More

    ಗ್ಯಾಸ್​ ಸಿಲಿಂಡರ್​ ಮನೆಗೆ ತಂದುಕೊಟ್ಟದ್ದಕ್ಕೆ ಹಣ ಕೇಳ್ತಾ ಇದ್ದಾರಾ? ಹಾಗಿದ್ದರೆ ಈ ಮಾಹಿತಿ ಓದಿ…

    ನವದೆಹಲಿ: ಮೇಡಂ… ನಿಮ್ಮ ಮನೆ 2ನೇ ಮಹಡಿ. ಮೆಟ್ಟಿಲು ಹತ್ತಿ ಇಲ್ಲೀವರೆಗೆ ಗ್ಯಾಸ್​ ಸಿಲಿಂಡರ್​ ತಂದುದಕ್ಕೆ 30 ರೂಪಾಯಿ ಕೊಡಲೇಬೇಕು. ಗ್ರೌಂಡ್​ ಫ್ಲೋರ್​ ಆಗಿದ್ರೆ ಏನೋ ನೋಡ್ಬೋದಿತ್ತು…

    ಸರ್​… ನೀವು ಸಿಲಿಂಡರ್​ ನಿಮ್ಮ ಬಾಗಿಲಿಗೆ ತಂದುಕೊಟ್ಟಿದ್ದಕ್ಕೆ ಕಾಸು ಕೊಡಲೇಬೇಕು. ಇದು ರೂಲ್ಸ್​. ಕೊಡಲ್ಲ ಅಂದ್ರೆ ಮುಂದಿನ ಸಲದಿಂದ ತರಲ್ಲ ಅಷ್ಟೇ…

    ಏನ್​ ಮೇಡಂ ಹೀಗೆ ಹೇಳ್ತೀರಾ? ಲಿಫ್ಟ್​ನಲ್ಲಿ ಬಂದ್ರೆ ಏನಂತೆ? ಮನೆ ಬಾಗಿಲವರೆಗೂ ತಂದುಕೊಟ್ಟಿಲ್ವಾ ಸಿಲಿಂಡರ್​ನ್ನ? ಹಣ ಕೊಡಲ್ಲ ಅಂದ್ರೆ…

    – ಹೀಗೆಲ್ಲಾ ಅಡುಗೆ ಅನಿಲದ​ ಸಿಲಿಂಡರ್​ ತಂದುಕೊಡುವವರು ನಿಮಗೆ ಹೇಳಿರಲಿಕ್ಕೆ ಸಾಕು, ಇಲ್ಲವೇ ತಮಗೆ ಹಣವನ್ನು ಕೊಡುವುದು ಕಡ್ಡಾಯ ಎಂದು ಹೇಳಿರಬಹುದು, ಅದನ್ನು ನೀವು ನಂಬಿರಲೂಬಹುದು.

    ಆದರೆ ವಾಸ್ತವ ಏನು ಗೊತ್ತಾ? ಹೀಗೆ ಮನೆಗೆ ಸಿಲಿಂಡರ್​ ತಂದುಕೊಡುವ ವ್ಯಕ್ತಿಗೆ ಗ್ರಾಹಕರು ಡೆಲಿವರಿ ಶುಲ್ಕ ನೀಡುವ ಅಗತ್ಯವಿಲ್ಲ, ಇದು ನಿಯಮವೂ ಅಲ್ಲ ಎಂದಿದೆ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌). ನೀವು ಯಾವುದೇ ಕಂಪೆನಿಯ ಸಿಲಿಂಡರ್​ ಪಡೆದುಕೊಂಡರೂ ಈ ನಿಯಮ ಅನ್ವಯ ಆಗುತ್ತದೆ. ಯಾರು ಕೂಡ ಡೆಲಿವರಿಮ್ಯಾನ್​ಗೆ ಹಣ ಕೊಡುವುದು ಕಡ್ಡಾಯವಲ್ಲ ಎಂದು ಅದು ಸ್ಪಷ್ಟಪಡಿಸಿದೆ.

    ಹಣವನ್ನು ನೀಡುವಂತೆ ಹಲವರು ಒತ್ತಾಯ ಮಾಡುತ್ತಿರುವುದರಿಂದ ಸಂದೇಹಗೊಂಡ ಹೈದರಾಬಾದ್‌ನ ಗ್ರಾಹಕರೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಪ್ರಶ್ನೆ ಕೇಳಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಎಚ್‌ಪಿಸಿಎಲ್‌ ಇದು ಕಡ್ಡಾಯವಲ್ಲ ಎಂದು ಉತ್ತರ ನೀಡಿದೆ.

    ‘ಗ್ರಾಹಕರ ಮನೆಗೆ ಗ್ಯಾಸ್‌ ಸಿಲಿಂಡರ್‌ ತಲುಪಿಸುವುದು ವಿತರಕರ ಜವಾಬ್ದಾರಿ. ಮನೆಯು ಯಾವುದೇ ಮಹಡಿಯಲ್ಲಿ ಇರಲಿ, ಅವರು ಹಣವನ್ನು ಕೇಳುವಂತಿಲ್ಲ ಎಂದಿರುವ ಎಚ್​ಪಿಸಿಎಲ್​, ಬಿಲ್‌ನಲ್ಲಿ ನಮೂದಾಗಿರುವುದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಇಷ್ಟವಿಲ್ಲದಿದ್ದರೆ ಕೊಡುವಂತಿಲ್ಲ ಎಂದು ಹೇಳಿದೆ. ಒಂದು ವೇಳೆ ಈ ರೀತಿ ಹಣ ಕೇಳಿದರೆ ಗ್ರಾಹಕರು ತಾವು ಕೊಡುವುದಿಲ್ಲ ಎಂದು ಹೇಳಬಹುದು. ಆ ಸಂದರ್ಭದಲ್ಲಿ ಡೆಲಿವರಿ ಮಾಡುವ ವ್ಯಕ್ತಿಗಳು ಒತ್ತಾಯ ಮಾಡುವಂತಿಲ್ಲ ಎಂದು ಉತ್ತರಿಸಿದೆ.

    ಅಷ್ಟಕ್ಕೂ… ಭಾರವಾದ ಸಿಲಿಂಡರ್​ ಹೊತ್ತು 2-3 ಮಹಡಿ ಹತ್ತಿಕೊಂಡೋ, ಮನೆಯ ಒಳಗಡೆ ಇಡುವ ಕಷ್ಟವನ್ನು ತೆಗೆದುಕೊಳ್ಳುವ ಡೆಲಿವರಿಮ್ಯಾನ್​ಗಳನ್ನು ನೋಡಿ ನಿಮಗೇ ಅಯ್ಯೋ ಎನಿಸಿ ಹಣ ಕೊಟ್ಟರೆ ಅದು ಬೇರೆ ಮಾತು. ಅವರು ಪಡುವ ಕಷ್ಟವನ್ನು ನೋಡಿ ಅವರು ಕೇಳಿದ್ದಕ್ಕಿಂತ ಹೆಚ್ಚಿನ ಹಣವನ್ನೂ ಕೊಡುವವರು ಇದ್ದಾರೆ ಎನ್ನುವುದೂ ಅಷ್ಟೇ ಸತ್ಯ. 20-30 ರೂಪಾಯಿಗಳಲ್ಲಿ ಏನಾಗುತ್ತೆ ಮಹಾ ಎಂದುಕೊಂಡು ದುಡ್ಡು ಕೊಡುತ್ತಿದ್ದಾರೆ ಹಲವರು. ಅದು ಅವರವರ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ನಿಯಮದ ಪ್ರಕಾರ ಮಾತ್ರ ನಿಮಗೆ ಇಷ್ಟವಿಲ್ಲದಿದ್ದರೆ ಅವರು ಹಣ ವಸೂಲಿ ಮಾಡುವಂತಿಲ್ಲ ಅಷ್ಟೇ…

    11 ಮಹಿಳೆಯರ ಸಾವಿಗೆ ಕಾರಣ ಅಶೋಕ್​ ಖೇಣಿ: ಅವರನ್ನು ಬಂಧಿಸಿ ಎಂದು ಸರ್ಕಾರಕ್ಕೆ ಆಗ್ರಹ

    ಹೃತಿಕ್​​- ಕಂಗನಾ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್​ ಸೋರಿಕೆ

    ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?

    ಪತ್ನಿ ಮೊಬೈಲ್​ನಲ್ಲಿ, ತಿನ್ನೋದ್ರಲ್ಲಿ, ಅಲಂಕಾರ ಮಾಡಿಕೊಳ್ಳೋದ್ರಲ್ಲಿ ಕಾಲ ಕಳೀತಾಳೆ: ವಿಚ್ಛೇದನ ಸಿಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts