More

    ಇಂಜಿನಿಯರಿಂಗ್‌ ಪದವೀಧರರಾ? ಐಟಿಐ ಸಂಸ್ಥೆಯಲ್ಲಿವೆ 41 ಮ್ಯಾನೇಜರ್ ಹುದ್ದೆ: 80 ಸಾವಿರ ರೂ.ವರೆಗೆ ಸಂಬಳ

    ದೂರಸಂಪರ್ಕ ಮತ್ತು ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಸ್ಥಾಪನೆಯಾದ ಸಾರ್ವಜನಿಕ ವಲಯ ಉದ್ಯಮವಾಗಿರುವ ಐಟಿಐ ಲಿಮಿಟೆಡ್ ದೂರಸಂಪರ್ಕ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಉದ್ಯಮಕ್ಕೆ ಉತ್ಪನ್ನ, ಪರಿಹಾರ ಮತ್ತು ಸೇವೆಯನ್ನು ಒದಗಿಸುತ್ತದೆ. ಪ್ರಸ್ತುತ ಬೆಂಗಳೂರು ಘಟಕದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು 5 ವರ್ಷದ ಅವಧಿಗೆ ಒಳಪಟ್ಟಿದ್ದು, ಅವಧಿ ವಿಸ್ತರಣೆಗೆ ಅವಕಾಶ ಇದೆ.

    ಹುದ್ದೆ ವಿವರ

    * ಚೀಫ್ ಮ್ಯಾನೇಜರ್/ ಮ್ಯಾನೇಜರ್ (ಗ್ರೇಡ್ 6/5) – 20

    * ಡೆಪ್ಯುಟಿ ಮ್ಯಾನೇಜರ್ (ಡೇಟಾ ಸೆಂಟರ್- 1, ನೆಟ್​ವರ್ಕ್-1, ಸೆಕ್ಯುರಿಟಿ-1, ಆರ್ ಆಂಡ್ ಡಿ-1) (ಗ್ರೇಡ್ 4) – 4

    * ಚೀಫ್ ಮ್ಯಾನೇಜರ್- ಡೇಟಾ ಸೆಂಟರ್ ಆಂಡ್ ಸೇಲ್ಸ್ ಮಾರ್ಕೆಟಿಂಗ್ (ಗ್ರೇಡ್-6) – 1

    * ಮ್ಯಾನೇಜರ್/ ಚೀಫ್ ಮ್ಯಾನೇಜರ್ – ಆರ್ ಆಂಡ್ ಡಿ (ಎಂಎಂ) (ಗ್ರೇಡ್-6) – 1

    * ಚೀಫ್ ಫೈನಾನ್ಸ್ ಮ್ಯಾನೇಜರ್/ ಫೈನಾನ್ಸ್ ಮ್ಯಾನೇಜರ್/ ಡೆಪ್ಯುಟಿ ಫೈನಾನ್ಸ್ ಮ್ಯಾನೇಜರ್/ ಅಸಿಸ್ಟೆಂಟ್ ಫೈನಾನ್ಸ್ ಮ್ಯಾನೇಜರ್ – 13

    ಹುದ್ದೆ ಜವಾಬ್ದಾರಿ:

    ಮೊಬೈಲ್ ನೆಟ್​ವರ್ಕ್ ನಿಯೋಜನೆಯಲ್ಲಿ ಅನುಭವ- ಮುಖ್ಯವಾಗಿ 4ಜಿ ತಂತ್ರಜ್ಞಾನ ಮತ್ತು ಆರ್​ಎಫ್​ನಲ್ಲಿ ಜ್ಞಾನ, ಟೆಲಿಕಾಂ ಇಂಡಸ್ಟ್ರಿ, ಡಿಜಿಟಲ್ ಮಾರ್ಕೆಟಿಂಗ್​ನಲ್ಲಿ ಪರಿಣತಿ, ವೇಳಾಪಟ್ಟಿ, ವೆಚ್ಚ, ಸಂಪನ್ಮೂಲಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ, ಯೋಜನೆಯ ಗುರಿಗಳ ಟಿಪ್ಪಣಿ ಸಿದ್ಧ ಮಾಡುವುದು, ಸಿಗ್ನಲ್ ಸಿಸ್ಟಮ್್ಸ ಮತ್ತು ತಂತ್ರಜ್ಞಾನದ ಕಾರ್ಯಾಚರಣೆ, ಫೈಬರ್ ಆಪ್ಟಿಕ್ ಮತ್ತು ಎಸಿಸಿಇಎಸ್​ಎಸ್ ನೆಟ್​ವರ್ಕ್, ತಂತ್ರಜ್ಞಾನದ ಅನುಷ್ಠಾನ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳುವುದು ಸೇರಿ ಇತರ ಜವಾಬ್ದಾರಿಗಳಿವೆ.

    ವಿದ್ಯಾರ್ಹತೆ: ಹುದ್ದೆಗೆ ಅನುಗುಣವಾಗಿ ಇಂಜಿನಿಯರಿಂಗ್ ಪದವಿ, ಮೆಟಿರಿಯಲ್ ಮ್ಯಾನೇಜ್​ವೆುಂಟ್/ ಸ್ಟೋರ್ಸ್ ಮ್ಯಾನೇಜ್​ವೆುಂಟ್/ ಪರ್ಚೇಸ್​ನಲ್ಲಿ ಡಿಪ್ಲೊಮಾ ಜತೆ ಇಂಜಿನಿಯರಿಂಗ್ ಪದವಿ, ಸಿಎ/ಐಸಿಡಬ್ಲ್ಯುಎ ಮಾಡಿದ್ದು, ಕನಿಷ್ಠ ಶೇ.60 (ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಶೇ.58) ಅಂಕ ಪಡೆದಿದ್ದು, ಕನಿಷ್ಠ ವೃತ್ತಿ ಅನುಭವ ಕೇಳಲಾಗಿದೆ.

    ವೇತನ: ಚೀಪ್ ಮ್ಯಾನೇಜರ್​ಗೆ ಮಾಸಿಕ 80,240 ರೂ., ಮ್ಯಾನೇಜರ್​ಗೆ 72,717 ರೂ., ಡಿಪ್ಯುಟಿ ಮ್ಯಾನೇಜರ್​ಗೆ 65,195 ರೂ., ಅಸಿಸ್ಟೆಂಟ್ ಮ್ಯಾನೇಜರ್​ಗೆ 52,658 ರೂ. ವೇತನ ಇದೆ. ಪಿಎಫ್, ಗ್ರಾಚ್ಯುಟಿ, ವೈದ್ಯಕೀಯ ಸೌಲಭ್ಯ, ರಜೆ ಭತ್ಯೆ, ತುಟ್ಟಿ ಭತ್ಯೆಗಳು ಇರುತ್ತವೆ.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 36, 40, 42, 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 25.11.2021

    ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 29.11.2021

    ಅಂಚೆ ವಿಳಾಸ: GENERAL MANAGER-HR ITI LIMITED, REGD & CORPORATE OFFICE ITI BHAVAN, DOORAVANI NAGAR, BENGALURU – 560016

    ಅಧಿಸೂಚನೆಗೆ: https://bit.ly/3qjfVgy

    ಮಾಹಿತಿಗೆ: http://www.itiltd.in

    ವಾಯುಪಡೆಯಲ್ಲಿ ಖಾಲಿ ಇವೆ ಗ್ರೂಪ್ ಸಿ ಹುದ್ದೆಗಳು: 83 ಹುದ್ದೆಗಳಿಗೆ ಅರ್ಜಿ ಆಹ್ವಾನ

    ತಾಯಿಯ ಹೆಸರಿನಲ್ಲಿ ಖಾತೆ ಇದ್ದ ಮಾತ್ರಕ್ಕೆ ಆಸ್ತಿ ಎಲ್ಲಾ ಅವರದ್ದೇ ಆಗುವುದಿಲ್ಲ- ನಿಮಗೂ ಪಾಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts