More

    16 ವರ್ಷಗಳ ಬಳಿಕ ಸಿಕ್ಕಿತು ಯೋಧನ ಶವ: ಮಗ ಬದುಕಿದ್ದಾನೆಂಬ ನಿರೀಕ್ಷೆಯಲ್ಲೇ ಮೃತಪಟ್ಟ ಅಪ್ಪ-ಅಮ್ಮ

    ಗಾಜಿಯಾಬಾದ್‌: 2005ರಲ್ಲಿ ಸಿಯಾಚಿನ್ ಬೆಟ್ಟದ ಮೇಲೆ ತ್ರಿವರ್ಣ ಹಾರಿಸಲು ಹೋದ ಸಂದರ್ಭದಲ್ಲಿ ನಡೆದ ಹಿಮಪಾತದಿಂದ ಮೃತಪಟ್ಟ ಗಾಜಿಯಾಬಾದ್‌ನ ಮುರಾದನಗರ ಪ್ರದೇಶದ ಹಿಸಾಲಿ ಗ್ರಾಮದ ಯೋಧ ಅಮರೀಶ್‌ ತ್ಯಾಗಿ ಅವರ ಶವ 16 ವರ್ಷಗಳ ಬಳಿಕ ಇದೀಗ ಪತ್ತೆಯಾಗಿದೆ.

    ಪರ್ವತಾರೋಹಿ ಕೂಡ ಆಗಿದ್ದ ಅಮರೀಶ್‌ ಕಾರ್ಗಿಲ್‌ ಯುದ್ಧದಲ್ಲಿಯೂ ಕೆಚ್ಚೆದೆಯಿಂದ ಹೋರಾಡಿದ ಯೋಧ. ತಮ್ಮ ತಂಡದೊಂದಿಗೆ ಧ್ವಜ ಹಾರಿಸಲು ಸಿಯಾಚಿನ್‌ನ ಮೇಲ್ಭಾಗಕ್ಕೆ ಹೋಗಿದ್ದರು. ಹಿಮಾಲಯ ಮತ್ತು ಸಿಯಾಚಿನ್ ಮೂಲಕ ಹಾದುಹೋಗುವ ಅತ್ಯುನ್ನತ ಶಿಖರದ ಮೇಲೆ ಹಲವಾರು ಬಾರಿ ತ್ರಿವರ್ಣ ಧ್ವಜ ಹಾರಿಸಿದ್ದರು. ಬರುವಾಗ ಹಿಮಪಾತದಿಂದಾಗಿ ಕೆಲವು ಯೋಧರು ಹಿಮದಲ್ಲಿ ಹೂತೇ ಹೋಗಿದ್ದರು.

    ಈ ಸಂದರ್ಭದಲ್ಲಿ ನಡೆದ ಶೋಧ ಕಾರ್ಯದಲ್ಲಿ ಮೂವರು ಸೈನಿಕರ ಮೃತದೇಹ ಮಾತ್ರ ಸಿಕ್ಕಿತ್ತು. ಆದರೆ ಅಮರೀಶರ್‌ ಸೇರಿದಂತೆ ಕೆಲವು ಯೋಧರ ದೇಹ ಸಿಕ್ಕಿರಲಿಲ್ಲ. ಇದರಿಂದ ತಮ್ಮ ಮಗ ಬದುಕಿದ್ದಾನೆ ಎಂದೇ ಅವರ ಅಪ್ಪ-ಅಮ್ಮ ನಿರೀಕ್ಷೆಯಿಂದ ಕಾಯುತ್ತಿದ್ದರು. ಮಗ ಬಂದೇ ಬರುತ್ತಾನೆ ಎಂದು ಅವರು ಆಸೆಕಂಗಳಿನಿಂದ 15 ವರ್ಷ ಕಾಯುತ್ತಲೇ ಇದ್ದರು.

    ಆದರೆ ಇದೀಗ ಅಂದರೆ 16 ವರ್ಷಗಳ ಬಳಿಕ ಸೇನೆಯು ಅಮರೀಶ್​ ಮೃತದೇಹವನ್ನು ಪತ್ತೆ ಹಚ್ಚಿದೆ. ಅವರ ಸ್ವಗ್ರಾಮಕ್ಕೆ ನಾಳೆ (ಮಂಗಳವಾರ) ತಲುಪಲಿದೆ. ಅಪ್ಪ- ಅಮ್ಮನಂತೆಯೇ ಕುಟುಂಬಸ್ಥರು ಹಾಗೂ ಅವರ ಸ್ನೇಹಿತರು ಕೂಡ ಅಮರೀಶ್‌ ಬದುಕುಳಿದಿರುವ ಒಂದಿನಿತು ಆಸೆ ಇಟ್ಟುಕೊಂಡಿದ್ದರು. ಆದರೆ ಇದೀಗ ಅವರ ಶರೀರ ಸಿಕ್ಕ ಸುದ್ದಿ ಕೇಳುತ್ತಿದ್ದಂತೆಯೇ ಗ್ರಾಮದ ಜನರಲ್ಲಿ ಶೋಕ ಮೂಡಿದೆ.

    ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧನ ಅಂತ್ಯಕ್ರಿಯೆ ನಡೆಯಲಿದೆ. ಆದರೆ ದುರದೃಷ್ಟ ಎಂದರೆ ಮಗನ ಬರುವಿಕೆಯನ್ನೇ ಕಾಯುತ್ತಿದ್ದ ಅಮರೀಶ್‌ ಅವರ ಅಪ್ಪ-ಅಮ್ಮ ಮಾತ್ರ ಮಗನಿಗಾಗಿ ಕಾದು ಇಹಲೋಕ ತ್ಯಜಿಸಿದ್ದಾರೆ. ಮಗನ ಮೃತದೇಹವನ್ನೂ ನೋಡಲು ಅವರಿಗೆ ಸಾಧ್ಯವಾಗಲಿಲ್ಲ.

    ಗುಲಾಬ್‌ ಚಂಡಮಾರುತ: ಮೀನುಗಾರರು ನಾಪತ್ತೆ- ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ

    ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts