More

    ಸ್ವಚ್ಛತೆಗೆ ಆಧ್ಯತೆ ನೀಡಿ ರೋಗಗಳಿಗೆ ಮುಕ್ತಿ ಕೊಡಿ

    ಕೂಡ್ಲಿಗಿ: ತಾಲೂಕಿನಾಧ್ಯಂತ ಚರಂಡಿ, ತ್ಯಾಜ್ಯ ವಸ್ತುಗಳ ನಿರ್ವಹಣೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಡೆಂಗ್ಯೂ ಸೇರಿ ಇತರ ಸಾಂಕ್ರಾಮಿಕ ಖಾಯಿಲೆಗಳಿಗೆ ಜನ ತುತ್ತಾಗುತ್ತಿದ್ದಾರೆ ಎಂದು ಶಾಸಕ ಡಾ. ಎನ್.ಟಿ.ಶ್ರೀನಿವಾಸ ಆತಂಕ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಿರಿ

    ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಗ್ರಾಮೀಣ ಚರಂಡಿಗಳಲ್ಲಿ ನೀರು ಸಮರ್ಪಕವಾಗಿ ಹರಿಯದೆ, ಸ್ವಚ್ಚತೆ ಇಲ್ಲದೆ ಸಾಂಕ್ರಮಿಕ ರೋಗಗಳ ತಾಣವಾಗಿದೆ.

    ಮಹಾಮಾರಿ ಡೆಂಗ್ಯೂ ಸೇರಿ ಹಲವಾರು ರೋಗಗಳಿಗೆ ಜನರು ತುತ್ತಾಗಿದ್ದಾರೆ. ಆದ್ದರಿಂದ ಮೊದಲು ಸ್ವಚ್ಛತೆಗೆ ಆಧ್ಯತೆ ನೀಡಿ. ತಾಪಂ ಇಒ ವೈ. ರವಿಕುಮಾರ್ ಅವರಿಗೆ ಸೂಚಿಸಿದರು.

    ಹಿರೇಕುಂಬಳಗುಂಟೆಯಲ್ಲಿ ಅಂಗನವಾಡಿ ಕೇಂದ್ರ ಸ್ವಂತ ಕಟ್ಟಡ ಇಲ್ಲದಿರುವುದು ಗಮನಕ್ಕೆ ಬಂದಿದೆ, ಅನೇಕ ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಈಗ ಬಾಡಿಗೆ ಕೊಡಲು ನಿರಾಕರಿಸಿರುವುದು ಗೊತ್ತಾಗಿದೆ.

    ಹೀಗಾದರೆ, ಹೇಗೆ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿದ ಪಂಚಾಯಿತಿಗೆ ಈ ಸಮಸ್ಯೆಯಾದರೆ, ಅಲ್ಲಿನ ಮಕ್ಕಳ ಗತಿಯೇನು ಎಂದು ಅಧಿಕಾರಿಗಳನ್ನು ತರಾಟೆಗೆ ತಗೆದುಗೊಂಡರು. ಶೀಘ್ರದಲ್ಲೇ ಸಮಸ್ಯೆ ಪರಿಹರಿಸಿ ಎಂದು ಸೂಚನೆ ನೀಡಿದರು. ವಿದ್ಯುತ್ ಸಮಸ್ಯೆ ರಾಜ್ಯದಲ್ಲೇ ಇದೆ, ಲೋಡ್ ಶೆಡ್ಢಿಂಗ್‌ನ್ನು ರೈತರಿಗೆ ಅನುಕೂಲವಾಗುವ ಸಮಯದಲ್ಲಿ ವ್ಯವಸ್ಥೆ ಕಲ್ಪಿಸಿ ಎಂದರು.

    ಅಲ್ಲದೆ, ಪೂಜಾರಳ್ಳಿ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮಾಲಳ್ಳಿಯಲ್ಲಿ ರಸ್ತೆಗೆ ಹೊಂದಿಕೊಂಡಂತೆ, ಟ್ರಾನ್ಸ್ ಫಾರ್ಮರನ್ನು ಕೈಗೆಟುಕುವಂತೆ ಅವೈಜ್ಞಾನಿಕವಾಗಿ ಅಳವಡಿಸಿದ್ದೀರಿ, ಅನಾಹುತ ಸಂಭವಿಸುವಿದರೆ ಇದಕ್ಕೆ ಯಾರನ್ನು ಹೊಣೆ ಮಾಡಿತ್ತೀರೆಂದು ಜೆಸ್ಕಾಂ ಎಇಇ ಪ್ರಕಾಶ್ ಪತ್ತೆನೂರು ಇವರನ್ನು ಪ್ರಶ್ನಿಸಿದರು.

    ಅಲ್ಲಿ ಮೂಲಭೂತವಾಗಿ ಜಾಗದ ಸಮಸ್ಯೆಯಿದೆ. ರೈತರು ಜಾಗ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಟಿಸಿಯನ್ನು ಅಳವಡಿಸಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

    ಈ ಬಗ್ಗೆ ತಕ್ಷಣವೇ ಸಂಬಂಧಿಸಿದ ಪಿಡಿಒ ನಿಂದ ಮಾಹಿತಿ ಪಡೆದು ಅವರನ್ನು ಮನವೊಲಿಸಿ ಟ್ರಾನ್ಸಫಾರಂ ಸ್ಥಳಾಂತರಿಸಿ ಎಂದರು. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅವುಗಳ ಪರಿಹಾರಕ್ಕೆ ಇನ್ನೊಮ್ಮೆ ದಿನಾಂಕ ನಿಗದಿ ಪಡಿಸಿ ಸಮಗ್ರ ಪರಿಶೀಲನೆ ಮಾಡಿ ಪರಿಹಾರ ನೀಡುವುದಾಗಿ ತಿಳಿಸಿದರು.

    ಬರಗಾಲ ಇರುವುದರಿಂದ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು. ನಂತರ ಆಡಳಿತಾಧಿಕಾರಿ ವಿಜಯಕುಮಾರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಮುಂದುವರೆಯಿತು. ತಾಪಂ ಇಒ ವೈ. ರವಿಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು,ಪಿಡಿಒಗಳು ಸಭೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts