More

    ದಾಖಲೆ ಪುಟ ಸೇರಿತು ನಾಯಿಯ ಕಿವಿ: ಇದರ ಅಳತೆ ಕೇಳಿದರೆ ಶಾಕ್‌ ಆಗೋದು ಗ್ಯಾರೆಂಟಿ

    ನ್ಯೂಯಾರ್ಕ್‌: ಸಾಮಾನ್ಯವಾಗಿ ನಾಯಿಯ ಕಿವಿಗಳ ಅಳತೆ 2 ರಿಂದ 3 ಇಂಚುಗಳಷ್ಟು ಇರುತ್ತವೆ. ಆದರೆ ಇಲ್ಲೊಂದು ನಾಯಿಯ ಕಿವಿ ಬರೋಬ್ಬರಿ 12.38 ಇಂಚುಗಳಿದ್ದು, ಅದೀಗ ಗಿನ್ನೆಸ್‌ ದಾಖಲೆ ಪುಟ ಸೇರಿದೆ.

    ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ನಾಯಿ ಇದಾಗಿದೆ. ಮೂರು ವರ್ಷದ ಈ ನಾಯಿಯ ಹೆಸರು ಲೌ, ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯನ್ನು ಪೈಗ್ ಓಸ್ಲೆನ್‌ ಎಂಬ ಪಶುತಜ್ಞೆ ಸಾಕುತ್ತಿದ್ದಾರೆ. ಸದ್ಯ ಜೀವಂತ ಇರುವ ನಾಯಿಗಳ ಪೈಕಿ ಅತ್ಯಂತ ಉದ್ದನೆಯ ಕಿವಿ ಹೊಂದಿರುವ ನಾಯಿ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ.

    ತಮ್ಮ ಮುದ್ದು ನಾಯಿ ಸಾಮಾನ್ಯ ನಾಯಿಗಿಂತಲೂ ಭಿನ್ನವಾಗಿದೆ. ಇದರ ಕಿವಿ ಸಾಮಾನ್ಯಕ್ಕಿಂತಲೂ ಅತಿ ಹೆಚ್ಚು ಉದ್ದವಾಗಿದೆ ಎಂದು ಪಶುತಜ್ಞೆಯಾಗಿರುವ ಪೈಗ್‌ ಅವರಿಗೆ ತಿಳಿದಿದ್ದರೂ ಅದನ್ನು ಅವರು ಅಳೆಯುವ ಗೋಜಿಗೆ ಹೋಗಿರಲಿಲ್ಲ. ಆದರೆ ಕರೊನಾದ ಲಾಕ್‌ಡೌನ್‌ ಸಮಯದಲ್ಲಿ ಅದನ್ನು ತಮಾಷೆಗಾಗಿ ಅಳೆದು ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ನಂತರವಷ್ಟೇ ತಿಳಿದದ್ದು ಇದು ವಿಶ್ವದ ಅತಿದೊಡ್ಡ ಕಿವಿ ಎಂದು. ಉದ್ದನೆಯ ಕಿವಿಗಳು ಹೊಂದಿದ್ದರೂ ತಮ್ಮ ನಾಯಿಗೆ ಯಾವುದೇ ರೀತಿಯ ವೈದ್ಯಕೀಯ ತೊಂದರೆ ಇರಲಿಲ್ಲ. ಫ್ಯಾಷನ್ ಶೋಗಳಲ್ಲಿ ಲೌಗೆ ಆತನ ಕಿವಿಗಳೇ ಭಾರಿ ಜನಪ್ರಿಯತೆ ತಂದೊಡ್ಡಿದೆ ಎಂದು ಪ್ರಶಂಸಿಸುತ್ತಾರೆ ಈ ಒಡತಿ.

    VIDEO: ಡ್ರೋನ್‌ v/s ಕಾಗೆ- ಆಹಾರ ಒಯ್ಯುತ್ತಿದ್ದ ಡ್ರೋನ್‌ ಜತೆ ಕಾಗೆ ಫೈಟಿಂಗ್‌: ವಿಡಿಯೋ ವೈರಲ್

    16 ವರ್ಷಗಳ ಬಳಿಕ ಸಿಕ್ಕಿತು ಯೋಧನ ಶವ: ಮಗ ಬದುಕಿದ್ದಾನೆಂಬ ನಿರೀಕ್ಷೆಯಲ್ಲೇ ಮೃತಪಟ್ಟ ಅಪ್ಪ-ಅಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts