More

    ವಾರದಿಂದ ಉಂಟಾಗಿದ್ದ ಭಯಾನಕ ಟ್ರಾಫಿಕ್​ ಜಾಮ್​ಗೆ ಕೊನೆಗೂ ಸಿಕ್ತು ಅಲ್ಪ ಮುಕ್ತಿ- ಅಲುಗಾಡಿದ ವಾಹನ!

    ಸೂಯೆಜ್​: ಕಳೆದ ಮಂಗಳವಾರದಿಂದ ಉಂಟಾಗಿದ್ದ ಭಯಾನಕ ಟ್ರಾಫಿಕ್​ ಜಾಮ್​ ಇದು. ಅಂತೂ ಈ ಜಾಮ್​ಗೆ ಇಂದು ಮುಕ್ತಿ ಸಿಕ್ಕಿದೆ. ಜಾಮ್​ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಜನರು, ಕುರಿಗಳು ನಿಟ್ಟುಸಿರು ಬಿಟ್ಟರೆ, ಇಡೀ ವಿಶ್ವದ ಕಚ್ಚಾ ತೈಲದ ಮೇಲೆ ಭಾರಿ ಹೊಡೆತ ಬೀಳುವ ಹಂತಕ್ಕೆ ತಲುಪಿದ್ದರಿಂದ ಎಲ್ಲರೂ ನಿರಾಳರಾಗುವಂತಾಗಿದೆ.

    ಅಷ್ಟಕ್ಕೂ ಇಂಥದ್ದೊಂದು ಜಾಮ್​ ನಡೆದಿದಿದ್ದು, ಸೂಯೆಜ್​ ಕಾಲುವೆಯಲ್ಲಿ. 400 ಮೀಟರ್‌ ಉದ್ದ, 2.20 ಲಕ್ಷ ಟನ್‌ ಭಾರ, 59 ಮೀಟರ್‌ ಅಗಲ ಇರುವ ಈ ಭಯಂಕರ ಬೋಟ್​ ‘ಎವರ್​ಗ್ರೀನ್​’ ಸೂಯೆಜ್​ ಕಾಲುವೆಯಲ್ಲಿ ಸಿಲುಕಿ ಭಾರಿ ಅನಾಹುತವನ್ನೇ ಸೃಷ್ಟಿಸಿತ್ತು. ಈ ಜಾಮ್​ನಿಂದಾಗಿ 500ಕ್ಕೂ ಅಧಿಕ ಬೋಟ್​ಗಳು ಅಲುಗಾಡದೇ ಒಂದು ವಾರದಿಂದ ನಿಂತಲ್ಲೇ ನಿಂತುಬಿಟ್ಟಿದ್ದವು!

    ಬಿರುಗಾಳಿ ಸಿಲುಕಿ ಸಮುದ್ರದಲ್ಲಿ ಅಡ್ಡಲಾಗಿ ತೇಲಿದ ಪರಿಣಾಮ ಹಡಗು ಕಾಲುವೆಯ ಮಧ್ಯದಲ್ಲಿ ಹಡಗಿನ ಎರಡು ಬದಿಗಳು ಸಿಲುಕಿಕೊಂಡವು. ಪರಿಣಾಮ ಸುಯೆಜ್ ಕಾಲುವೆಯಲ್ಲಿ ಸಂಪೂರ್ಣವಾಗಿ ಸಂಚಾರ ಸ್ಥಗಿತವಾಯಿತು.

    ಯುರೋಪ್ ಹಾಗೂ ಏಷ್ಯಾ ಸಂಪರ್ಕಿಸುವ 193 ಕಿಲೋ ಮೀಟರ್‌ ಜಲ ಮಾರ್ಗ ಸೂಯೆಜ್ ಕಾಲುವೆಯಾಗಿದೆ. ಈಜಿಪ್ಟ್‌ನಲ್ಲಿರುವ ಈ ಕಾಲುವೆಯನ್ನು 1859ರಿಂರ 1869ರವರೆಗೂ ಸುಮಾರು ಹತ್ತು ವರ್ಷಗಳ ಕಾಲ ಕಟ್ಟಲಾಗಿದೆ. ಮೆಡಿಟರೇನಿಯನ್ ಸಮುದ್ರ ಹಾಗೂ ಕೆಂಪು ಸಮುದ್ರ ಸಂಪರ್ಕಿಸುವ ಈ ಕಾಲುವೆ, ಅಟ್ಲಾಂಟಿಕ್ ಸಮುದ್ರ ಹಾಗೂ ಭಾರತ, ಪಶ್ಚಿಮ ಪೆಸಿಫಿಕ್ ಭೂಪ್ರದೇಶಕ್ಕೆ ಅತಿ ವೇಗವಾಗಿ ತಲುಪಬಹುದಾದ ಮಾರ್ಗವೂ ಎನಿಸಿಕೊಂಡಿದೆ.

    ಇಂದು ಬೋಟ್​ ಅನ್ನು ಅಲುಗಾಡಿಸಲು ಭಾಗಶಃ ಯಶಸ್ವಿಯಾಗಿದೆ. ಹುಣ್ಣಿಮೆ ಇರುವ ಕಾರಣ, ಸಮುದ್ರದ ಉಬ್ಬರ ಇಳಿತದಲ್ಲಿ ಏರುಪೇರಾಗಿದೆ. ಇದೇ ಸಂದರ್ಭ ಬಳಸಿಕೊಂಡು 10 ಟಗ್​ಬೋಟ್​ ನೆರವಿನಿಂದ ಅದನ್ನು ಭಾಗಶಃ ಸರಿಸುವಲ್ಲಿ ಯಶಸ್ವಿಯಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
    ವಿಶ್ವದಲ್ಲೇ ಸದಾ ಕಾರ್ಯನಿರತ ಮಾರ್ಗ ಎಂದು ಈ ಕಾಲುವೆಯನ್ನು ಕರೆಯಲಾಗುತ್ತದೆ. ಸುಮಾರು 150 ವರ್ಷಗಳಿಂದಲೂ ಈ ಕಾಲುವೆ ಕಾರ್ಯನಿರತವಾಗಿದೆ.

    Cargo Ship 'Evergreen' was stuck in Suez Canal for 6 days

    ರಾಜಕೀಯ, ಆರ್ಥಿಕ, ತಾಂತ್ರಿಕ ಸಮಸ್ಯೆಗಳಿಂದಾಗಿ ಇದುವರೆಗೂ ಸುಮಾರು ಐದು ಬಾರಿ ಈ ಕಾಲುವೆ ಸಂಚಾರ ಸ್ಥಗಿತಗೊಂಡಿತ್ತು. ಎಂಟು ವರ್ಷಗಳ ಹಿಂದೆ ಒಮ್ಮೆ ಇದು ಸ್ಥಗಿತಗೊಂಡಿದ್ದು ಬಿಟ್ಟರೆ ಇದೇ ಮಾರ್ಚ್ 23ಕ್ಕೆ ಸ್ಥಗಿತಗೊಂಡಿದೆ.

    ಮಾಜಿ ಮುಖ್ಯಮಂತ್ರಿಯಿಂದಲೇ ದೇಶದ ಭದ್ರತೆಗೆ ಧಕ್ಕೆ! ಸಿಗಲಿಲ್ಲ ಪಾಸ್​ಪೋರ್ಟ್​- ಅರ್ಜಿ ತಿರಸ್ಕೃತ

    ಫೋನ್​ ಚಾರ್ಜ್​ ಆಗಿದ್ಯೋ ಎಂದು ನೋಡಲುಹೋಗಿ ಜೀವ ಕಳೆದುಕೊಂಡ ಬಾಲಕ- ಸ್ಫೋಟಕ್ಕೆ ಮುಖ ಛಿದ್ರ

    ಅವರನ್ನೂ ಎಳೆದರು, ಇವರನ್ನೂ ತಳ್ಳಿದರು… ಬೆಳಗಾವಿಯಲ್ಲಿ ಸಿಡಿ ಕಿಡಿ: ಡಿಕೆಶಿ ವಾಹನದ ಮೇಲೆ ಚಪ್ಪಲಿ ಎಸೆತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts