More

    ಉತ್ತಮ ಶರೀರ ಸಂಪತ್ತು ಗಳಿಸಿಕೊಳ್ಳಲಿ

    ಉಪ್ಪಿನಬೆಟಗೇರಿ: ನಾಗರಿಕರು ದುಶ್ಚಟಗಳಿಗೆ ದಾಸರಾಗದೆ, ಉತ್ತಮ ಶರೀರ ಸಂಪತ್ತು ಹೊಂದುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.


    ಅಮ್ಮಿನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಹುಬ್ಬಳ್ಳಿಯ ಕ್ಷಮತಾ ಸೇವಾ ಸಂಸ್ಥೆ, ಧಾರವಾಡದ ಎಸ್​ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯ ಆಶ್ರಯದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.


    ಸದೃಢ ಶರೀರ ಹೊಂದಲು ನಿತ್ಯ ವ್ಯಾಯಾಮ, ಯೋಗ ಮೈಗೂಡಿಸಿಕೊಳ್ಳಬೇಕು. ಮಿತ ಅಹಾರ ಸೇವಿಸುವುದರ ಜತೆಗೆ ಪೌಷ್ಟಿಕಾಂಶಯುಳ್ಳ ಹಣ್ಣು, ತರಕಾರಿ ಸೇವಿಸಬೇಕು ಎಂದರು. ಈಗಾಗಲೇ ಎಸ್​ಡಿಎಂ ಆಸ್ಪತ್ರೆಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ರ್ಚಚಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಯನ್ನು ನುರಿತ ವೈದ್ಯರಿಂದ ಕೊಡಿಸಲಾಗುವುದು ಎಂದರು.


    ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯನ ಶರೀರ ಸಕಲ ರೋಗಗಳ ಗೂಡಾಗಿದೆ. ಅತಿಯಾದ ಆಹಾರ ಸೇವನೆ, ದುಶ್ಚಟಗಳಿಗೆ ಅಂಟಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮನುಷ್ಯನಿಗೆ ಆರೋಗ್ಯ ಸಂಪತ್ತು ಶ್ರೇಷ್ಠ. ಗ್ರಾಮದಲ್ಲಿ ಆಯೋಜಿಸಿರುವ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದು ಆರೋಗ್ಯವಂತರಾಗಿರಿ ಎಂದರು.


    ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಎಸ್​ಡಿಎಂ ಸಮುದಾಯ ಕೇಂದ್ರದ ಪ್ರಾಧ್ಯಾಪಕಿ ವಂದನಾ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ರಾಜಣ್ಣ ಕೊರವಿ ಮಾತನಾಡಿದರು.


    ಈ ವೇಳೆ ಶ್ರೀೕರಾಮ ಹಾಗೂ ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರಾಮ ಸೀತೆಯರ ವೇಶ ತೊಟ್ಟು ರಾಮಾಯಣ ಸನ್ನಿವೇಶ ಪ್ರಚುರ ಪಡಿಸಿದ ಮಕ್ಕಳನ್ನು ಕೇಂದ್ರ ಸಚಿವರು ಸನ್ಮಾನಿಸಿದರು. 1250ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆಗೊಳಗಾದರು. ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲವ್ವ ತಿದಿ, ಉಪಾಧ್ಯಕ್ಷ ವಿಠ್ಠಲ ಬೋವಿ, ಗಂಗಾಧರ ಪಾಟೀಲ ಕುಲಕರ್ಣಿ, ರುದ್ರಪ್ಪ ಅರಿವಾಳ, ಶಶಿಮೌಳಿ ಕುಲಕರ್ಣಿ, ಮಂಜುನಾಥ ಕಮ್ಮಾರ, ಎಂ.ಸಿ. ಹುಲ್ಲೂರ, ಯಲ್ಲಪ್ಪ ಜಾನಕುನವರ, ಸುನೀಲ ಗುಡಿ, ವಸಂತ ಪದಕಿ, ಶಂಕರ ಕೋಮಾರ ದೇಸಾಯಿ, ಜಗದೀಶ ಕುಸುಗಲ್ಲ, ಮೌನೇಶ ಪತ್ತಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts