More

    ನಾಳೆಯಿಂದ ಸಾರ್ವಜನಿಕರಿಗೂ ಕರೊನಾ ಲಸಿಕೆ ಭಾಗ್ಯ- ಎಲ್ಲಿ? ಹೇಗೆ? ಯಾರಿಗೆ? ಇಲ್ಲಿದೆ ಮಾಹಿತಿ…

    ಬೆಂಗಳೂರು: ಕರೊನಾ ಲಸಿಕೆ ಇದಾಗಲೇ ಭಾರತ ಪ್ರವೇಶಿಸಿ ಹಲವು ದಿನಗಳೇ ಕಳೆದಿವೆ. ಇದೀಗ ಕರ್ನಾಟಕಕ್ಕೂ ಕಾಲಿಟ್ಟು, ನಾಳೆಯಿಂದ (ಮಾರ್ಚ್‌1) ಸಾರ್ವಜನಿಕರ ಸೇವೆಗೂ ಲಭ್ಯ ಆಗಲಿದೆ. ಹಾಗಿದ್ದರೆ ಇದನ್ನು ಸದ್ಯ ಯಾರು ಪಡೆಯಬಹುದು? ಹೇಗೆ ಪಡೆಯಬೇಕು? ಎಲ್ಲಿ ಸಿಗಲಿದೆ ಇತ್ಯಾದಿ ಮಾಹಿತಿ ಇಲ್ಲಿದೆ ನೋಡಿ…

    ದೇಶಾದ್ಯಂತ ನಾಳೆ ಬೆಳಗ್ಗೆ 9 ಗಂಟೆಯಿಂದ ನೋಂದಣಿ ಕಾರ್ಯಕ್ರಮ ಶುರುವಾಗಲಿದ್ದು, ಕರ್ನಾಟಕ ರಾಜ್ಯದ 200 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ. ಲಸಿಕೆ ಪಡೆಯ ಬಯಸುವವರಿಗೆ ಕೆಲವೊಂದು ಮಾರ್ಗಸೂಚಿ ನೀಡಲಾಗಿದೆ. ಅದನ್ನು ಪಾಲನೆ ಮಾಡಬೇಕು.

    * ಕೊ-ವಿನ್ 2.0 ಆ್ಯಪ್, ಆರೋಗ್ಯ ಸೇತು ಆ್ಯಪ್‍ಗಳಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು ಅಥವಾ ಆನ್‍ಲೈನ್ ನೋಂದಣಿ ಮಾಡದವರು ಲಸಿಕಾ ಕೇಂದ್ರಗಳಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    * ಲಸಿಕೆ ಪಡೆಯಬಯಸುವವರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ (ವೋಟರ್ ಐಡಿ) ಇವುಗಳನ್ನು ದಾಖಲೆ ರೂಪದಲ್ಲಿ ನೀಡಬೇಕು. 45-59 ವರ್ಷದವರಿಗೆ ಮೆಡಿಕಲ್ ಸರ್ಟಿಫಿಕೇಟ್ ಕಡ್ಡಾಯ. ಇನ್ನು ಆರೋಗ್ಯ ಕಾರ್ಯಕರ್ತರು ಎಂಪ್ಲಾಯಿಮೆಂಟ್ ಕಾರ್ಡ್ ಒದಗಿಸಬೇಕು.

    * ಸದ್ಯ ಮೊದಲ ಹಂತದಲ್ಲಿ 60 ವರ್ಷ ವಯಸ್ಸಾದರು ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ ಈ ಲಸಿಕೆ ನೀಡಲಾಗುತ್ತದೆ.

    * 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ (ಉದಾ: ಮಧುಮೇಹ, ಹೃದ್ರೋಗ, ಬಿಪಿ, ಕ್ಯಾನ್ಸರ್, ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು… ಇತ್ಯಾದಿ) ಇರುವವರಿಗೆ ಲಸಿಕೆ ನೀಡಲಾಗುವುದು. ಆದರೆ ಗಂಭೀರ ಕಾಯಿಲೆ ಇದ್ದವರಿಗೆ ಸದ್ಯ ಇದನ್ನು ನೀಡಲಾಗುವುದಿಲ್ಲ.

    * ಸರ್ಕಾರಿ ಆಸ್ಪತ್ರೆಯಲ್ಲಿ ಲಸಿಕೆ ಉಚಿತವಾಗಿ ಸಿಗಲಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಬೇಕು ಎಂದರೆ ಅದಕ್ಕೆ 250 ರೂ. ನಿಗದಿ ಮಾಡಲಾಗಿದೆ. ಈ ಹಣವು 150 ರೂ. ಲಸಿಕೆ ಹಾಗೂ 100 ರೂ. ಸೇವಾ ಶುಲ್ಕವನ್ನು ಒಳಗೊಂಡಿದೆ. ಒಂದು ಡೋಸ್‌ಗೆ ಈ ಹಣ ನಿಗದಿ ಮಾಡಲಾಗಿದೆ.

    * ಬೆಂಗಳೂರಿನಲ್ಲಿ 198 ವಾರ್ಡ್‌ಗಳಲ್ಲಿ ಲಸಿಕೆ ಲಭ್ಯ. ಒಂದೊಂದು ವಾರ್ಡ್‌ಗೆ ಮೂರು ಗುಂಪುಗಳು ಇದ್ದು, ಇವು ಮೊದಲು ಸರ್ವೆ ಮಾಡಲಿವೆ. ಪ್ರತಿ ತಂಡವು ಮೊದಲು ಕೊಳಗೇರಿ ನಿವಾಸಿಗಳಿಗೆ ಆದ್ಯತೆ ನೀಡಲಾಗಿದೆ. ನಂತರ ಮುಂದಿನ 10 ದಿನಗಳಲ್ಲಿ ಸರ್ವೆ ಮುಗಿಸಲು ಪಾಲಿಕೆ ಯೋಜನೆ ರೂಪಿಸಿದೆ. 1 ಕೋಟಿ 30 ಲಕ್ಷ ಜನರ ಆರೋಗ್ಯ ಕಾರ್ಡ್ ರೆಡಿ ಮಾಡಲು ಸಿದ್ಧತೆ ನಡೆದಿದ್ದು, ಖಾಸಗಿ ಆಸ್ಪತ್ರೆಗಳಿಗೆ 1 ದಿನದ ಆನ್‍ಲೈನ್ ತರಬೇತಿ ಲಿಂಕ್ ಮೂಲಕ ಸಲಹೆಗಳನ್ನ ನೀಡಲಾಗುತ್ತದೆ. ಸದ್ಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳು ವ್ಯಾಕ್ಸಿನ್ ಹಂಚಿಕೆಗೆ ಸಿದ್ಧಗೊಂಡಿವೆ.

    60 ದೇಶಗಳಿಗೆ ಕರೊನಾ ಲಸಿಕೆ: ಜಗತ್ತಿನ ಕಣ್ಣು ಭಾರತದತ್ತ- ಪ್ರಧಾನಿಯನ್ನು ಹಾಡಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ

    ಹೀಗೊಂದು ಆತ್ಮೀಯ ಬೀಳ್ಕೊಡುಗೆ: ಪೊಲೀಸ್‌ ವ್ಯಾನ್‌ನ ಬಾನೆಟ್‌ ಮೇಲೆ ಕುಳ್ಳರಿಸಿ ಊರೆಲ್ಲಾ ನಡೆಯಿತು ಮೆರವಣಿಗೆ

    ದಪ್ಪ ಇದ್ದೀನಿ ಎಂದು ಪತಿ ಮುಟ್ಟುತ್ತಿಲ್ಲ… ಡಿವೋರ್ಸ್‌ ಕೊಡು ಎಂದು ಹಿಂಸಿಸುತ್ತಿದ್ದಾರೆ, ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts