More

    ವಂಚನೆ ಪ್ರಕರಣ: ಕಣ್ವ ಬ್ಯಾಂಕ್​ನ 255 ಕೋಟಿ ಆಸ್ತಿ ಮುಟ್ಟುಗೋಲು

    ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ಸುಮಾರು 255.17 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿದೆ.

    ಆಸ್ತಿ ಮುಟ್ಟುಗೋಲಿನ ಕುರಿತು ಜಾರಿ ನಿರ್ದೇಶನಾಲಯ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಹೇಳಿದೆ.

    ಕಣ್ವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಂಜುಂಡಯ್ಯ ಹಾಗೂ ಇತರ ನಿರ್ದೇಶಕರ ಹೆಸರಲ್ಲಿರುವ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಹೇಳಲಾಗಿದೆ.
    ಅಧಿಕ ಬಡ್ಡಿ ನೀಡುವುದಾಗಿ 650 ಕೋಟಿಯಷ್ಟು ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದ ಕಣ್ವ ಗ್ರೂಪ್ ನಂತರ ಹೂಡಿಕೆದಾರರಿಗೆ ಬಡ್ಡಿ ನೀಡುವಲ್ಲಿ ವಿಫಲವಾಗಿತ್ತು. ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಈ ಕುರಿತು ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ.

    ಇದನ್ನೂ ಓದಿ: ಮೋಸದಿಂದ ಬೇರೆಯವರ ಹೆಸರಿಗೆ ಖಾತೆಯಾದರೆ ಕಾನೂನಿನಡಿ ಪರಿಹಾರ ಏನು?

    ಭೂಮಿ ಖರೀದಿಯಲ್ಲಿ ವಂಚನೆ ಆರೋಪ ಸಂಬಂಧ ಕಣ್ವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಎನ್.ನಂಜುಂಡಯ್ಯ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕಳೆದ ನವೆಂಬರ್​ನಲ್ಲಿ ಬಂಧಿಸಿದ್ದರು. ನಂಜುಂಡಯ್ಯ ಸೇರಿ ಐವರು ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಿದ್ದರು.ಈ ವೇಳೆ ಕೆಲವು ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

    ವಿಚಾರಣೆ ಸಮಯದಲ್ಲಿಯೇ ಧಮ್​ ಎಳೆದ ವಕೀಲ! 10 ಸಾವಿರ ದಂಡ ವಿಧಿಸಿ ಕೋರ್ಟ್​

    ಇಲಿಗೆ ಸಿಕ್ಕಿತು ಪ್ರತಿಷ್ಠಿತ ಚಿನ್ನದ ಪದಕ, ಶೌರ್ಯ ಪ್ರಶಸ್ತಿ- ಇದರ ಸಾಹಸ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts