More

    ಗ್ರಾಮೀಣ ಯುವಕರ ಜೀವನಕ್ಕೆ ಐಟಿಐ ಆಸರೆ

    ಉಳ್ಳಾಗಡ್ಡಿ-ಖಾನಾಪುರ: ಗ್ರಾಮೀಣ ಯುವಕರ ಜೀವನಕ್ಕೆ ಆಸರೆಯಾದ ಆನಂದಪುರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಲಿತ ಎಲ್ಲ 360 ವಿದ್ಯಾರ್ಥಿಗಳು ಉದ್ಯೋಗದಲ್ಲಿದ್ದಾರೆ. ಈ ವಿಶೇಷ ತರಬೇತಿ ಕೇಂದ್ರ ಮುಂಬರುವ ದಿನಗಳಲ್ಲಿ ಹಲವಾರು ಕುಟುಂಬಗಳಿಗೆ ಬೆಳಕಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ಸಮೀಪದ ಹತ್ತರಗಿ ಆನಂದಪುರದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ ಐಟಿಐ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ನಾಗನೂರದ ಬಾಳಸಾಹೇಬ ಪಾಟೀಲ ಅವರ ಮನೆಯಲ್ಲಿ ಪ್ರಾರಂಭಗೊಂಡ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ನಂತರದ ದಿನಗಳಲ್ಲಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಭವ್ಯವಾದ ಕೈಗಾರಿಕಾ ತರಬೇತಿ ಕೇಂದ್ರವಾಗಿ ಉದ್ಘಾಟನೆಯಾಗಿದೆ ಎಂದರು.

    ಮುಂಬರುವ ದಿನಗಳಲ್ಲಿ ಈ ಕೇಂದ್ರದಲ್ಲಿ ಫಿಟ್ಟರ್ ಹಾಗೂ ಇಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ತರಬೇತಿ ವಿಭಾಗಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ನುರಿತ ಶಿಕ್ಷಕರಿಂದ ಕೂಡಿದ ಈ ತರಬೇತಿ ಕೇಂದ್ರ ಮಾದರಿಯಾಗಲಿದೆ. ದೊಡ್ಡ ಕೆಲಸವಾಗಲಿ, ಚಿಕ್ಕ ಕೆಲಸವಾಗಲಿ ಅಭಿವೃದ್ಧಿ ಪರ ಕಾರ್ಯ ಮಾಡುವುದು ಖುಷಿ ತರುತ್ತದೆ ಎಂದರು.

    ತರಬೇತಿ ಕೇಂದ್ರದ ಜಂಟಿ ನಿರ್ದೇಶಕ ಬಸವಪ್ರಭು ಹಿರೇಮಠ, ಸಹಾಯಕ ನಿರ್ದೇಶಕ ರವೀಂದ್ರ ಜೆಬೇರಿ, ಹತ್ತರಗಿ ಗ್ರಾಪಂ ಅಧ್ಯಕ್ಷ ಸಮೀರ್ ಬೇಪಾರಿ, ರವೀಂದ್ರ ಜಿಂಡ್ರಳಿ, ಈರಣ್ಣ ಬಿಸಿರೊಟ್ಟಿ, ದಸ್ತಗೀರ್ ಬಸ್ಸಾಪುರಿ, ಮಹಾದೇವ ಪಟೊಳಿ, ಪರಶುರಾಮ ಡಗ್, ಶೋಮಲಿಂಗ ಪಟೋಳಿ, ನಾಗರಾಜ ದುಂದುರ, ಪಾಂಡು ಮನ್ನಿಕೇರಿ, ಬಸವರಾಜ ಜತ್ತಿ, ಶಶಿಕಾಂತ ಹಟ್ಟಿ, ಬಸವರಾಜ ಅತ್ತಿಮರದ, ಸಂತೋಷ ಅತ್ತಿಮರದ, ಪ್ರಾಚಾರ್ಯ ಎನ್.ಬಿ.ದಾಸ್ತಿಕೊಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts