More

    ಹಟ್ಟಿ ಚಿನ್ನದ ಗಣಿ ಕಾಲನಿಗಳಲ್ಲಿ ಶ್ರೀಗಂಧ ಕಳುವು

    ಹಟ್ಟಿಚಿನ್ನದಗಣಿ: ಚಿನ್ನದ ಗಣಿಯ ಅಧಿಸೂಚಿತ ಪ್ರದೇಶದ ಕಾಲನಿಗಳು, ಹಟ್ಟಿ ಪಪಂ ವ್ಯಾಪ್ತಿಯ ಹಳ್ಳದ ಇಕ್ಕೆಲಗಳಲ್ಲಿ, ಊರಿನ ಹೊರ ವಲಯದ ಹೊಲಗಳ ಮಧ್ಯೆ ಅಭೇದ್ಯವಾಗಿ ಬೆಳೆದುನಿಂತ ಶ್ರೀಗಂಧದ ಮರಗಳು ಕಳ್ಳರ ಪಾಲಾಗುತ್ತಿವೆ.

    ಅಧಿಸೂಚಿತ ಪ್ರದೇಶದ ಇಇ-17, ಎಸ್‌ಎಫ್-15, ಎಸ್‌ಯೂಪಿ-11 ನಂಬರಿನ ಕಾರ್ಮಿಕರ ಮನೆಗಳಲ್ಲಿ ಶ್ರೀಗಂಧದ ಮರಗಳು ಭಾನುವಾರ ತಡರಾತ್ರಿ ಕಳುವಾಗಿವೆ. ಅಲ್ಲದೆ ಗಣಿ ಕಂಪನಿ ಚಿನ್ನ ಉತ್ಪಾದಿಸುವ ಶಾಫ್ಟಿನೊಳಗಡೆ ಮರಗಳ್ಳತನವಾಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಐದಾರು ತಿಂಗಳಿಂದ ಕಡಿಮೆಯಾಗಿದ್ದ ಗಂಧದ ಮರಗಳ್ಳರ ಹಾವಳಿ ಮತ್ತೆ ಹೆಚ್ಚಾಗಿದ್ದು, ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.


    ಕಂಪನಿ ಕಾಲನಿಯ 4-5 ಕಡೆ ಗಂಧದ ಮರಗಳು ಕಳ್ಳತನವಾಗಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ. ಮರಗಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುತ್ತೇವೆ.
    | ಚನ್ನಬಸವ ಕಟ್ಟಿಮನಿ, ಲಿಂಗಸುಗೂರು ತಾಲೂಕು ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts