More

    ಮೋಸದಿಂದ ಬೇರೆಯವರ ಹೆಸರಿಗೆ ಖಾತೆಯಾದರೆ ಕಾನೂನಿನಡಿ ಪರಿಹಾರ ಏನು?

    ಮೋಸದಿಂದ ಬೇರೆಯವರ ಹೆಸರಿಗೆ ಖಾತೆಯಾದರೆ ಕಾನೂನಿನಡಿ ಪರಿಹಾರ ಏನು?ಪ್ರಶ್ನೆ: ನಮ್ಮ ತಂದೆಯ ದೊಡ್ಡಪ್ಪ ಅವಿವಾಹಿತರು. ಅವರ ಹೆಸರಿನಲ್ಲಿ 23 ಗುಂಟೆ ಜಮೀನು ಇತ್ತು. ಅದರಲ್ಲಿ ಹನ್ನೆರಡು ಗುಂಟೆ ಜಮೀನನ್ನು 1969ರಲ್ಲಿಯೇ ಮುನ್ನೂರ ಐವತ್ತು ರೂಪಾಯಿಗಳಿಗೆ ತಮಗೆ ಕ್ರಯ ಮಾಡಿದ್ದಾರೆಂದು ಹೇಳಿ ಬೇರೆಯವರು 2011ರಲ್ಲಿ ತಮ್ಮ ಹೆಸರಿಗೆ ಖಾತೆ ಬದಲಾಯಿಸಿಕೊಂಡಿದ್ದಾರೆ. ಉಳಿದ ಹನ್ನೊಂದು ಗುಂಟೆ ಜಮೀನು ನಮ್ಮ ತಂದೆ ಮತ್ತು ಅವರ ಚಿಕ್ಕಪ್ಪನ ಹೆಸರಿಗೆ ಜಂಟಿ ಖಾತೆ ಆಗಿದೆ. ಈಗ ಬೇರೆಯವರ ಹೆಸರಿಗೆ ಖಾತೆ ಆಗಿರುವ ಜಮೀನಿಗೆ ನಮ್ಮ ತಂದೆ ಮತ್ತು ಚಿಕ್ಕಪ್ಪ ನ್ಯಾಯಾಲಯದಲ್ಲಿ ದಾವೆ ಹಾಕಬಹುದೇ?

    ಉತ್ತರ: ನಿಮ್ಮ ತಂದೆಯ ದೊಡ್ಡಪ್ಪ ಬೇರೆಯವರಿಗೆ 1969ರಲ್ಲಿ ನೋಂದಾಯಿತ ಕ್ರಯ ಪತ್ರ ಮಾಡಿದ್ದರೆ ಈಗ ನಿಮ್ಮ ತಂದೆ ಮತ್ತು ಚಿಕ್ಕಪ್ಪ ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ.

    ಒಂದು ವೇಳೆ ನೋಂದಾಯಿತ ಪತ್ರ ಅಲ್ಲದಿದ್ದರೆ ಕೇಸು ಹಾಕಬಹುದು. ನೀವು ಮೊದಲಿಗೆ ಸಬ್ ರಿಜಿಸ್ಟ್ರಾರ ಕಚೇರಿಯಿಂದ ಎನ್‍ಕಂಬರೆನ್ಸ್ (ಋಣಭಾರ) ವಿವರ ಪಡೆಯಿರಿ. ಆಗ ನಿಮಗೆ ಸರಿಯಾದ ಮಾಹಿತಿ ತಿಳಿಯುತ್ತದೆ. ಆ ನಂತರ ವಕೀಲರನ್ನು ಸಂಪರ್ಕಿಸಿ ಹಕ್ಕು ಘೋಷಣೆಯ ದಾವೆ ಸಲ್ಲಿಸಬಹುದು.

    ದಾವೆ ಹಾಕುವ ಮೊದಲಿಗೆ ಕಾಲಮಿತಿಯ ಕಾನೂನಿನ ಕಡೆ ಗಮನ ಕೊಡಬೇಕಾಗುತ್ತದೆ.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ವಿಲ್​ ಬರೆಯದೇ ಪಾಲಕರು ತೀರಿಕೊಂಡರೆ ಹೆಣ್ಣುಮಕ್ಕಳಿಗೆ ಆಸ್ತಿ ಸಿಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts