More

    ಪ್ರಯೋಗಾಲಯದಲ್ಲೇ ತಯಾರಾಯ್ತು ವಜ್ರ, ಇನ್ನು ನಿಸರ್ಗದಲ್ಲಿ ಹುಡುಕೋದೇ ಬೇಡ!

    ಸಿಡ್ನಿ: ವಜ್ರ ಎಲ್ಲಿ ಸಿಗುತ್ತೆ ಎಂದು ಕೇಳಿದರೆ, ನಿಸರ್ಗದಲ್ಲಿ ಎಂದು ಉತ್ತರಿಸುವುದು ಇಲ್ಲಿಯವರೆಗೂ ಸಾಮಾನ್ಯವಾಗಿತ್ತು, ಜತೆಗೆ ಅದು ನಿಜವೂ ಆಗಿತ್ತು. ಆದರೆ ಇನ್ನು ಮುಂದೆ ನಿಸರ್ಗ ಎನ್ನುವ ಮೊದಲು ಯೋಚಿಸಬೇಕಾಗಿ ಬರಬಹುದು. ಏಕೆಂದರೆ ವಜ್ರವನ್ನು ಪ್ರಯೋಗಾಲಯದಲ್ಲಿಯೇ ರೂಪಿಸಲಾಗಿದೆ!

    ಅಚ್ಚರಿ ಎನಿಸುವ ಇಂಥದ್ದೊಂದು ಕಾರ್ಯವನ್ನು ಮಾಡಿತೋರಿಸಿದ್ದಾರೆ ಅಮೆರಿಕದ ಸಿಡ್ನಿ ವಿಶ್ವವಿದ್ಯಾಲಯ ಮತ್ತು ಓಕ್ ರಿಡ್ಜ್ ರಾಷ್ಟ್ರೀಯ ಪ್ರಯೋಗಾಲಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಆಎಂಟಿ ವಿಶ್ವವಿದ್ಯಾಲಯ ಮತ್ತು ಆಸ್ಟ್ರೇಲಿಯ ನ್ಯಾಷನಲ್ ವಿಶ್ವವಿದ್ಯಾಲಯದ ಸಂಶೋಧನಾ ತಂಡದವರು.

    ಇದನ್ನೂ ಓದಿ: ಮದ್ವೆಯಾಗಲು ‘ಎಸ್’​ ಹುಡುಗೀನ್ನ ಹುಡುಕುತ್ತಿದ್ದಾನೀತ- ಮೂರು ಹೆಂಡ್ತಿಯರೂ ನೀಡ್ತಿದ್ದಾರೆ ಸಾಥ್​!

    ಮನುಷ್ಯರು ಇದನ್ನು ತಯಾರಿಸಿರುವ ಕಾರಣ ಇದನ್ನು ಕೃತಕ ವಜ್ರ ಎನ್ನಬಹುದಾದರೂ, ನಿಸರ್ಗದ ವಜ್ರದ ಎಲ್ಲಾ ಗುಣಗಳನ್ನೂ ಇದು ಹೊಂದಿದೆಯಂತೆ!

    ಒಂದು ಸಾವಿರ ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿನ ತಾಪಮಾನದಲ್ಲಿ ನೈಸರ್ಗಿಕ ವಜ್ರಗಳು ರೂಪುಗೊಳ್ಳಲು ಸಾಮಾನ್ಯವಾಗಿ ಶತಕೋಟಿ ವರ್ಷಗಳೇ ಬೇಕಾಗುತ್ತವೆ! ಆದರೆ ಈಗ ವಿಜ್ಞಾನಿಗಳ ಸಂಶೋಧನಾ ತಂಡವೊಂದು ಸಾಮಾನ್ಯ ಕೋಣೆಯ ತಾಪಮಾನದಲ್ಲಿ ವಜ್ರವನ್ನು ತಯಾರಿಸಿದ್ದಾರೆ. ಈ ವಿಜ್ಞಾನಿಗಳು 100 ಜಿಪಿಎ ಒತ್ತಡ ಮೂಲಕ ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ‘ಲಾನ್ಸ್ ಡೇಲೈಟ್’ ಮತ್ತು ‘ಸಾಮಾನ್ಯ ವಜ್ರ’(ಸಾಮಾನ್ಯವಾಗಿ ಉಂಗುರದಲ್ಲಿ ಕಂಡುಬರುವ) ತಯಾರಿಸಿದ್ದಾರೆ.

    ಕುಡಿದುಬಂದು ಅಪ್ಪ ನನ್ನನ್ನು ಹೊಡೆಯುತ್ತಿದ್ದ… ಅತ್ಯಾಚಾರ ಮಾಡುತ್ತಿದ್ದ…. 9ರ ಬಾಲೆಯ ಹೇಳಿಕೆ

    ಕಾಂಗ್ರೆಸ್‌ ಮುಖಂಡನ ಪತ್ನಿ ಜತೆ ಇನ್ನೋರ್ವ ಕಾಂಗ್ರೆಸ್‌ ಮುಖಂಡ ಪರಾರಿ! ಬಯಲಾಯ್ತು ಸತ್ಯ…

    42 ಲೀಟರ್​ ಎದೆಹಾಲು ನೀಡಿ ‘ಮಹಾತಾಯಿ’ ಎನಿಸಿಕೊಂಡ ನಿರ್ಮಾಪಕಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts