಕೆ ಹಲವು ಕದ್ದರೆ ಆರಾಮಾಗಿ ಇರಬಹುದು ಎಂದು ಯೋಚಿಸಿದರು.

    ಅದರಂತೆ, ಕಳೆದ ಅಕ್ಟೋಬರ್ 9ರಂದು ಪಳನಿಯಲ್ಲಿ ದೊಡ್ಡಿಯಿಂದ ಮೇಕೆಗಳನ್ನು ಕದ್ದರು. ಮಾಲೀಕ ಠಾಣೆಯಲ್ಲಿ ದೂರು ನೀಡಿದ್ದ. ಸಿಸಿಟಿವಿ ಪರಿಶೀಲಿಸಿದರೂ ಕಳ್ಳರು ಸಿಗಲಿಲ್ಲ.

    ನಂತರ ಆ ಭಾಗದಲ್ಲಿ ಕೆಲ ವರ್ಷಗಳಿಂದ ಹೀಗೆಯೇ ಆಗುತ್ತಿರುವುದು ತಿಳಿದುಬಂತು. ಕಳ್ಳರನ್ನು ಹಿಡಿದೇ ತೀರಬೇಕು ಎಂದುಕೊಂಡು ಪೊಲೀಸರು ರಾತ್ರಿ ವೇಳೆ ಸಿವಿಲ್ ಬಟ್ಟೆ ತೊಟ್ಟು ಕರ್ತವ್ಯಕ್ಕೆ ಹಾಜರಾಗತೊಡಗಿದರು.

    ಒಂದು ದಿನ ಇಬ್ಬರು ಆರೋಪಿಗಳು ಮೇಕೆ ಕದಿಯಲು ಪ್ರಯತ್ನಿಸುತ್ತಿದ್ದಾಗ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿಟ್ಟರು. ನಂತರ ಪೊಲೀಸರು ಚೆನ್ನಾಗಿ ಥಳಿಸಿದಾಗ ತಮ್ಮ ಅಪ್ಪನ ವಿಷಯವನ್ನು ಬಾಯಿ ಬಿಟ್ಟಿದ್ದಾರೆ. ಸದ್ಯ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಚುನಾವಣೆ ಬೆನ್ನಲ್ಲೇ ದೀದಿಗೆ ಬಿಗ್​ ಶಾಕ್​… ಐವರು ಸಚಿವರು ದಿಢೀರ್​ ನಾಪತ್ತೆ!

    ಆತ್ಮನಿರ್ಭರ್​ ಭಾರತ್​ 3.0 ಘೋಷಣೆ- ಕಡಿಮೆ ವೇತನದಾರರಿಗೆ ಸಿಗಲಿದೆ ಇಪಿಎಫ್​

    ಕರೊನಾ ಲಸಿಕೆ ಅಭಿವೃದ್ಧಿಗೆ ₹900 ಕೋಟಿ: ನಿರ್ಮಲಾ ಸೀತಾರಾಮನ್​ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts