More

    ಪ್ರಧಾನಿ ಮೋದಿಗೆ ಬಂದ ಉಡುಗೊರೆ ಹರಾಜಿಗೆ- ಪಾಲ್ಗೊಳ್ಳುವುದು ಹೇಗೆ? ಇದರ ಫುಲ್​ ಡಿಟೇಲ್ಸ್​ ಇಲ್ಲಿದೆ…

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ದಿನನಿತ್ಯವೂ ದೇಶ-ವಿದೇಶಗಳ ಗಣ್ಯರಿಂದ ಬರುವ ಉಡುಗೊರೆಗಳಿಗೆ ಲೆಕ್ಕವೇ ಇಲ್ಲ. ಇದನ್ನೆಲ್ಲಾ ಸಂಗ್ರಹಿಸಿ ಒಟ್ಟಿಗೆ ಇಡಲು ಹೋದರೆ ಇದಕ್ಕೆ ದೊಡ್ಡ ಬಂಗಲೆಯೂ ಸಾಲದು. ಇದೇ ಕಾರಣಕ್ಕೆ ಮೋದಿಯವರು ಪ್ರತಿವರ್ಷವೂ ತಮಗೆ ಬಂದಿರುವ ಉಡುಗೊರೆಗಳನ್ನು ಹರಾಜು ಮಾಡುತ್ತಾರೆ.


    ಆನ್​​ಲೈನ್ ವೆಬ್ ಪೋರ್ಟಲ್ ಮೂಲಕ ಹರಾಜು ಪ್ರಕ್ರಿಯೆ ನಡೆಯುತ್ತದೆ. ಪ್ರಧಾನಿ ಮೋದಿಯವರು ಪಡೆದ ಉಡುಗೊರೆಯನ್ನು ಇದೀಗ ನಾಲ್ಕನೇ ಬಾರಿಗೆ ಇ-ಹರಾಜು ಮಾಡಲಾಗುತ್ತಿದೆ. ಈ ಹರಾಜಿನಿಂದ ಬರುವ ಹಣವನ್ನು ನಮಾಮಿ ಗಂಗೆ ಯೋಜನೆಗೆ ಪ್ರತಿವರ್ಷವೂ ಖರ್ಚು ಮಾಡಲಾಗುತ್ತದೆ. ಈ ಹರಾಜಿನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ.

    ಈ ಬಾರಿ ಕೂಡ ಪ್ರಧಾನಿ ಮೋದಿಯವರ ಉಡುಗೊರೆಯ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜು ಪ್ರಕ್ರಿಯೆ ಕೆಲವೇ ದಿನಗಳು ನಡೆಯಲಿದ್ದು, ಇದರಲ್ಲಿ 1200ಕ್ಕೂ ಹೆಚ್ಚು ಉಡುಗೊರೆ ವಸ್ತುಗಳನ್ನು ಹರಾಜು ಮಾಡಲಾಗುತ್ತದೆ

    ಸೆಪ್ಟೆಂಬರ್ 17ರಿಂದ ಇದರ ಪ್ರಕ್ರಿಯೆ ಆರಂಭವಾಗಲಿದ್ದು, ಗಾಂಧಿ ಜಯಂತಿಯಾದ ಅ.2ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಸದ್ಯ ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ನಲ್ಲಿ ಹರಾಜಿಗೆ ಇಡಲಾಗುವ ವಿಶೇಷ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದ್ದು 300 ಅಮೂಲ್ಯ ವಸ್ತುಗಳನ್ನು ಪ್ರದರ್ಶಿಸಲಾಗಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಡುಗೊರೆಯಾಗಿ ನೀಡಿದ ಹನುಮಾಂಜಿ ದೇವರ ಮರದ ವಿಗ್ರಹ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಉಡುಗೊರೆಯಾಗಿ ನೀಡಿದ ತ್ರಿಶೂಲ, ಕಾಮನ್ವೆಲ್ತ್ ಗೇಮ್ಸ್ ವಿಜೇತ ಅಣ್ಣು ರಾಣಿ ಅವರ ಸಹಿ ಇರುವ ಈಟಿ, ಚೆನ್ನೈ ಚೆಸ್ ಒಲಿಂಪಿಕ್ಸ್‌ನ ಚೆಸ್ ಸೆಟ್ ಸ್ಮರಣಿಕೆಗಳು ಹರಾಜಿನಲ್ಲಿರುವ ಪ್ರಮುಖ ವಸ್ತುಗಳು. ಇದರ ಜತೆಗೆ ಇನ್ನೂ ಅನೇಕ ವಸ್ತುಗಳು ಹರಾಜಿಗೆ ಇವೆ.

    ಬೇರೆ ಬೇರೆ ನಿಗದಿತ ಬೆಲೆಗಳೊಂದಿಗೆ ಹರಾಜು ಆರಂಭವಾಗಲಿದ್ದು, ಬಿಡ್ಡಿಂಗ್ 55 ಸಾವಿರ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಭಾರತೀಯ ಪುರುಷರ ಪ್ಯಾರಾಲಿಂಪಿಕ್ ತಂಡದ ಹಸ್ತಾಕ್ಷರ ಹೊಂದಿರುವ ಒಂದು ಈಜು ಕ್ಯಾಪ್‌ಗೆ 1.50 ಲಕ್ಷ ರೂಪಾಯಿ, ಕಾಮನ್‌ವೆಲ್ತ್ ಗೇಮ್ಸ್ 2022 ರ ಕಂಚಿನ ಪದಕ ವಿಜೇತೆ ಅಣ್ಣು ರಾಣಿ ಅವರ ಸಹಿ ಇರುವ ಜಾವೆಲಿನ್ ಬೆಲೆ 2.50 ಲಕ್ಷ ರೂಪಾಯಿ, ಕಾಮನ್‌ವೆಲ್ತ್ ಕ್ರೀಡಾಕೂಟದ ಪವರ್‌ಲಿಫ್ಟಿಂಗ್ ತಂಡದ ಪ್ಯಾರಾ-ಅಥ್ಲೀಟ್‌ಗಳು ಸಹಿ ಮಾಡಿದ ಟಿ-ಶರ್ಟ್‌ಗೆ 5 ಲಕ್ಷ ರೂ ನಿಗದಿ ಮಾಡಲಾಗಿದೆ.

    ಸೆ.17ರಿಂದ ಈ ಲಿಂಕ್​ ಕ್ಲಿಕ್​ ಮಾಡಿ ನೀವೂ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. https://pmmementos.gov.in/ 

    ದಸರಾ ಹಬ್ಬದ ರಜೆಯಲ್ಲಿ ಕಡಿತ: ಟೂರ್​ಗೆ ಪ್ಲ್ಯಾನ್​ ಮಾಡಿಕೊಂಡಿದ್ರೆ ಈ ವಿಷಯ ತಿಳಿದುಕೊಳ್ಳಿ…

    ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts