More

    ವಾತಾವರಣದ ತೇವಾಂಶದಿಂದಲೇ ಕುಡಿಯುವ ನೀರು-ಕಾರವಾರ ಇಂಜಿನಿಯರಿಂಗ್‌ ಕಾಲೇಜ್‌ ವಿದ್ಯಾರ್ಥಿಗಳ ಸಂಶೋಧನೆಗೆ ಶ್ಲಾಘನೆ

    ಕಾರವಾರ: ವಾತಾವರಣದ ತೇವಾಂಶದಿಂದ ನೀರನ್ನು ತಯಾರಿಸುವ ಇಲ್ಲಿನ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜ್‌ನ ಮಾದರಿ ಗಮನ ಸೆಳೆದಿದೆ.

    ಇತ್ತೀಚಿಗೆ ಸೀಮೆನ್ಸ್ ಇಂಡಿಯಾ ಜೊತೆಗೆ ಸ್ಮೈಲ್ ಫೌಂಡೇಶನ್ ನಡೆಸಿದ್ದ ಹ್ಯಾಕ್ ಫಾರ್ ಸಸ್ಟೈನಬಿಲಿಟಿ ಹ್ಯಾಕಥಾನ್‌ನಲ್ಲಿ ಕರ್ನಾಟಕದ ನೀರಿನ ಕೊರತೆ ನಿವಾರಣೆ ಥೀಮ್‌ನಲ್ಲಿ ಪ್ರದರ್ಶಿಸಿದ್ದ ಅಲ್ಟ್ರಾ ಮೆರೈನ್ಸ್ ತಂಡದ ಮಾದರಿ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿದೆ.

    ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಕಲಿಕೆಯ ಮಾರ್ಗಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಹಮ್ಮಿಕೊಂಡಿದ್ದ ಈ ಹ್ಯಾಕಥಾನ್‌ನಲ್ಲಿ 30 ಗಂಟೆಗಳ ಕಡಿಮೆ ಅವಧಿಯೊಳಗೆ ಸಮಸ್ಯೆಗಳನ್ನು ಪರಿಹರಿಸಲು ಅಥವಾ ನವೀನ ಮಾದರಿಗಳನ್ನು ರಚಿಸಲು ಸ್ಪರ್ಧೆ ಆಯೋಜಿಸಲಾಗಿತ್ತು. ಕನಾಟಕದ ನೀರಿನ ಕೊರತೆ ನಿವಾರಣೆ, ನವೀಕರಿಸಬಹುದಾದ, ಸುಸ್ಥಿರ ಶಕ್ತಿ, ಘನತ್ಯಾಜ್ಯ ನಿರ್ವಹಣೆ ಹಾಗೂ ಸ್ಮಾರ್ಟ್ ಕೃಷಿ ಥೀಮ್‌ಗಳಲ್ಲಿ ಮಾದರಿಗಳನ್ನ ಪ್ರದರ್ಶಿಸಲು ಅವಕಾಶ ನೀಡಲಾಗಿತ್ತು.

    ಈ ಪೈಕಿ ಕಾರವಾರ ಸರ್ಕಾರಿ ಇಂಜಿಜಿನಿಯರಿಂಗ್ ಕಾಲೇಜಿನಿಂದ ಕರ್ನಾಟಕದ ನೀರಿನ ಕೊರತೆ ನಿವಾರಣೆ ಥೀಮ್‌ನಡಿ ಅಲ್ಟ್ರಾ ಮರೈನ್ಸ್, ಸ್ಮಾರ್ಟ್ ಕೃಷಿಯಡಿ ಟೆಕ್ ಸ್ಟೋರ್ಮ್, ನವೀಕರಿಸಬಹುದಾದ ಸುಸ್ಥಿರ ಶಕ್ತಿಯಡಿ ಥೀಮ್‌ನಡಿ ಕಂಟ್ರೋಲ್ ಆಲ್ಟ್ ಡಿಫೀಟ್ ತಂಡ ಆಯ್ಕೆಯಾಗಿತ್ತು. ರಾಜ್ಯದ ವಿವಿಧ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ಗಳಿಂದ ಒಟ್ಟು 22 ತಂಡಗಳು ಭಾಗವಹಿಸಿದ್ದವು.

    ಗಣರಾಜ್ ನಾಯಕ್, ಅಶ್ವಿನಿ ಆರ್., ಚರಣ್ ಎ.ಬಿಜಾಪುರ ಹಾಗೂ ಸಹನಾ ಎ.ಎಸ್. ಅವರಿದ್ದ ಅಲ್ಟ್ರಾ ಮರೈನ್ಸ್ ತಂಡ ಪ್ರದರ್ಶಿಸಿದ ವಾತಾವರಣದಿಂದ ನೀರು ತಯಾರಿಸುವ ಮಾದರಿ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದಿದೆ. ಈ ತಂಡಕ್ಕೆ ಪ್ರಾಂಶುಪಾಲೆ ಡಾ.ಶಾಂತಲಾ ನೇತೃತ್ವದಲ್ಲಿ ಉಪನ್ಯಾಸಕ ಮಿಥೇಶಕುಮಾರ್ ಸಹಕಾರ ನೀಡಿದ್ದರು. ಅತಿಥಿ ಉಪನ್ಯಾಸಕ ರಜತ್ ನಾಯಕ ಮಾರ್ಗದರ್ಶನ ಮಾಡಿದ್ದರು.

    ಕರಾವಳಿಯಲ್ಲಿ ಕುಡಿಯುವ ನೀರಿನ ಕೊರತೆ, ಉಪ್ಪು ನೀರಿನ ಸಮಸ್ಯೆ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು, ಕುಡಿಯುವ ನೀರು ತಯಾರಿಕೆಯ ಪ್ರಾಜೆಕ್ಟ್‌ ಮಾಡಿದ್ದೆವು ಎಂದು ವಿದ್ಯಾರ್ಥಿ ಚರಣ ಎ.ವಿಜಾಪುರ ತಿಳಿಸಿದ್ದಾರೆ.

    ಇದನ್ನೂ ಓದಿ:ಬಿಣಗಾ ಫ್ಯಾಕ್ಟರಿ ಉದ್ಯೋಗಿ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts