More

    ಬದುಕಿರುವಾಗಲೇ ಸೋನಿಯಾ ಗಾಂಧಿಯನ್ನು ‘ಹುತಾತ್ಮ’ ಎಂದು ಕೊಂಡಾಡಿದ ಡಿ.ಕೆ.ಶಿವಕುಮಾರ್​!

    ಬೆಂಗಳೂರು: ಇಂದು ಎಲ್ಲಾ ರಾಜಕೀಯ ಪಕ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ ಅಯೋಜಿಸಲಾಗುತ್ತಿದೆ. ಅದೇ ರೀತಿ ಕಾಂಗ್ರೆಸ್​ ಭವನದಲ್ಲಿ ಕೂಡ ಧ್ವಜಾರೋಹಣ ನಡೆಯಿತು.

    ಧ್ವಜಾರೋಹಣದ ನಂತರ ಬರೆದು ತಂದಿದ್ದ ಭಾಷಣವನ್ನು ಓದಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ, ಹೋರಾಡಿದ ಕಾಂಗ್ರೆಸ್​ ನಾಯಕರನ್ನು ನೆನೆದರು. ಟೀಕೆ ಟಿಪ್ಪಣಿಗಳು ಸಹಜ. ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತು ಹಲವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶ ಕಟ್ಟಿದ್ದಾರೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ ಎಂದರು.

    ಇಂದೀರಾ ಕ್ಯಾಂಟೀನ್ ಹೆಸರು ಬದಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಇವರು, ಮತಿಗೇಡಿಗಳು ಇಂದೀರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಅವರ ಇತಿಹಾಸ ತಿಳಿಯದೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಕಟ್ಟುವ ಕೆಲಸ ಮಾಡಿದೆ. ಈ ಹೆಸರು ಬದಲಾವಣೆ ವಿರುದ್ಧ ಹೋರಾಡೋಣ ಎಂದರು.

    ದೇಶಕ್ಕಾಗಿ ಹುತಾತ್ಮ ಸೋನಿಯಾ ಗಾಂಧಿಯವರ ಕೊಡುಗೆ ಅಪಾರ. ಅವರನ್ನು ಈ ಸಂದರ್ಭದಲ್ಲಿ ನಾವೆಲ್ಲಾ ನೆನಪಿಸಿಕೊಳ್ಳಬೇಕಿದೆ ಎಂದು ಅವರ ಗುಣಗಾನ ಮಾಡಿದರು. ಮಾತಿನ ಭರಾಟೆಯಲ್ಲಿ ಗುಣಗಾನ ಜೋರಾಗಿತ್ತು. ನಂತರ ತಕ್ಷಣ ಪಕ್ಕದಲ್ಲಿದ್ದ ಕಾಂಗ್ರೆಸ್​ ಕಾರ್ಯಕರ್ತರೊಬ್ಬರು ಅವರನ್ನು ಎಚ್ಚರಿಸಿ, ಹುತಾತ್ಮರಾದವರು ಸೋನಿಯಾ ಗಾಂಧಿಯಲ್ಲಿ, ಇಂದಿರಾ ಗಾಂಧಿ ಎಂದರು. ಕೂಡಲೇ ಕ್ಷಮೆ ಕೋರಿದ ಶಿವಕುಮಾರ್​, ಹುತಾತ್ಮ ಇಂದಿರಾಗಾಂಧಿಯವರ ಕೊಡುಗೆ ಅಪಾರ ಎಂದು ಅವರ ಗುಣಗಾನ ಮಾಡಿದರು.

    .ಸ್ವಾತಂತ್ರ್ಯ ಹೋರಾಟವನ್ನು ಜಾತಿ, ಧರ್ಮದ ಆಧಾರದ ಮೇಲೆ ಬಳಸಿಕೊಳ್ಳುತ್ತಿರುವುದು ದುರ್ದೈವ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಸಾಗಿ ಪಕ್ಷ ಕಟ್ಟಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಇಂದಿರಾಗಾಂಧಿಯವರ ಕನಸು ನನಸು ಮಾಡಬೇಕಿದೆ ಎಂದು ಹೇಳಿದರು. ಲಿಖಿತ ರೂಪದ ಭಾಷಣವನ್ನು ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಮಾಡುತ್ತಾರೆ. ಈ ಬಗ್ಗೆ ಕೂಡ ಸ್ಪಷ್ಟಪಡಿಸಿದ ಡಿಕೆಶಿ, ನಾನು ಮುಖ್ಯಮಂತ್ರಿ ಮಾದರಿಯಲ್ಲಿ ಭಾಷಣ ಮಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಭಾಷಣವನ್ನು ಮಾಡಿದ್ದೇನೆ. ರಾಜ್ಯದ ಜನರಿಗೆ ಏನು ಸಂದೇಶ ನೀಡಬೇಕೋ ನೀಡಿದ್ದೇನೆ. ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲ ಪಡಿಸುತ್ತೇವೆ ಎಂದು ಹೇಳಿದರು.

    ಮದುವೆಯಾಗೋ ಭರವಸೆ ಕೊಟ್ಟರೆ ಮಾತ್ರ ಯುವತಿಯರು ದೈಹಿಕ ಸಂಪರ್ಕ ಬೆಳೆಸ್ತಾರೆ ಎಂದ ಹೈಕೋರ್ಟ್​

    ಅವಳು ಅಫ್ಘಾನಿಸ್ತಾನಿ, ಇವನು ಫ್ರಾನ್ಸ್​ ಕುವರ: ಭಾರತದಲ್ಲಿ ಪ್ರೀತಿ- ಅಪರೂಪದ ಲವ್​ ಸ್ಟೋರಿಗೆ ಕೋರ್ಟ್​ನಿಂದ ಅಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts