More

    ದಪ್ಪ ಇದ್ದುದಕ್ಕೆ ಮುಟ್ಟಿನ ಸಮಸ್ಯೆ ಅಂತಿದ್ದಾರೆ ಎಲ್ಲಾ… ಇದು ನಿಜನಾ? ಪರಿಹಾರ ಇದ್ಯಾ?

    ದಪ್ಪ ಇದ್ದುದಕ್ಕೆ ಮುಟ್ಟಿನ ಸಮಸ್ಯೆ ಅಂತಿದ್ದಾರೆ ಎಲ್ಲಾ... ಇದು ನಿಜನಾ? ಪರಿಹಾರ ಇದ್ಯಾ?ನನ್ನ ವಯಸ್ಸು 21. ನನಗೆ ಸರಿಯಾಗಿ ತಿಂಗಳ ಮುಟ್ಟು ಆಗುತ್ತಿಲ್ಲ. ಔಷಧ ತೆಗೆದುಕೊಂಡರೂ ಏನೂ ಪ್ರಯೋಜನವಾಗುತ್ತಿಲ್ಲ. ನಾನು ಸ್ವಲ್ಪ ದಪ್ಪಗಿದ್ದೇನೆ. ಇದೇ ಕಾರಣಕ್ಕೆ ಅಂತ ಎಲ್ಲರೂ ಹೇಳುತ್ತಾರೆ. ದಯವಿಟ್ಟು ಯಾವರೀತಿಯ ಔಷಧ ತೆಗೆದುಕೊಳ್ಳಲಿ ತಿಳಿಸಿ…

     ಉತ್ತರ: ನೀವು ದಪ್ಪಗಿರುವುದು ಒಂದು ಕಾರಣವಾಗಿರಬಹುದು. ಅದರೊಂದಿಗೆ ಪಿಸಿಓಡಿ ಸಮಸ್ಯೆ, ಥೈರಾಯ್ಡ್ ತೊಂದರೆಯೂ ಇರಬಹುದು. ದೇಹದ ತೂಕಕ್ಕೂ ಹಾರ್ಮೋನಿನ ತೊಂದರೆಗೂ ಹತ್ತಿರದ ನಂಟು. ಆದ್ದರಿಂದ ವ್ಯಾಯಾಮ ಮತ್ತು ಆಹಾರದಲ್ಲಿ ಮಿತಿ ಹಾಕಿಕೊಂಡು ತೂಕ ತಗ್ಗಿಸಿಕೊಳ್ಳಿ.

    ದಿನಕ್ಕೆ ಒಂದು ಗಂಟೆ ನೆಡಿಗೆ ಅಥವಾ ಯೋಗ ಇಲ್ಲವೇ ವ್ಯಾಯಾಮ ಕಡ್ಡಾಯವಾಗಿ ಮಾಡಿ. ಸಿಹಿತಿಂಡಿ, ಜಂಕ್‍ಫುಡ್, ಐಸ್‍ಕ್ರೀಂ, ಚಾಕೋಲೇಟ್ ತಿನ್ನಬೇಡಿ. ಹಣ್ಣು, ತರಕಾರಿ, ಮೊಳಕೆಕಾಳು ಸೇವಿಸಿ. ಕಾಫಿ, ಟೀ ಹೆಚ್ಚು ಬೇಡ. ರಾತ್ರಿಹೊತ್ತು ಬೇಗನೆ ಊಟಮಾಡಿ.

    ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿ. ನೀವು ಆಯುರ್ವೇದ ಆಸ್ಪತ್ರೆಗೆ ಹೋದಲ್ಲಿ ಪಂಚಕರ್ಮ ಚಿಕಿತ್ಸೆಯಲ್ಲಿ ವಿರೇಚನ ಮತ್ತು ಉದ್ವರ್ತನ ತೆಗೆದುಕೊಂಡಲ್ಲಿ ತೂಕ ಕಡಿಮೆಯಾಗುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ಬಿಸಿನೀರು ಕುಡಿಯಿರಿ. ಮಧ್ಯಾಹ್ನ ನಿದ್ರೆ ಮಾಡುವ ಅಭ್ಯಾಸವಿದ್ದಲ್ಲಿ ಬಿಟ್ಟುಬಿಡಿ.

    ಆರೋಗ್ಯ ಸಂಬಂಧಿತ ಇತರ ಪರಿಹಾರಗಳಿಗೆ ಇಲ್ಲಿ ಕ್ಲಿಕ್​ ಮಾಡಿ:

    https://www.vijayavani.net/category/%e0%b2%86%e0%b2%b0%e0%b3%8b%e0%b2%97%e0%b3%8d%e0%b2%af/

    ಅದು ಪ್ರೀತಿಯಲ್ಲಮ್ಮಾ… ಕಾಮ… ಏಳು ವರ್ಷ ದೇಹ ಒಪ್ಪಿಸುವಾಗ ಎಲ್ಲೋಗಿತ್ತು ನಿನ್ನ ಬುದ್ಧಿ?

    ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿಯಾಗಿದ್ದು ಕಾರಣವೇ ತಿಳೀತಿಲ್ಲ- ಪ್ಲೀಸ್‌ ಪರಿಹಾರ ಹೇಳಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts