More

    ‘ಕ್ರಿಸ್ಮಸ್​ಗೆ ವಿಷ್ಣುಸಹಸ್ರನಾಮ ಪಾರಾಯಣ, ಈದ್​ಗೆ ಗಣಹೋಮ ಮಾಡ್ತಾರಾ?’

    ಬೆಂಗಳೂರು: ಕಾಂಗ್ರೆಸ್​ ಶಾಸಕಿ ಸೌಮ್ಯಾ ರೆಡ್ಡಿ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಆಯುಧ ಪೂಜೆಯ ಚಿತ್ರಗಳನ್ನು ಟ್ವೀಟ್​ ಮಾಡಿರುವುದು ಇದೀಗ ಭಾರಿ ಚರ್ಚೆಯಾಗುತ್ತಿದೆ. ಪರ-ವಿರೋಧಗಳ ಅಲೆ ಎದ್ದಿದೆ.

    ಬೆಂಗಳೂರಿನ ಜಯನಗರದ ಶಾಸಕರ ಕಚೇರಿಯಲ್ಲಿ , ನನ್ನ ತಂದೆ ಬಿಟಿಎಂ ಶಾಸಕರಾದ ರಾಮಲಿಂಗ ರೆಡ್ಡಿ ಜತೆ ಆಯುಧ ಪೂಜೆ ನೆರವೇರಿಸಿ, ಪವಿತ್ರ ಸಂವಿಧಾನ ಗ್ರಂಥಕ್ಕೆ ಪೂಜೆ ಸಲ್ಲಿಸಲಾಯಿತು ಎಂಬ ಒಕ್ಕಣೆ ಇರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ ಸೌಮ್ಯಾ. ಫೋಟೋದಲ್ಲಿ ಗಣಪತಿಯ ಜತೆಗೆ, ಏಸು ಹಾಗೂ ಅಲ್ಹಾನ ಫೋಟೋಗಳೂ ಇವೆ.

    'ಕ್ರಿಸ್ಮಸ್​ಗೆ ವಿಷ್ಣುಸಹಸ್ರನಾಮ ಪಾರಾಯಣ, ಈದ್​ಗೆ ಗಣಹೋಮ ಮಾಡ್ತಾರಾ?'ಇದನ್ನು ರೀಟ್ವೀಟ್​ ಮಾಡುವ ಮೂಲಕ ಕಮೆಂಟ್​ ಹಾಕಿರುವ ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್, ಹಾಗಿದ್ದರೆ, ಮುಂದಿನ ಕ್ರಿಸ್ಮಸ್​ಗೆ ವಿಷ್ಣುಸಹಸ್ರನಾಮ ಪಾರಾಯಣ ಮತ್ತು ಈದ್​ಗೆ ಗಣಹೋಮ ಮಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

    ಸೌಮ್ಯಾ ರೆಡ್ಡಿ ಹಾಗೂ ಮಾಳವಿಕಾ ಇಬ್ಬರ ಹೇಳಿಕೆಗಳು ಹಾಗೂ ಫೋಟೋಗಳ ಪರ-ವಿರೋಧದ ಅಲೆ ಟ್ವಿಟರ್​ನಲ್ಲಿ ಸದ್ದು ಮಾಡುತ್ತಿದೆ.

    ಮಾಳವಿಕಾ ಅವರಿಗೆ ತಿರುಗೇಟು ನೀಡಿರುವ ಸೌಮ್ಯಾ ರೆಡ್ಡಿ, ನೀವು ಕೋವಿಡ್‌ ಟಾಸ್ಕ್ ಫೋರ್ಸ್‌ ಸರಿಯಾಗಿ ನೋಡಿಕೊಳ್ಳಿ ಮೊದಲು. 8 ಲಕ್ಷಕ್ಕೂ ಹೆಚ್ಚು ಸೋಂಕಿತರು ಇದ್ದಾರೆ, 10,905 ಸಾವು ಸಂಭವಿಸಿದೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಈ ರೀತಿ ಬೆರಕೆ ಪೂಜೆ ಮಾಡೋಕೆ‌ ಗೌನ್ ಅಥವಾ ಬುರ್ಕಾ ಹಾಕಿದ್ರೆ ಆಗ್ತಾ ಇರಲಿಲ್ವಾ? ಸೀರೆ ಏಕೆ ಬೇಕಿತ್ತು ಎಂದು ಸುಷ್ಮಾ ಎನ್ನುವವರು ಕಿಡಿ ಕಾರಿದ್ದರೆ, ಇದು ಭಾರತ. ಇಲ್ಲಿ ದರ್ಗಾಕ್ಕೆ ನಮಿಸುವ ಹಿಂದೂಗಳೂ ಇದ್ದಾರೆ, ದೇವಸ್ಥಾನಕ್ಕೆ ಹೋಗುವ ಮುಸ್ಲಿಮರು ಇದ್ದಾರೆ. ಆದರೆ ನಿಮ್ಮಂಥ ಕೋಮುವಾದಿಗಳ ಕಣ್ಣಿಗೆ ಕಾಣೋದಿಲ್ಲ, ಕಂಡರೂ ಒಪ್ಪುವ ಮನಸ್ಸು ನಿಮ್ಮಲ್ಲಿಲ್ಲ ಎಂದು ಪಿ.ವಿ.ಶೆಟ್ಟರ್​ ಎನ್ನುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಕೆಲವರು ಸೌಮ್ಯಾ ಪರವಾಗಿ, ಮತ್ತೆ ಕೆಲವರು ಮಾಳವಿಕಾ ಪರವಾಗಿ ಕಮೆಂಟ್​ ಮಾಡುತ್ತಿದ್ದಾರೆ.

    ಸೆಕ್ಸ್​ ದಂಧೆಗೆ ಆನ್​ಲೈನ್​ನಲ್ಲಿರುವ ಮಕ್ಕಳೇ ಟಾರ್ಗೆಟ್​- ಖತರ್ನಾಕ್​ ನಟ ಸಿಬಿಐ ಬಲೆಗೆ

    ನೀನಿಲ್ಲದ ಮೇಲೆ ನಾನ್ಯಾಕೆ ಬದುಕಲಿ? ಸ್ನೇಹಿತೆಯ ಸಮಾಧಿಯ ಬಳಿಯೇ ಆತ್ಮಹತ್ಯೆ!

    ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವನಿಗೆ ಮೂರು ವರ್ಷ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts