More

    ಡೆಲ್ಟಾ ಪ್ಲಸ್‌ ಮೂರನೆಯ ಅಲೆಯಲ್ಲ- ಕರೊನಾಕ್ಕೆ ಮಕ್ಕಳೇ ಟಾರ್ಗೆಟ್‌ ಅನ್ನೋದು ಸುಳ್ಳು: ಡಾ.ಪ್ರಸಾದ್‌

    ಮೈಸೂರು: ಕರೊನಾ ಸೋಂಕಿನ ಬೆನ್ನಲ್ಲೇ ಇದೀಗ ಡೆಲ್ಟಾ ಪ್ಲಸ್‌ ಸೋಂಕು ಭಾರಿ ಸುದ್ದಿ ಮಾಡುತ್ತಿದೆ. ಆದರೆ ಇದರ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಎಚ್‌ಒ ಡಾ.ಪ್ರಸಾದ್ ಹೇಳಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಅವರು, ಡೆಲ್ಟಾ ಪ್ಲಸ್‌ ಸೋಂಕು ಮೇ ತಿಂಗಳ ಸ್ಯಾಂಪಲ್‌ನಲ್ಲಿ ಕಂಡುಬಂದಿತ್ತು. ನಿತ್ಯವೂ ಸಾವಿರಾರು ಸ್ವಾಬ್ ತೆಗೆಯುತ್ತೇವೆ. ಈ ಪೈಕಿ ಪ್ರತಿ ತಿಂಗಳೂ 40 ಸ್ಯಾಂಪಲ್‌ಗಳನ್ನು ರ್‍ಯಾಂಡಮ್‌ ಆಗಿ ಆಯ್ಕೆ ಮಾಡಿ ಬೆಂಗಳೂರಿಗೆ ಕಳುಹಿಸುತ್ತೇವೆ. ಮೇ ತಿಂಗಳಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಿದ್ದ ಸ್ಯಾಂಪಲ್‌ನಲ್ಲಿ ಡೆಲ್ಟಾ ‍ಪ್ಲಸ್‌ ಕಂಡು ಬಂದಿದೆ ಎಂದು ಹೇಳಿದ್ದಾರೆ.

    ಒಂದು ಕೇಸ್ ಕಂಡು ಬಂದಿರುವುದನ್ನು ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡಿದ್ದಾರೆ. ಈಗಾಗಲೇ ಸೋಂಕಿತ ವ್ಯಕ್ತಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಡೆಲ್ಟಾ ಪ್ಲಸ್ ಕರೊನಾದ ಮತ್ತೊಂದು ರೂಪಾಂತರ ಅಷ್ಟೆ. ಇದನ್ನು ಮೂರನೇ ಅಲೆ ಅಂತ ಭಾವಿಸಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಮೈಸೂರು ಜಿಲ್ಲೆಯಲ್ಲಿ 36 ಲಕ್ಷ ಜನಸಂಖ್ಯೆ ಇದೆ. ಇದುವರೆಗೆ 16 ಲಕ್ಷ ಜನರನ್ನು ಟೆಸ್ಟ್ ಮಾಡಿದ್ದೇವೆ. ಈ ಪೈಕಿ 1.63 ಲಕ್ಷ ಪಾಸಿಟಿವ್ ಕೇಸ್ ಬಂದಿದೆ. ಈಗ ಕರೊನಾ ನಿಯಂತ್ರಣದಲ್ಲಿದೆ. ಮಕ್ಕಳಲ್ಲಿ ಅತಿಹೆಚ್ಚು ಕೇಸ್ ಬರುತ್ತಿದೆ ಎಂಬುದೂ ಸುಳ್ಳು. ನಾನು 16 ತಿಂಗಳ ಅಂಕಿ ಅಂಶಗಳನ್ನೂ ಪರಿಶೀಲನೆ ಮಾಡಿದ್ದೇನೆ. ಮೂರನೇ ಅಲೆ ಶುರುವಾಗಿದೆ ಅನ್ನೋದು ಊಹಾಪೋಹ ಎಂದು ಡಾ‌.ಪ್ರಸಾದ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts