More

    VIDEO: ವಿಶ್ವದ ಅತಿದೊಡ್ಡ ಕಾರಂಜಿ ಉದ್ಘಾಟಿಸಿದ ದುಬೈ- ಗಿನ್ನೆಸ್​ ಬುಕ್​ ಪ್ರವೇಶ

    ದುಬೈ: ಕರೊನಾ ವೈರಸ್​ ಮಹಾಮಾರಿ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಬೆನ್ನಲ್ಲೇ ದುಬೈ ವಿಶ್ವದ ಅತಿದೊಡ್ಡ ಕಾರಂಜಿಯನ್ನು ಉದ್ಘಾಟನೆ ಮಾಡಿದೆ.

    ಕರೊನಾ ಆತಂಕದ ನಡುವೆ ಹೃನ್ಮನ ತಣಿಸುವ ಈ ಕಾರಂಜಿ ಇಡೀದ ಗಿನ್ನೆಸ್​ ಬುಕ್​ ಆಫ್​ ರಿಕಾರ್ಡ್​ಗೆ ಸೇರ್ಪಡೆಯಾಗಿದೆ. ಪ್ರವಾಸೋದ್ಯಮ ಆಕರ್ಷಣೆಯನ್ನು ಹೆಚ್ಚಿಸಲು ಇಂಥದ್ದೊಂದು ಪ್ರಯತ್ನ ಮಾಡುತ್ತಿರುವುದಾಗಿ ದುಬೈ ಹೇಳಿದೆ. ಕರೊನಾದಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿಗೆ ಭಾರಿ ಹೊಡೆತ ಬಿದ್ದಿದೆ.

    ಈ ಹಿನ್ನೆಲೆಯಲ್ಲಿ, ಜನರನ್ನು ಆಕರ್ಷಿಸಲು ಇಂಥದ್ದೊಂದು ಬೃಹತ್​ ಕಾರಂಜಿಯನ್ನು ದುಬೈ ಸರ್ಕಾರ ಉದ್ಘಾಟನೆ ಮಾಡಿದೆ. 1,335 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ ಈ ಕಾರಂಜಿ. ಮನುಷ್ಯನ ಹಸ್ತದ (ಪಾಮ್) ಆಕಾರದಲ್ಲಿ ಇರುವ ಇರುವ ಕಾರಣ ಇದಕ್ಕೆ ‘ಪಾಮ್​ ಫೌಂಟೇನ್’ ಎಂದು ಹೆಸರು ಇಸಲಾಗಿದೆ.

    ಕರೊನಾ ವೈರಸ್​ ನಿಯಮಗಳನ್ನು ಅನುಸರಿಸಿ, ಎಲ್ಲ ರೀತಿಯ ಸುರಕ್ಷತಾ ಕ್ರಮಗಳ ಜತೆಯಲ್ಲಿ ಸಹಸ್ರಾರು ಮಂದಿ ಈ ಕಾರಂಜಿಯ ಉದ್ಘಾಟನೆಗೆ ಸಾಕ್ಷಿಯಾಗಿ ಸೌಂದರ್ಯವನ್ನು ಕಣ್ತುಂಬಿಸಿಕೊಂಡರು.

    ಈ ಕಾರಂಜಿ ದುಬೈನ ವಾಸ್ತುಶಿಲ್ಪದ ಸಾಧನೆಗಳ ಮತ್ತೊಂದು ಮೈಲಿಗಲ್ಲುಗೆ ಒಂದು ಉದಾಹರಣೆಯಾಗಿದೆ ಎಂದು ಗಿನ್ನೆಸ್ ಹೇಳಿದ್ದು, ಇದು ಜಗತ್ತಿನ ಅದ್ಭುತ ಎಂದು ಘೋಷಿಸಿದೆ.

    ಈಗಾಗಲೇ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ಮತ್ತು ಸೇವೆಯಲ್ಲಿ ಅತಿ ವೇಗದ ಪೊಲೀಸ್ ಕಾರು ಬುಗಾಟ್ಟಿ ವೇರಾನ್ ಸೇರಿದಂತೆ ಕೆಲ ವಿಶ್ವ ದಾಖಲೆಗಳನ್ನು ಹೊಂದಿರುವ ದುಬೈ ಸಾಲಿಗೆ ಇದೀಗ ಕಾರಂಜಿ ಸೇರ್ಪಡೆಯಾಗಿದೆ.

    ಆಶೀರ್ವದಿಸಲು ಬಂದ ಪಾದ್ರಿಗೆ ಬಾಲೆಯ ಹೈ ಫೈ- ಕ್ಯೂಟ್​ ವಿಡಿಯೋ ವೈರಲ್​

    ಉಪ ಚುನಾವಣೆ ಎಫೆಕ್ಟ್​! ಕಾಂಗ್ರೆಸ್ ಪ್ರಧಾನ ಕಚೇರಿ ಮೇಲೆ ಐಟಿ ದಾಳಿ: ₹ 8.5 ಲಕ್ಷ ವಶಕ್ಕೆ

    ಸಿಎಂ ಪಟ್ಟ ಹೋದ್ಮೇಲೆ ಹುಚ್ಚನಂತೆ ಅಲೀತಿದ್ದಾರೆ… ಅವ್ರ ತಾಯಿ, ಸಹೋದರಿ ಐಟಂಗಳಿರಬೇಕು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts